ಮಹಾರಾಷ್ಟ್ರ: ದಿನನಿತ್ಯ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಂದ ಎರಡನೇ ಹಂತದ ಕೊರೊನಾ ಭೀಕರತೆ ಎಷ್ಟಿದೆ ಎಂಬುದನ್ನು ತಿಳಿಯುವಂತಾಗಿದೆ.
ಕಳೆದ 24 ಗಂಟೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಭಾರತ ಕಳೆದ 100 ದಿನಗಳ ದಾಖಲೆಯನ್ನು ಮುರಿದಿದೆ. ಕಳೆದ 102 ದಿನಗಳಲ್ಲಿ ಇಂದು ಒಂದೇ ದಿನ ಇಷ್ಟು ಸಂಖ್ಯೆ ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ ರಾಜ್ಯವು 25,833 ಪ್ರಕರಣಗಳನ್ನು ವರದಿ ಮಾಡಿದ್ದು, 12,764 ಜನ ಗುಣಮುಖರಾದರೆ, 58 ಸಾವು ಸಂಭವಿಸಿದೆ. ಮಹಾರಾಷ್ಟ್ರವು ರಾಷ್ಟ್ರೀಯ ಕೊರೊನಾ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ವರ್ಷ ಕೂಡ ಮಹಾರಾಷ್ಟ್ರ ಕೊರೊನಾ ಹೆಚ್ಚಳದಲ್ಲಿ ಮುಂಚೂಣಿಯಲ್ಲಿತ್ತು.