ಲಾಹೋರ(ಪಾಕಿಸ್ತಾನ): ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮಾತ್ - ಉದ್ - ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಿವಾಸದ ಬಳಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರೀಯ ದಳ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಸತಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಜೋಹಾರ್ ನಗರದ ಮುಮ್ತಾಜ್ ಆಸ್ಪತ್ರೆ ಸಮೀಪದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸ್ಫೋಟದ ತೀವ್ರತೆ ಬಹಳಷ್ಟು ಭೀಕರವಾಗಿದ್ದರಿಂದ ಅನೇಕ ಮನೆಯ ಕಿಟಕಿ ಗಾಜು ಪುಡಿ - ಪುಡಿಯಾಗಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದರ ಪಕ್ಕದಲ್ಲೇ ಉಗ್ರ ಹಫೀಜ್ ಸಯೀದ್ ನಿವಾಸವಿತ್ತು ಎಂದು ವರದಿಯಾಗಿದೆ.
-
A blast in a car near expo centre #Lahore.. pic.twitter.com/6AIxB7lGWn
— Khurram Ansari (@khurram143) June 23, 2021 " class="align-text-top noRightClick twitterSection" data="
">A blast in a car near expo centre #Lahore.. pic.twitter.com/6AIxB7lGWn
— Khurram Ansari (@khurram143) June 23, 2021A blast in a car near expo centre #Lahore.. pic.twitter.com/6AIxB7lGWn
— Khurram Ansari (@khurram143) June 23, 2021
ಸ್ಫೋಟಕ್ಕೆ ನಿಖರವಾದ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಗಾಯಗೊಂಡವರನ್ನ ಈಗಾಗಲೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ಯಾಸ್ ಪೈಪ್ಲೈನ್ ಸ್ಫೋಟಗೊಂಡಿದೆಯೆ? ಅಥವಾ ಸಿಲಿಂಡರ್ ಸ್ಫೋಟದಿಂದ ಈ ಘಟನೆ ನಡೆದಿದೆ ಎಂಬುದು ನಿರ್ಧರಿಸಲು ಸಾಧ್ಯವಾಗಿಲ್ಲ ಎಂದು ರಕ್ಷಣಾ ಕಾರ್ಯಾಚರಣೆ ವಕ್ತಾರರು ಮಾಹಿತಿ ನೀಡಿದ್ದಾರೆ.
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ವರದಿ ನೀಡುವಂತೆ ಐಜಿಗೆ ನಿರ್ದೇಶನ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳುವಂತೆ ಪೊಲೀಸ್ ಅಧಿಕಾರಿಗಳಿಗೆ ಅಲ್ಲಿನ ಜಿಲ್ಲಾಧಿಕಾರಿ ಮುದಾಸೀರ್ ರಿಯಾಜ್ ಮಲಿಕ್ ಸೂಚನೆ ನೀಡಿದ್ದಾರೆ. ಜತೆಗೆ ಆಸ್ಪತ್ರೆಗಳಲ್ಲಿ ತುರ್ತು ವಾರ್ಡ್ ಮೀಸಲಿಡುವಂತೆ ಸೂಚನೆ ನೀಡಿದ್ದಾರೆ.