ETV Bharat / bharat

ವಿಡಿಯೋ ಸ್ಟ್ರೀಮಿಂಗ್ ವೇಳೆ ಕೊರಿಯನ್​ ಯುವತಿಯೊಂದಿಗೆ ಅಸಭ್ಯ ವರ್ತನೆ - ETv Bharat kannada news

ಮುಂಬೈನ ಖಾರ್ ಪ್ರದೇಶದಲ್ಲಿ ಕೊರಿಯಾ ದೇಶದ ಯುವತಿಯೊಂದಿಗೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ.

Rude behavior with Korean girl while streaming
ಸ್ಟ್ರೀಮಿಂಗ್ ವೇಳೆ ಕೊರಿಯನ್​ ಯುವತಿಯೊಂದಿಗೆ ಅಸಭ್ಯ ವರ್ತನೆ
author img

By

Published : Dec 1, 2022, 12:15 PM IST

ಮುಂಬೈ: ಕೆಲವು ದಿನಗಳ ಹಿಂದೆ ಅಂಧೇರಿ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಅಮೆರಿಕದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ಘಟನೆ ಮಾಸುವ ಮುನ್ನವೇ ಇಲ್ಲಿನ ಖಾರ್ ಪ್ರದೇಶದಲ್ಲಿ ಇಬ್ಬರು ಯುವಕರು ಕೊರಿಯಾದ ಯುವತಿಯೊಂದಿಗೆ ದುರ್ವರ್ತನೆ ತೋರಿರುವ ಘಟನೆ ನಡೆದಿದೆ. ಕೊರಿಯಾನ್​ ಯುವತಿ ಆನ್‌ಲೈನ್‌ನಲ್ಲಿ ವಿಡಿಯೋ ಸ್ಟ್ರೀಮ್ ಮಾಡುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಯುವಕರು ಅಡ್ಡಿಪಡಿಸಿದ್ದಾರೆ.

ಯುವಕರ ವರ್ತನೆ ಕಂಡು ಯುವತಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಕೂಟರ್​ನಲ್ಲಿ ಹಿಂಬಾಲಿಸಿ ಮತ್ತೆ ಕಿರುಕುಳ ಕೊಟ್ಟಿದ್ದಾರೆ. ಈ ಎಲ್ಲಾ ಘಟನೆಗಳು ಯುವತಿ ಮಾಡುತ್ತಿದ್ದ ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ತನ್ನೊಂದಿಗೆ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಯುವತಿ ಪೋಸ್ಟ್ ಮಾಡಿದ್ದು, ಪ್ರಕರಣವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದರ ಬೆನ್ನಲ್ಲೇ ಪೊಲೀಸರು ತನಿಖೆ ಶುರು ಮಾಡಿದ್ದು ಯುವಕರ ಸೆರೆಗೆ ಬಲೆ ಬೀಸಿದ್ದಾರೆ. ಮುಂಬೈನಂತಹ ಸುರಕ್ಷಿತ ನಗರದಲ್ಲಿ ವಿದೇಶಿ ಮಹಿಳಾ ಪ್ರಜೆಗಳ ಮೇಲೆ ನಿತ್ಯ ನಡೆಯುತ್ತಿರುವ ಇಂತಹ ಘಟನೆಗಳನ್ನು ತಡೆಯುವ ಸವಾಲು ಪೊಲೀಸರಿಗೆ ಎದುರಾಗಿದೆ.

ಇದನ್ನೂ ಓದಿ :ಅಮೆರಿಕ ಪ್ರಜೆ ಮುಂದೆ ಅಸಭ್ಯ ವರ್ತನೆ: ಕ್ಯಾಬ್ ಚಾಲಕ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.