ETV Bharat / bharat

ಕೇರಳದಲ್ಲಿ ಘಟಿಸಿದ ಪ್ರಮುಖ 'ದೋಣಿ ದುರಂತ'ಗಳಿವು!

ಕೇರಳವನ್ನು ತಲ್ಲಣಗೊಳಿಸಿದ ಪ್ರಮುಖ 'ದೋಣಿ ದುರಂತ'ಗಳ ವಿವರ ಹೀಗಿದೆ..

author img

By

Published : May 8, 2023, 9:40 AM IST

Boat disasters in Kerala
ದೋಣಿ ದುರಂತ

ತಿರುವನಂತಪುರಂ: ಮಲಪ್ಪುರಂ ಬಳಿಯ ತಾನೂರ್‌ ಎಂಬಲ್ಲಿ ಭಾನುವಾರ ಡಬಲ್ ಡೆಕ್ಕರ್ ಮನರಂಜನಾ ದೋಣಿ ಪಲ್ಟಿಯಾಗಿ ಹಲವರನ್ನು ಬಲಿ ತೆಗೆದುಕೊಂಡಿದ್ದು, ಇದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿರುವ ಮತ್ತೊಂದು ದುರಂತ. ಕಳೆದೆರಡು ದಶಕಗಳಲ್ಲಿ ರಾಜ್ಯವು ಹಲವಾರು ದೋಣಿ ದುರಂತಗಳಿಗೆ ಸಾಕ್ಷಿಯಾಗಿದೆ. ಇದು ಅನೇಕರ ಪ್ರಾಣವನ್ನು ಆಪೋಶನ ತೆಗೆದುಕೊಂಡಿದೆ.

ಪ್ರತಿ ದೋಣಿ ದುರಂತದ ನಂತರ ಕೇರಳ ಸರ್ಕಾರ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಬಿಗಿಗೊಳಿಸುತ್ತದೆ. ಆದರೆ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ದೋಣಿ ದುರಂತದಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಈವರೆಗೆ ಘಟಿಸಿದ ಪ್ರಮುಖ 'ದೋಣಿ ದುರಂತ'ಗಳನ್ನು ನೋಡುವುದಾದರೆ...

ಪಲ್ಲನಾ ನದಿ ದುರಂತ: 1924ರ ಜನವರಿ 24ರಂದು ರಾತ್ರಿ 10.30ಕ್ಕೆ ಪಲ್ಲನಾ ನದಿಯಲ್ಲಿ ದುರಂತ ಸಂಭವಿಸಿತ್ತು. ರಾಜ್ಯದ ಖ್ಯಾತ ಕವಿ ಕುಮಾರನ್ ಆಸನ್ ಅವರು ಪ್ರಾಣ ಕಳೆದುಕೊಂಡಿದ್ದರು. ಕೊಲ್ಲಂನಿಂದ ಕೊಟ್ಟಾಯಂಗೆ ಹೊರಟ ಬೋಟ್ ಪಲ್ಲನಾ ನದಿಯಲ್ಲಿ ಮುಳುಗಿತ್ತು. ಅವಘಡದಲ್ಲಿ ಸಾವನಪ್ಪಿದ್ದ 24 ಮಂದಿ ಪ್ರಯಾಣಿಕರಲ್ಲಿ ಕುಮಾರನ್ ಕೂಡ ಒಬ್ಬರು. 95 ಜನರನ್ನು ಸಾಗಿಸಬಲ್ಲ ದೋಣಿಯಲ್ಲಿ 150ಕ್ಕೂ ಹೆಚ್ಚು ಮಂದಿ ಹತ್ತಿದ್ದೇ ಅಪಘಾತಕ್ಕೆ ಕಾರಣ ಎಂದು ವರದಿಯಾಗಿತ್ತು.

ಕನ್ನಮಲ್ಲಿ ದುರಂತ: 1980ರಲ್ಲಿ ಕೊಚ್ಚಿಯ ಕನ್ನಮಲ್ಲಿಯಲ್ಲಿ ಸ್ಥಳೀಯ ಚರ್ಚ್‌ನ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 29 ಜನರು ಸಾವನ್ನಪ್ಪಿದ್ದರು.

ಕುಮಾರಕೋಮ್ ದುರಂತ : ಜುಲೈ 27, 2002 ರಂದು ಅಲಪ್ಪುಳದ ಮುಹಮ್ಮದಿಂದ ಹೊರಟಿದ್ದ ಕೇರಳ ಜಲಸಾರಿಗೆ ಇಲಾಖೆಯ A53 ದೋಣಿಯು ವೆಂಬನಾಡ್ ಸರೋವರದಲ್ಲಿ ಮುಳುಗಿ 29 ಜನರನ್ನು ಬಲಿ ತೆಗೆದುಕೊಂಡಿತ್ತು. ಮೃತರಲ್ಲಿ 15 ಮಹಿಳೆಯರು ಮತ್ತು ಒಂಬತ್ತು ತಿಂಗಳ ಮಗು ಸೇರಿದ್ದರು.

