ಎರ್ನಾಕುಲಂ: ಎಲೂರಿನ ಐಶ್ವರ್ಯಾ ಜ್ಯುವೆಲ್ಲರ್ಸ್ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು 3 ಕೆ.ಜಿ. ಚಿನ್ನ ಮತ್ತು 25 ಕೆ.ಜಿ. ಬೆಳ್ಳಿ ಲೂಟಿ ಮಾಡಿದ್ದಾರೆ.
ಆಭರಣ ಮಳಿಗೆ ಪಕ್ಕದ ಕ್ಷೌರಿಕನ ಅಂಗಡಿಯ ಗೋಡೆ ಕೊರೆದ, ಕಳ್ಳರು ಒಳ ನುಗ್ಗಿ ಕೋಟ್ಯಂತರ ಮೌಲ್ಯದ ಚಿನ್ನ- ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.
ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಕದ್ದವರ ನಿಖರ ಮಾಹಿತಿ ತಿಳಿದು ಬಂದಿಲ್ಲ. ಭಾನುವಾರ ಆಭರಣ ಅಂಗಡಿ ಮುಚ್ಚಿತ್ತು ಎಂದು ವರದಿಯಾಗಿದೆ. ಸಿಸಿಟಿವಿ ಕ್ಯಾಮರಾ ಕೂಡ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.