ETV Bharat / bharat

ಕೆಮ್ಮಿನ ಔಷಧಿ ಸೇವಿಸಿ ಆಫ್ರಿಕಾದಲ್ಲಿ 66 ಮಕ್ಕಳ ಸಾವು.. ಔಷಧಿಯ ಕಚ್ಚಾ ಸಾಮಗ್ರಿ ಪರಿಶೀಲಿಸಲು ನಿರ್ಧಾರ - ವಿಶ್ವ ಆರೋಗ್ಯ ಸಂಸ್ಥೆ

ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ, ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿಯು ತಯಾರಿಸಿದ ಡಿಕೊಂಜೆಸ್ಟೆಂಟ್ ಮತ್ತು ಕೆಮ್ಮಿನ ಸಿರಪ್ ಕುಡಿದು 66 ಮಕ್ಕಳು ಸಾವನ್ನಪ್ಪಿದ್ದಾರೆ. ಈ ಹೇಳಿಕೆಯ ಜೊತೆಗೆ, ವಿಶ್ವ ಆರೋಗ್ಯ ಸಂಸ್ಥೆ ಈ ಸಿರಪ್‌ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದೆ.

Representative Image
ಸಾಂದರ್ಭಿಕ ಚಿತ್ರ
author img

By

Published : Oct 15, 2022, 5:24 PM IST

ಹೈದರಾಬಾದ್: ಕೆಮ್ಮು ನಿವಾರಕ ಸಿರಪ್ ತಯಾರಿಸುವಾಗ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲವಾದರೆ ಔಷಧಿ ಸೇವಿಸಿದವರಿಗೆ ಮಾರಕವಾಗುತ್ತದೆ. ಇದು ಆಫ್ರಿಕಾದ ಗ್ಯಾಂಬಿಯಾದಲ್ಲಿ ನಡೆದ ಘಟನೆ. ನಮ್ಮ ದೇಶದ ಹರಿಯಾಣದ ಮೇಡನ್ ಫಾರ್ಮಾ ಕಂಪನಿ ರಫ್ತು ಮಾಡಿದ ಕೆಮ್ಮಿನ ಔಷಧಿ ಕುಡಿದು 66 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಈ ಬಗ್ಗೆ ತನಿಖೆ ನಡೆಸಿದೆ. ಕೆಮ್ಮಿನ ಔಷಧಿಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೋಲ್ಕತ್ತಾದ ಲ್ಯಾಬ್‌ಗೆ ಕಳುಹಿಸಲಾಗಿದೆ. ಔಷಧದಲ್ಲಿ ಕೆಲವು ಅಪಾಯಕಾರಿ ರಾಸಾಯನಿಕ ಅಂಶಗಳು ಇವೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಈ ಘಟನೆಯು ನಮ್ಮ ದೇಶದ ಫಾರ್ಮಾ ಉದ್ಯಮ ಮತ್ತು ಸರ್ಕಾರಿ ವಲಯಗಳನ್ನು ಆತಂಕಕ್ಕೀಡು ಮಾಡಿದೆ.

ಯಾವ ನಾಲ್ಕು ಸಿರಪ್‌ಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ?:

  • ಪ್ರೋಮೆಥಾಜಿನ್ ಓರಲ್ ಸೊಲ್ಯೂಷನ್ ( Promethazine Oral Solution)
  • ಕೋಫಾಕ್ಸ್‌ಮಾಲಿನ್ ಬೇಬಿ ಕಾಫ್‌ ಸಿರಪ್ ( Kofexmalin Baby Cough Syrup)
  • ಮ್ಯಾಕೋಫ್ ಬೇಬಿ ಕಾಫ್‌ ಸಿರಪ್ (Makoff Baby Cough Syrup)
  • ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ (Magrip N Cold Syrup).

