ETV Bharat / bharat

ಶವ ಸಾಗಿಸಲು ಮನೆಗೆ ಬಂದಿದ್ದ ಆಂಬ್ಯುಲೆನ್ಸ್‌ ಚಾಲಕನಿಂದ ನಗ, ನಾಣ್ಯ ಕಳ್ಳತನ! - house theft case

ಚಾಣಾಕ್ಷತನದ ಕಳ್ಳತನ ಪ್ರಕರಣವನ್ನು ಅಷ್ಟೇ ಉಪಾಯದಿಂದ ಬೇಧಿಸಿರುವ ನಾಗ್ಪುರದ ಸಕ್ಕರ್ದಾರ ಪೊಲೀಸರು, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

MH theft case
MH theft case
author img

By ETV Bharat Karnataka Team

Published : Sep 1, 2023, 3:54 PM IST

ನಾಗ್ಪುರ (ಮಹಾರಾಷ್ಟ್ರ): ಮೃತಪಟ್ಟ ವ್ಯಕ್ತಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆಂಬ್ಯುಲೆನ್ಸ್‌ ಚಾಲಕ ಸೇರಿದಂತೆ ಆತನ ಮಗ ಹಾಗೂ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಅಶ್ವಜಿತ್ ವಾಂಖೆಡೆ ಮತ್ತು ನಿತೇಶ್ ವಾಂಖೆಡೆ ಬಂಧಿತರು. ಆರೋಪಿ ಹಾಗೂ ಬಂಧಿತ ಆಂಬ್ಯುಲೆನ್ಸ್‌ನ ಚಾಲಕ ಅಶ್ವಜಿತ್, ವ್ಯಕ್ತಿಯೊಬ್ಬರ ಮೃತದೇಹವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅದೇ ಮನೆಯಲ್ಲಿ ತನ್ನ ಮಗನ ಮೂಲಕ ಕಳ್ಳತನ ಮಾಡಿಸಿದ್ದ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಕಳ್ಳತನವಾದ ಮನೆ
ಕಳ್ಳತನವಾದ ಮನೆ

ಪ್ರಕರಣದ ಹಿನ್ನೆಲೆ: ನಾಗ್ಪುರದ ಸಕ್ಕರ್ದಾರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮವಾರಿ ಕ್ವಾರ್ಟರ್​ ನಿವಾಸಿ ಕಲ್ಪನಾ ಘೋಡೆ ಎಂಬವರ ಪತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಸ್ಟ್ 20ರಂದು ನಿಧನರಾಗಿದ್ದರು. ಈ ಕುಟುಂಬ ಮೂಲತಃ ಮಧ್ಯಪ್ರದೇಶದ ಬೇತುಲ್‌ನವರಾಗಿದ್ದು ಮೃತದೇಹವನ್ನು ಬೇತುಲ್‌ಗೆ ಕೊಂಡೊಯ್ಯಲು ನಿರ್ಧರಿಸಿದ್ದರು. ಅದರಂತೆ ಇಲ್ಲಿರುವ ಮನೆಯನ್ನು ಲಾಕ್​ ಮಾಡಿ ಆಂಬ್ಯುಲೆನ್ಸ್​ನಲ್ಲಿ ಪತಿಯ ಮೃತದೇಹವನ್ನು ಸ್ವಗ್ರಾಮ ಬೇತುಲ್‌ಗೆ ತೆಗೆದುಕೊಂಡು ಹೋಗಿದ್ದರು.

