ಮುಂಬೈ: ದಿನ ಕಳೆದಂತೆ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿ ಬೀಸಲು ಶುರುವಾಗಿದ್ದು, ಇದೀಗ ಈ ಹಿಂದಿನಿಗಿಂತಲೂ ಅತ್ಯಧಿಕ ಕೋವಿಡ್ ಪ್ರಕರಣ ದಾಖಲಾಗಿದ್ದು, ಅಲ್ಲಿನ ಸರ್ಕಾರಕ್ಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.
-
Maharashtra reports 47,827 new COVID19 cases and 202 deaths today; case tally 29,04,076 pic.twitter.com/XUxZmaoLLv
— ANI (@ANI) April 2, 2021 " class="align-text-top noRightClick twitterSection" data="
">Maharashtra reports 47,827 new COVID19 cases and 202 deaths today; case tally 29,04,076 pic.twitter.com/XUxZmaoLLv
— ANI (@ANI) April 2, 2021Maharashtra reports 47,827 new COVID19 cases and 202 deaths today; case tally 29,04,076 pic.twitter.com/XUxZmaoLLv
— ANI (@ANI) April 2, 2021
ಕಳೆದ 24 ಗಂಟೆಗಳಲ್ಲಿ ದಾಖಲೆಯ 47, 827 ಕೋವಿಡ್ ಪ್ರಕರಣ ದಾಖಲಾಗಿದ್ದು, 202 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಪ್ರಮುಖವಾಗಿ ಮುಂಬೈನಲ್ಲೇ ದಾಖಲೆಯ 8832 ಕೋವಿಡ್ ಪ್ರಕರಣ ದಾಖಲಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಪುಣೆ ಜಿಲ್ಲೆಯಲ್ಲಿ 9,086 ಕೋವಿಡ್ ಸೋಂಕಿತ ಪ್ರಕರಣ ಕಾಣಿಸಿಕೊಂಡಿದ್ದು, ಕಳೆದ 24 ಗಂಟೆಯಲ್ಲಿ 58 ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 39,544 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: ಲಾಕ್ಡೌನ್ ಎಚ್ಚರಿಕೆ ನೀಡಿ, ಮಹಾರಾಷ್ಟ್ರದಲ್ಲಿ ಎರಡೇ ದಿನಗಳಲ್ಲಿ ಮತ್ತಷ್ಟು ಕಠಿಣ ನಿಯಮ ಎಂದ ಠಾಕ್ರೆ!
ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಜೋರಾಗಿರುವ ಕಾರಣ ಪುಣೆಯಲ್ಲಿ ಈಗಾಗಲೇ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಇದೇ ವಿಷಯವಾಗಿ ಇಂದು ಜನರನ್ನುದ್ದೇಶಿಸಿ ಮಾತನಾಡಿರುವ ಉದ್ಧವ್ ಠಾಕ್ರೆ ಜನರಿಗೆ ಲಾಕ್ಡೌನ್ ಹೇರಿಕೆ ಮಾಡುವ ಎಚ್ಚರಿಕೆ ನೀಡಿದ್ದು, ಮುಂದಿನ ಎರಡು ದಿನಗಳಲ್ಲಿ ಮತ್ತಷ್ಟು ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.