ಉತ್ಪಾದನೆ ಸ್ಥಗಿತ: ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಮತ್ತು ಹರಿಯಾಣದ ರಾಜ್ಯ ಔಷಧ ನಿಯಂತ್ರಕರು ಸ್ಥಳೀಯ ತಪಾಸಣೆಯಲ್ಲಿ ಕಂಡುಬಂದ ನ್ಯೂನತೆಗಳ ಆಧಾರದ ಮೇಲೆ ಮೇಡನ್ ಫಾರ್ಮಾಸ್ಯುಟಿಕಲ್ಸ್ ಘಟಕದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಔಷಧಿಯ ಕಚ್ಚಾ ಸಾಮಗ್ರಿ ಪರಿಶೀಲಿಸಲು ನಿರ್ಧಾರ: ವಿಶ್ವದಾದ್ಯಂತ ಹಲವು ದೇಶಗಳಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ರಫ್ತು ಮಾಡುವ ಮತ್ತು ಅತ್ಯಂತ ಸಕ್ರಿಯ ಪಾತ್ರವನ್ನು ವಹಿಸುವ ಹಿನ್ನೆಲೆ, ಅಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಸಾಧ್ಯವಾದಷ್ಟು ಬೇಗ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದರ ಪರಿಣಾಮವಾಗಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹಾಗೂ ವಿವಿಧ ರಾಜ್ಯಗಳ ಔಷಧ ನಿಯಂತ್ರಕರು ಕಾರ್ಯಪ್ರವೃತ್ತರಾಗಿದ್ದಾರೆ. ಕೆಮ್ಮು ಔಷಧಿ ತಯಾರಿಕಾ ಕಂಪನಿಗಳು ಮತ್ತು ಆ ಔಷಧಿಗಳಲ್ಲಿ ಬಳಸಲಾದ ಔಷಧೀಯ ಕಚ್ಚಾ ಸಾಮಗ್ರಿಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ.

ಕೆಮ್ಮಿನ ಔಷಧದಲ್ಲಿ ಡೈಫೆನ್ ಹೈಡ್ರಾಮೈನ್ ಹೈಡ್ರೋಕ್ಲೋರೈಡ್, ಅಮೋನಿಯಂ ಕ್ಲೋರೈಡ್, ಸೋಡಿಯಂ ಸಿಟ್ರೇಟ್ ಮೊದಲಾದ ಕಚ್ಚಾ ಔಷಧಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈ ಉದ್ದೇಶಕ್ಕಾಗಿ ತೆಲಂಗಾಣ ರಾಜ್ಯ ಔಷಧ ನಿಯಂತ್ರಕರ ಕಚೇರಿಯ ಅಧಿಕಾರಿಗಳು ರಾಜ್ಯದ ಫಾರ್ಮಾ ಕಂಪನಿಗಳು ಮತ್ತು ದಾಸ್ತಾನುಗಾರರಲ್ಲಿ ಲಭ್ಯವಿರುವ ಕೆಮ್ಮಿನ ಔಷಧಿಗಳು ಮತ್ತು ಅವುಗಳಲ್ಲಿ ಬಳಸುವ ಕಚ್ಚಾ ವಸ್ತುಗಳ ಪ್ರಮಾಣವನ್ನು ಪರಿಶೀಲಿಸುತ್ತಿದ್ದಾರೆ.

ಗ್ಯಾಂಬಿಯಾಕ್ಕೆ ಸರಬರಾಜು ಮಾಡುವ ಕೆಮ್ಮಿನ ಸಿರಪ್ ಅನ್ನು ನಮ್ಮ ದೇಶದಲ್ಲಿ ವಿತರಿಸಲಾಗಿಲ್ಲ ಎಂದು ಮೇಡನ್ ಫಾರ್ಮಾ ಮಾಹಿತಿ ನೀಡಿದೆ. ಆದರೆ ದೇಶೀಯವಾಗಿ ಮಾರಾಟವಾಗುವ ಇತರ ಕೆಮ್ಮಿನ ಔಷಧಗಳು ಜೀವಕ್ಕೆ ಅಪಾಯ ತಂದೊಡ್ಡುವ ರಾಸಾಯನಿಕಗಳು ಮತ್ತು ರಾಸಾಯನಿಕ ಅಂಶಗಳಿಂದ ಮುಕ್ತವಾಗಿರಬೇಕು ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಶುದ್ಧೀಕರಣ ಅತ್ಯಂತ ಮಹತ್ವ: ಪ್ರೊಪಿಲೀನ್ ಗ್ಲೈಕೋಲ್ ಎಂಬ ದ್ರಾವಕವನ್ನು ಕೆಮ್ಮಿನ ಔಷಧದ ಶುದ್ಧೀಕರಣ ಪ್ರಕ್ರಿಯೆಯೊಂದಿಗೆ ಉಪಕರಣವನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಎಚ್ಚರ ತಪ್ಪಿದರೆ, ಕೆಮ್ಮಿನ ಔಷಧದಲ್ಲಿ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ರಾಸಾಯನಿಕ ಅಂಶವನ್ನು ಬಿಡುವ ಅಪಾಯವಿದೆ. ಈ ಎರಡು ರಾಸಾಯನಿಕ ಅಂಶಗಳು ತುಂಬಾ ಅಪಾಯಕಾರಿ. ಇವುಗಳು ಮಾನವನ ದೇಹವನ್ನು ಪ್ರವೇಶಿಸಿದರೆ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತವೆ. ಇದು ಜೀವಹಾನಿಗೆ ಕಾರಣವಾಗಬಹುದು ಎಂದು ತೆಲಂಗಾಣ ಔಷಧ ನಿಯಂತ್ರಣ ಮೂಲಗಳು ವಿವರಿಸಿವೆ.