ಆದರೆ, ಮೃತದೇಹ ಸಾಗಿಸಲು ಬಂದಿದ್ದ ಆಂಬ್ಯುಲೆನ್ಸ್​ ಚಾಲಕ ಅಶ್ವಜಿತ್ ಆ ಕ್ಷಣಕ್ಕೆ ಮನೆಯ ವಾತಾವರಣವನ್ನೆಲ್ಲ ಗಮನಿಸಿದ್ದ. ಮನೆಯಲ್ಲಿ ಯಾರೂ ಇಲ್ಲದಿರುವ ಮತ್ತು ಎಲ್ಲವನ್ನೂ ನೋಡಿದ್ದ ಅಶ್ವಜಿತ್, ವಾಹನವನ್ನು ಓಡಿಸುತ್ತಲೇ ಲಾಕ್​ ಮಾಡಲಾಗಿದ್ದ ಮನೆ ಕಳ್ಳತನ ಮಾಡುವ ಆಲೋಚನೆ ಮಾಡಿದ್ದ. ಅದರಂತೆ ತನ್ನ ಮಗನ ಮೂಲಕ ಕಳ್ಳತನವನ್ನು ಮಾಡಿಸಿದ್ದಾನೆ. ಮಗ ನಿತೇಶ್ ಇತ್ತ ಕಳ್ಳತನಕ್ಕೆ ಇಳಿದಿದ್ದರೆ ತಂದೆ ಅಶ್ವಜಿತ್ ಅತ್ತ ಮನೆ ಮಾಲಕಿ ಕಲ್ಪನಾ ಅವರ ಮುಂದೆ ಏನೂ ಗೊತ್ತಾಗದಂತೆ ನಟಿಸಿದ್ದ. ಈ ಕೃತ್ಯ ಪ್ರಕರಣ ತನಿಖೆ ವೇಳೆ ಬಯಲಾಗಿದೆ ಎಂದು ಸಕ್ಕರ್ದಾರ ಠಾಣಾ ಪೊಲೀಸರೊಬ್ಬರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಸಿಸಿಟಿವಿ ದೃಶ್ಯ

ಪ್ರಕರಣ ಬಯಲಿಗೆ ಬಂದಿದ್ದೇಗೆ?: ತಂದೆಯ ಅಣತಿಯಂತೆ ಇಬ್ಬರು ಹುಡುಗರೊಂದಿಗೆ ಮನೆಗೆ ನುಗ್ಗಿದ್ದ ನಿತೇಶ್ ವಾಂಖೆಡೆ, ಅಲ್ಲಿದ್ದ ದುಬಾರಿ ಬೆಲೆಯ ಮೊಬೈಲ್, ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದರು. ಪತಿಯ ಎಲ್ಲ ವಿಧಿವಿಧಾನಗಳನ್ನು ಮುಗಿಸಿ ಕಲ್ಪನಾ ಘೋಡೆ ಪುನಃ ನಾಗ್ಪುರದ ತನ್ನ ಮನೆಗೆ ಮರಳಿದ್ದರು. ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ತಕ್ಷಣ ಸಕ್ಕರ್ದಾರ ಪೊಲೀಸ್ ಠಾಣೆಗೆ ತೆರಳಿದ ಕಲ್ಪನಾ, ಈ ಬಗ್ಗೆ ದೂರು ನೀಡಿದ್ದರು. ಅವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಮೂವರು ಯುವಕರು ಮೊಪೆಡ್​​ನಲ್ಲಿ ಬಂದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಅವರನ್ನು ಪತ್ತೆ ಹಚ್ಚಿದ್ದಲ್ಲದೇ ಕರೆದು ವಿಚಾರಿಸಿದ ಬಳಿಕ ಪ್ರಕರಣ ಬಯಲಿಗೆ ಬಂದಿದೆ.

ಇದನ್ನೂ ಓದಿ: ಪತ್ನಿಗಾಗಿ ಗಡಿ ದಾಟಿದ ಪಾಕ್​ ವ್ಯಕ್ತಿ.. 9 ತಿಂಗಳಿಂದ ಹೈದರಾಬಾದ್‌ನಲ್ಲಿ ವಾಸ, ನಕಲಿ ಆಧಾರ್ ಪಡೆಯುವ ವೇಳೆ ಸಿಕ್ಕಿಬಿದ್ದ ಆರೋಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.