ETV Bharat / bharat

ಟಿವಿ ಧಾರಾವಾಹಿ ಸೆಟ್‌ನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ - ಟಿವಿ ಧಾರಾವಾಹಿ ಸೆಟ್‌

ಮಹಾರಾಷ್ಟ್ರದ ಕಿರುತೆರೆ ನಟಿ ಆತ್ಮಹತ್ಯೆ - ಮೇಕಪ್​ ರೂಮ್​ನಲ್ಲಿ ನಟಿ ತುನೀಶಾ ಶರ್ಮಾ ಸಾವಿಗೆ ಶರಣು

Maharashtra  TV actress Tunisha Sharma committed suicide
ಟಿವಿ ಧಾರಾವಾಹಿ ಸೆಟ್‌ನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ
author img

By

Published : Dec 24, 2022, 6:42 PM IST

Updated : Dec 24, 2022, 7:56 PM IST

ಮುಂಬೈ (ಮಹಾರಾಷ್ಟ್ರ): ಟಿವಿ ಧಾರಾವಾಹಿಯೊಂದರ ಸೆಟ್‌ನಲ್ಲೇ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 20 ವರ್ಷದ ತುನೀಶಾ ಶರ್ಮಾ ಸಾವಿಗೆ ಶರಣಾದ ನಟಿ ಎಂದು ಗುರುತಿಸಲಾಗಿದೆ.

ಮುಂಬೈ ಸಮೀಪದ ನೈಗಾಂವ್ ಪ್ರದೇಶದ ಸೆಟ್‌ನಲ್ಲಿ ಶೂಟಿಂಗ್​ ನಡೆಯುತ್ತಿರುವಾಗಲೇ ಮೇಕಪ್​ ರೂಮ್​ನಲ್ಲಿ ಮಧ್ಯಾಹ್ನ ಸಮಯದಲ್ಲಿ ನಟಿ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ನಟಿ ಕೊನೆಯುಸಿರೆಳೆದಿದ್ದಾರೆ. ವಾಲೀವ್ ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ನಟಿ ತುನೀಶಾ ಶರ್ಮಾ ಸದ್ಯ ಗರ್ಭಿಣಿಯಾಗಿದ್ದರು. ಆಕೆಯ ಗೆಳೆಯ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ನೊಂದು ಆತ್ಮಹತ್ಯೆಗೆ ತುನೀಶಾ ಶರ್ಮಾ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

  • Maharashtra | TV actress Tunisha Sharma committed suicide by hanging herself on the set of a TV serial. She was taken to a hospital where she was declared brought dead: Waliv Police

    — ANI (@ANI) December 24, 2022 " class="align-text-top noRightClick twitterSection" data=" ">

2015ರಲ್ಲಿ ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್ ಧಾರಾವಾಹಿ ಮೂಲಕ ತುನೀಶಾ ಕಿರುತೆರೆಗೆ ಕಾಲಿಟ್ಟಿದ್ದರು. ನಂತರ ಚಕ್ರವರ್ತಿ ಅಶೋಕ್ ಸಾಮ್ರಾಟ್‌, ಇಷ್ಕ್ ಸುಭಾನ್ ಅಲ್ಲಾ, ಇಂಟರ್​ನೆಟ್ ವಾಲಾ ಲವ್‌ ಧಾರಾವಾಹಿಯಲ್ಲಿ ನಟಿ ಸೈಎನಿಸಿಕೊಂಡಿದ್ದರು.

ನಟಿ ಕತ್ರಿನಾ ಕೈಫ್​ ಅಭಿಯನದ ಫಿತೂರ್ ಚಿತ್ರದ ಮೂಲಕ ಚಿತ್ರರಂಗಕ್ಕೂ ತುನೀಶಾ ಕಾಲಿಟ್ಟಿದ್ದರು. ಇದರಲ್ಲಿ ಬಾಲ ಫಿರ್ದೌಸ್ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೇ, ಕತ್ರಿನಾ ನಟಿಸಿದ್ದ ಬಾರ್​ ಬಾರ್ ದೇಖೋ ಚಿತ್ರದಲ್ಲೂ ತುನೀಶಾ ಶರ್ಮಾ ಬಣ್ಣ ಹಚ್ಚಿಸಿದ್ದರು. ಈ ಚಿತ್ರದಲ್ಲಿ ಯುವ ದಿಯಾ ಪಾತ್ರವನ್ನು ನಿರ್ವಹಿಸಿದ್ದರು. ಈ ಎರಡೂ ಚಿತ್ರಗಳಲ್ಲಿ ತುನೀಶಾ ಅವರು ಕತ್ರಿನಾ ಕೈಫ್ ಪಾತ್ರದ ಬಾಲ ನಟಿಯಾಗಿ ನಟಿಸಿದ್ದರು. ದಬಾಂಗ್ - 3 ಮುಂತಾದ ಚಿತ್ರಗಳಲ್ಲಿಯೂ ತುನೀಶಾ ಶರ್ಮಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮತ್ತೆ ನೆರವಿಗೆ ಬಂದ ಸೋನು ಸೂದ್​.. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸಹಾಯ ಹಸ್ತ

Last Updated : Dec 24, 2022, 7:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.