ಐಪಿ ದರ್ಜೆಯನ್ನು ಮಾತ್ರ ಬಳಸಬೇಕು: ದ್ರಾವಕ ಪ್ರೊಪಿಲೀನ್ ಗ್ಲೈಕಾಲ್ ಐಪಿ ದರ್ಜೆಯ (ಭಾರತೀಯ ಫಾರ್ಮಾಕೊಪೊಯಿಯ) ಮತ್ತು ವಾಣಿಜ್ಯ ದರ್ಜೆಗಳಲ್ಲಿ ಲಭ್ಯವಿದೆ. ಕೆಮ್ಮಿನ ಔಷಧ ತಯಾರಿಸಲು ಐಪಿ ದರ್ಜೆಯನ್ನು ಮಾತ್ರ ಬಳಸಬೇಕು. ಆದರೆ ಕೆಲವು ಫಾರ್ಮಾ ಕಂಪನಿಗಳು ವಾಣಿಜ್ಯ ದರ್ಜೆಯ ದ್ರಾವಕಗಳನ್ನು ಬಳಸಿ ಔಷಧವನ್ನು ತಯಾರಿಸುತ್ತವೆ ಎಂಬ ಆರೋಪಗಳಿವೆ.

ಭಾರತೀಯ ಫಾರ್ಮಾಕೋಪಿಯಾ ಪ್ರಕಾರ, ಕೆಮ್ಮಿನ ಔಷಧಿಗಳು ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕೋಲ್ ಅಂಶಗಳನ್ನು ಹೊಂದಿರುವುದಿಲ್ಲ. ಎರಡು ವರ್ಷಗಳ ಹಿಂದೆ ನಮ್ಮ ದೇಶದ ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದರು. ಆಗ ನಡೆಸಿದ ಪರೀಕ್ಷೆಗಳಲ್ಲಿ ಔಷಧದಲ್ಲಿ ಈ ರೀತಿಯ ರಾಸಾಯನಿಕ ಅಂಶದ ಕುರುಹುಗಳು ಇರುವುದು ದೃಢಪಟ್ಟಿತ್ತು.

ದೃಢಪಟ್ಟಿರುವ ಸಂಗತಿಗಳು: ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಔಷಧ ನಿಯಂತ್ರಣ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಔಷಧೀಯ ಕಂಪನಿಗಳು ಉತ್ಪಾದಿಸುವ/ವಿತರಿಸುವ ಕೆಮ್ಮಿನ ಔಷಧಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅವಶೇಷಗಳ ಕುರುಹುಗಳಿವೆಯೇ? ಎಂಬುದನ್ನು ದೃಢಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ ಈಗಾಗಲೇ ರಾಜ್ಯಗಳಲ್ಲಿನ ಔಷಧ ನಿಯಂತ್ರಕಗಳಿಗೆ ಭಾರತೀಯ ಫಾರ್ಮಾಕೋಪೋಯಾ ಮಾನದಂಡಗಳ ಪ್ರಕಾರ ಇವುಗಳನ್ನು ಪರೀಕ್ಷಿಸಲು ಸಲಹೆ ನೀಡಿದ್ದಾರೆ. ಔಷಧಿಗಳ ತಯಾರಿಕೆಯಲ್ಲಿ ಸೂಚಿಸಲಾದ ಔಷಧೀಯ ಕಚ್ಚಾ ವಸ್ತುಗಳು ಮತ್ತು ದ್ರಾವಕಗಳನ್ನು ಮಾತ್ರ ಬಳಸಬೇಕೆಂದು ಔಷಧ ನಿಯಂತ್ರಣ ಅಧಿಕಾರಿಗಳು ಫಾರ್ಮಾ ಕಂಪನಿಗಳಿಗೆ ಸೂಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭಾರತ ಮೂಲದ ಕಾಫ್​ ಸಿರಪ್​ ಕುಡಿದು ಆಫ್ರಿಕಾದ 66 ಮಕ್ಕಳು ಸಾವು: ತನಿಖೆಗೆ WHO ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.