ETV Bharat / bharat

ತಪ್ಪಿದ ಭಾರಿ ಅನಾಹುತ: ಸೈಮು ಪ್ರದೇಶದಲ್ಲಿ ಇರಿಸಿದ್ದ ಸುಧಾರಿತ ಸ್ಫೋಟಕ ವಶಕ್ಕೆ ಪಡೆದ ಸೇನೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಟ್ರಾಲ್​ನ ಸೈಮು ಪ್ರದೇಶದ ಬಳಿ ಭಯೋತ್ಪಾದಕರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನವನ್ನು ಸೇನೆ ವಶಪಡಿಸಿಕೊಂಡಿದ್ದು, ಸಂಭವಿಸಬಹುದಾದ ಬಹುದೊಡ್ಡ ದುರಂತವನ್ನು ತಪ್ಪಿಸಿದೆ.

ಸುಧಾರಿತ ಸ್ಪೋಟಕ ವಶ
ಸುಧಾರಿತ ಸ್ಪೋಟಕ ವಶ
author img

By

Published : Jun 7, 2021, 3:34 PM IST

ಪುಲ್ವಾಮಾ (ಜಮ್ಮು- ಕಾಶ್ಮೀರ): ಇಲ್ಲಿನ ಟ್ರಾಲ್​ನ ಸೈಮು ಪ್ರದೇಶದ ಬಳಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡಿದ್ದು, ಸಂಭವಿಸಬಹುದಾದ ಬಹುದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಐಇಡಿ ನಿಷ್ಕ್ರಿಯಗೊಳಿಸಲು ಬಾಂಬ್​ ಡಿಸ್ಪೋಸಲ್​ ದಳ ಸ್ಥಳಕ್ಕೆ ಧಾವಿಸಿದೆ ಎಂದರು. ಭಾನುವಾರದಂದು ಪುಲ್ವಾಮಾದ ಟ್ರಾಲ್‌ನ ಬಸ್ ನಿಲ್ದಾಣದಲ್ಲಿ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ನಾಕಾ ಪಾರ್ಟಿಯಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಸುಮಾರು 7 ನಾಗರಿಕರು ಗಾಯಗೊಂಡಿದ್ದರು.

ಇದನ್ನು ಓದಿ: ಇಂದು ಸಂಜೆ 5 ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಶನಿವಾರದಂದು ಸರ್ಪಂಚ್ ಒಬ್ಬರ ಮನೆಯ ಬಳಿಯೂ ಕಡಿಮೆ ತೀವ್ರತೆಯ ಬಾಂಬ್​ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಬುಧವಾರ ರಾತ್ರಿ ಬಿಜೆಪಿ ಕೌನ್ಸಿಲರ್ ರಾಕೇಶ್ ಪಂಡಿತ್​ ಅವರನ್ನು ತ್ರಾಲ್‌ನಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.