ತಟ್ಟೆಕಾಡ್ ದುರಂತ: ಫೆಬ್ರವರಿ 20, 2007 ರಂದು ಸಂಭವಿಸಿದ ತಟ್ಟೆಕಾಡ್ ದೋಣಿ ದುರಂತವು ಕೇರಳದ ಇತಿಹಾಸದಲ್ಲಿ ಅತ್ಯಂತ ನೋವಿನ ಘಟನೆ. ಎಳವೂರ್‌ನ ಸೇಂಟ್ ಆಂಟೋನಿ ಯುಪಿ ಶಾಲೆಯಿಂದ ವಿಹಾರಕ್ಕೆ ಹೋಗುತ್ತಿದ್ದ 15 ಮಕ್ಕಳು ಮತ್ತು ಮೂವರು ಶಿಕ್ಷಕರು ಸೇರಿ 18 ಮಂದಿ ಸಾವನ್ನಪ್ಪಿದ್ದರು. ತಟ್ಟೆಕಾಡ್ ಪಕ್ಷಿಧಾಮದಲ್ಲಿ ಸಂಭವಿಸಿದ ಈ ದುರಂತಕ್ಕೆ ಬೋಟ್‌ನಲ್ಲಿ ಹೆಚ್ಚು ಜನರನ್ನು ಹಾಕಿದ್ದೇ ಕಾರಣ ಎಂದು ತನಿಖಾ ವರದಿ ಹೇಳಿತ್ತು.

ತೆಕ್ಕಡಿ ದುರಂತ(2009): ಕೇರಳವನ್ನು ತಲ್ಲಣಗೊಳಿಸಿದ ತೆಕ್ಕಡಿ ದೋಣಿ ಅಪಘಾತ 30 ಸೆಪ್ಟೆಂಬರ್ 2009 ರಂದು ಸಂಭವಿಸಿತು. ಆ ದಿನ ತೆಕ್ಕಡಿ ಸರೋವರದಲ್ಲಿ ದೋಣಿ ಮುಳುಗಿ 45 ಜನರು ಸಾವನ್ನಪ್ಪಿದರು. ಅವೈಜ್ಞಾನಿಕವಾಗಿ ಬೋಟ್ ನಿರ್ಮಿಸಿರುವುದು ಹಾಗೂ ಹೆಚ್ಚು ಜನರನ್ನು ಹೊತ್ತೊಯ್ದಿರುವುದು ಅವಘಡಕ್ಕೆ ಕಾರಣ ಎನ್ನಲಾಗಿತ್ತು. 'ಜಲಕನ್ಯಕಾ' ಎಂಬ ಡಬಲ್ ಡೆಕ್ಕರ್ ಪ್ರಯಾಣಿಕ ದೋಣಿ ಮುಲ್ಲಪೆರಿಯಾರ್ ಜಲಾಶಯದ ಆಳವಾದ ಭಾಗಗಳಲ್ಲಿ (ಸುಮಾರು 100 ಮೀ ಆಳ) ಮುಳುಗಿತ್ತು. ದೋಣಿಯಲ್ಲಿ 80ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ತನಿಖೆಯ ನಂತರ ಅಪಘಾತಕ್ಕೆ ಓವರ್‌ಲೋಡ್ ಕಾರಣ ಎಂದು ತಿಳಿದು ಬಂದಿತ್ತು. ಗರಿಷ್ಠ ಸಾಮರ್ಥ್ಯ 75 ಆಗಿದ್ದರೆ, ದೋಣಿಯಲ್ಲಿ 87 ಜನರಿದ್ದರು ಮತ್ತು ಯಾವುದೇ ಪ್ರಯಾಣಿಕರಿಗೆ ಯಾವುದೇ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗಿಲ್ಲ. ಪ್ರಕರಣದಲ್ಲಿ ದೋಣಿಯ ಮಾಲೀಕ ವಿಕ್ಟರ್ ಸ್ಯಾಮ್ಯುಯೆಲ್ ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.

ತಾನೂರ್​ ದುರಂತ: ಕೇರಳದ ಕರಾವಳಿ ಭಾಗದ ಪ್ರಮುಖ ಮೀನುಗಾರಿಕಾ ಪ್ರದೇಶಗಳಲ್ಲೊಂದಾದ ತಾನೂರ್ ಬಳಿ ನಿನ್ನೆ ಸಂಜೆ ದೋಣಿ ಮಗುಚಿ 22 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅರಬ್ಬಿ ಸಮುದ್ರ ಸೇರುವ ಮಲಪ್ಪುರಂ ಜಿಲ್ಲೆಯ ಪೂರಪುಳ ಪ್ರದೇಶದಲ್ಲಿ ದುರ್ಘಟನೆ ನಡೆದಿದೆ. ಮೃತರಲ್ಲಿ 15 ಮಂದಿ ಮಕ್ಕಳು ಸೇರಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ದೇಹಗಳನ್ನು ತಿರೂರ್ ಜಿಲ್ಲಾಸ್ಪತ್ರೆ, ತಾನೂರ್ ದಯಾ ಆಸ್ಪತ್ರೆ, ತಿರುರಂಗಡಿ ಮತ್ತು ಪೆರಿಂತಲ್ಮನ್ನಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇರಿಸಲಾಗಿದೆ. ಗಾಯಾಳುಗಳು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಮತ್ತು ಕೊಟ್ಟೈಕಲ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆ ವಿಳಂಬ: 7 ಗಂಟೆಗೆ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ರಕ್ಷಣಾ ಕಾರ್ಯಾಚರಣೆ 8 ಗಂಟೆಗೆ ಪ್ರಾರಂಭವಾಯಿತು. ಇದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಸಂತ್ರಸ್ತರ ಕಿರುಚಾಟ ಕೇಳಿದ ಸ್ಥಳೀಯರು ಮೊದಲು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ನಂತರ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ಸ್ಥಳಕ್ಕೆ ಆಗಮಿಸಿತ್ತು. ಆದರೆ ರಾತ್ರಿಯಾಗಿದ್ದರಿಂದ ಬೆಳಕಿನ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು.

ಇದನ್ನೂ ಓದಿ: ಕೇರಳ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೇರಿಕೆ: ಪ್ರಧಾನಿ ಮೋದಿ ಸಂತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.