ETV Bharat / bharat

ಹಾಸ್ಟೆಲ್​ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ: ಸಾವಿನ ಸತ್ಯ ತೆರೆದಿಟ್ಟ ಡೆತ್​ ನೋಟ್​ - ಕಾಲೇಜು ಆಡಳಿತ ಮಂಡಳಿ ವಿರುದ್ಧ ತನಿಖೆ

ಶ್ರೀ ಗುರು ಗೋವಿಂದಸಿಂಗ್‌ಜಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್‌ ಮೂರನೇ ವರ್ಷದಲ್ಲಿ ಓದುತ್ತಿದ್ದ ಗೀತಾ ಕಲ್ಯಾಣ್ ಕದಮ್ (22) ಬುಧವಾರ ಹಾಸ್ಟೆಲ್​ ರೂಮ್​​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

maharashtra-student-committed-suicide-in-a-hostel-in-rome
ಹಾಸ್ಟೆಲ್​ ರೋಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ
author img

By

Published : Sep 23, 2022, 4:34 PM IST

ಮಹಾರಾಷ್ಟ್ರ : ಕಾಲೇಜು ವಿದ್ಯಾರ್ಥಿನಿ ಒಬ್ಬರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರ ನಾಂದೇಡ್​ನಲ್ಲಿ ನಡೆದಿದೆ. ಇಲ್ಲಿನ ಶ್ರೀ ಗುರು ಗೋವಿಂದಸಿಂಗ್‌ಜಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್‌ ಮೂರನೇ ವರ್ಷದಲ್ಲಿ ಓದುತ್ತಿದ್ದ ಗೀತಾ ಕಲ್ಯಾಣ್ ಕದಮ್ (22) ಬುಧವಾರ ಸ್ನೇಹಿತನ ಕಿರುಕುಳ ತಾಳಲಾರದೇ ಹಾಸ್ಟೇಲ್​ನಲ್ಲಿ ನೇಣಿಗೆ ಶರಣಾಗಿದ್ದಾಳೆ.

ಯುವತಿ ಡೆತ್​ನೋಟ್​ನಲ್ಲಿ 'ತನ್ನ ಸಾವಿಗೆ ಕಾಲೇಜಿನ ಸ್ನೇಹಿತ ಆದೇಶ್​ ಚೌಧರಿ ಕಾರಣ. ಆತ ಫೋಟೋ ಬಳಸಿಕೊಂಡಿ ಕಿರುಕುಳ ನೀಡುತ್ತಿದ್ದ. ಅವನ ಕಿರುಕುಳ ತಾಳಲಾರದೇ ಒಬ್ಬಂಟಿಯಾಗಿರ ಬೇಕಾಯಿತು. ಆದರೂ ತೊಂದರೆ ಕೊಡುತ್ತಿದ್ದ. ಅವನಿಗೆ ಗಲ್ಲು ಶಿಕ್ಷೆ ಆಗಬೇಕು' ಎಂದು ಬರೆದುಕೊಂಡಿದ್ದಾರೆ.

ಕಾಲೇಜಿನ ನಿರ್ದೇಶಕರು ಮತ್ತು ಅವಳ ಸ್ನೇಹಿತರು ಈ ರೀತಿಯ ಘಟನೆಗಳ ಮೇಲೆ ನಿಗಾ ಇಟ್ಟು ತಡೆಯುತ್ತಿದ್ದರೆ ನನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಮೃತ ಗೀತಾ ಅವರ ಸಹೋದರ ಜ್ಞಾನೇಶ್ವರ್ ಕದಂ ದೂರಿದ್ದಾರೆ. ಅಲ್ಲದೇ ಕಾಲೇಜು ಆಡಳಿತ ಮಂಡಳಿ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮುಂಬೈ: ಅಪರಿಚಿತ ವ್ಯಕ್ತಿಯಿಂದ ಬಾಂಬ್ ಸ್ಫೋಟದ ಬೆದರಿಕೆ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.