ಥಾಣೆ (ಮಹಾರಾಷ್ಟ್ರ) : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಪೂರ್ವದಲ್ಲಿ ಶುಕ್ರವಾರ ಶಿಥಿಲಗೊಂಡಿದ್ದ ಕಟ್ಟಡ ಕುಸಿದು, ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ಐರೆ ಗ್ರಾಮದಲ್ಲಿರುವ 'ಆದಿನಾರಾಯಣ ಭವನ್' ಕಟ್ಟಡವು 44 ವಠಾರಗಳನ್ನು ಹೊಂದಿದ್ದು, ಕಟ್ಟಡದ ಕೆಲವು ಭಾಗಗಳು ಮುಳುಗಲು ಪ್ರಾರಂಭಿಸಿದ ಬಳಿಕ ಅಲ್ಲಿದ್ದ ನಿವಾಸಿಗಳನ್ನು ತೆರವು ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
#UPDATE | Maharashtra: Death toll in Dombivli building collapse incident rises to two. Rescue and search operation is underway: Thane Municipal Corporation https://t.co/PHticaav1W pic.twitter.com/MfSFWc1QJv
— ANI (@ANI) September 15, 2023 " class="align-text-top noRightClick twitterSection" data="
">#UPDATE | Maharashtra: Death toll in Dombivli building collapse incident rises to two. Rescue and search operation is underway: Thane Municipal Corporation https://t.co/PHticaav1W pic.twitter.com/MfSFWc1QJv
— ANI (@ANI) September 15, 2023#UPDATE | Maharashtra: Death toll in Dombivli building collapse incident rises to two. Rescue and search operation is underway: Thane Municipal Corporation https://t.co/PHticaav1W pic.twitter.com/MfSFWc1QJv
— ANI (@ANI) September 15, 2023
ಶುಕ್ರವಾರ ಸಂಜೆ ಕಟ್ಟಡ ಕುಸಿದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ರಾತ್ರಿ 8 ಗಂಟೆ ಸುಮಾರಿಗೆ ಸುನಿಲ್ ಬಿರ್ಜಾ ಲೋಡಯಾ (55) ಅವರ ದೇಹವನ್ನು ಅವಶೇಷಗಳ ಅಡಿಯಿಂದ ಮೇಲೆ ತರಲು ಯಶಸ್ವಿಯಾಗಿತ್ತು. ರಾತ್ರಿ 9:15ರ ಸುಮಾರಿಗೆ ಅವಶೇಷಗಳ ಅಡಿ ಸಿಲುಕಿದ್ದ 54 ವರ್ಷದ ದೀಪ್ತಿ ಸುನಿಲ್ ಲೋಡಾಯಾ ಎಂಬುವವರನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಟಿಎಂಸಿ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಮಾಹಿತಿ ನೀಡಿದ್ದಾರೆ.
ನಂತರ, ಅವಶೇಷಗಳಿಂದ ಮತ್ತೊಂದು ಶವವನ್ನು ಹೊರ ತೆಗೆಯಲಾಗಿದ್ದು, ಅವರನ್ನ ಅರವಿಂದ್ ಭಟ್ಕರ್ (70) ಎಂದು ಗುರುತಿಸಲಾಗಿದೆ. ಇನ್ನೂ ಒಬ್ಬರು ಸಿಕ್ಕಿಬಿದ್ದಿರುವ ಶಂಕೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಯಾಸಿನ್ ತದ್ವಿ ತಿಳಿಸಿದ್ದಾರೆ.
"50 ವರ್ಷಗಳಷ್ಟು ಹಳೆಯ ಕಟ್ಟಡವನ್ನು ಅಪಾಯಕಾರಿ ಎಂದು ಘೋಷಿಸಲಾಗಿತ್ತು ಮತ್ತು ನಿವಾಸಿಗಳನ್ನು ತಕ್ಷಣ ತೆರವು ಮಾಡುವಂತೆ ನೋಟಿಸ್ ಕೂಡಾ ನೀಡಲಾಗಿತ್ತು. ನೋಟಿಸ್ ಬಂದ ತಕ್ಷಣ ಕೆಲವರು ಖಾಲಿ ಮಾಡಿದ್ದರು, ಆದರೆ, ಕೆಲವರು ಇನ್ನೂ ಕಟ್ಟಡದಲ್ಲೇ ಉಳಿದಕೊಂಡಿದ್ದರು. ಈ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಡಾಂಗ್ಡೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
"ಇದು ಅನಧಿಕೃತ ಕಟ್ಟಡವಾಗಿದ್ದು, ಕೆಡಿಎಂಸಿ- ಈ ಹಿಂದೆ ಅಪಾಯಕಾರಿ ಕಟ್ಟಡ ಎಂದು ಟ್ಯಾಗ್ ಮಾಡಿತ್ತು" ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ಕೋಶದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಹಿರಿಯ ಅಧಿಕಾರಿ ಡಾಂಗ್ಡೆ ಮತ್ತು ಇತರ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ವಾರ್ಡ್‌ನಲ್ಲಿ 40 ಕಟ್ಟಡಗಳು ಅಪಾಯಕಾರಿ ಎಂದು ಘೋಷಿಸಲಾಗಿದ್ದು, ಕೆಡಿಎಂಸಿ ಮಿತಿಯಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ 602 ಕಟ್ಟಡಗಳಿವೆ ಎಂದು ಸೈಟ್‌ನಲ್ಲಿರುವ ಇನ್ನೊಬ್ಬ ನಾಗರಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ. (ಪಿಟಿಐ)
ಇದನ್ನು ಓದಿ:ಉತ್ತರ ಪ್ರದೇಶದಲ್ಲಿ ಕುಸಿದು ಬಿದ್ದ ಲಿಫ್ಟ್: ನಾಲ್ವರು ಸಾವು, ಐವರ ಸ್ಥಿತಿ ಗಂಭೀರ...