ETV Bharat / bharat

ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆ ವಿರೂಪ: ಭಾರತದ ಖಂಡನೆ

ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ.

Mahatma Gandhi statue at Central Park in City of Davis, California
ಕ್ಯಾಲಿಫೋರ್ನಿಯಾದಲ್ಲಿ ಗಾಂಧಿ ಪ್ರತಿಮೆ ವಿರೂಪ
author img

By

Published : Jan 30, 2021, 12:15 PM IST

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ಭಾರತ ಇದನ್ನು ತೀವ್ರವಾಗಿ ಖಂಡಿಸಿದೆ.

ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿ 6 ಅಡಿ ಎತ್ತರ, 650-ಪೌಂಡ್ (294 ಕೆಜಿ) ತೂಕದ ಕಂಚಿನ ಪ್ರತಿಮೆಯ ಪಾದ ಹಾಗೂ ಮುಖ ಭಾಗವನ್ನು ವಿರೂಪಗೊಳಿಸಲಾಗಿದೆ. ಇದರ ವಿರುದ್ಧ ಅಮೆರಿಕದಲ್ಲಿರುವ ಭಾರತೀಯರು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

  • On 28 Jan'21, Mahatma Gandhi statue at Central Park in City of Davis, California was vandalised by unknown persons. Statue was a gift by Govt of India in '16. The Govt strongly condemns this malicious & despicable act against a universally respected icon of peace & justice: MEA pic.twitter.com/vEy0I33gpV

    — ANI (@ANI) January 30, 2021 " class="align-text-top noRightClick twitterSection" data=" ">

ಇಂದು ಘಟನೆ ಬೆಳಕಿಗೆ ಬಂದಿದ್ದು, ಜನವರಿ 28ರಂದು ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪ್ರತಿಮೆಯನ್ನು ನಿಖರವಾಗಿ ಯಾವಾಗ ಹಾಗೂ ಯಾಕೆ ವಿರೂಪಗೊಳಿಸಲಾಯಿತು ಎಂಬುದನ್ನು ಪೊಲೀಸರು ಪತ್ತೆ ಹೆಚ್ಚುತ್ತಿದ್ದಾರೆ.

ಇದನ್ನೂ ಓದಿ: ಮಹಾತ್ಮಾ ಗಾಂಧಿ 73ನೇ ಪುಣ್ಯತಿಥಿ:ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ನಮನ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, 2016ರಲ್ಲಿ ಪ್ರತಿಮೆಯನ್ನು ಭಾರತ ಸರ್ಕಾರ ಉಡುಗೊರೆಯಾಗಿ ನೀಡಿತ್ತು. ಶಾಂತಿ ಮತ್ತು ನ್ಯಾಯದ ಸಂಕೇತ​​ ಎಂದು ಜಗತ್ತಿನಾದ್ಯಂತ ಗೌರವಿಸಲ್ಪಡುವ ವ್ಯಕ್ತಿಗೆ ಅಗೌರವ ನೀಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದೆ.

2020ರ ಡಿಸೆಂಬರ್​ನಲ್ಲಿ ವಾಷಿಂಗ್ಟನ್​ನಲ್ಲಿನ ಭಾರತದ ರಾಯುಭಾರಿ ಕಚೇರಿ ಮುಂಭಾಗ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರರು ವಿರೂಪಗೊಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.