ETV Bharat / bharat

ಮಹಾರಾಷ್ಟ್ರದಲ್ಲಿ 57,640 ಕೋವಿಡ್​ ಕೇಸ್, 920 ಜನರು ಬಲಿ, ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣ ದಾಖಲು? - ಕೇರಳ ಕೊರೊನಾ ಅಪಡೇಟ್​

ದೇಶದಲ್ಲಿ ಎರಡನೇ ಹಂತದ ಕೋವಿಡ್​ ಅಲೆ ಜೋರಾಗಿ ಬೀಸುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಸಾವಿರಾರು ಹೊಸ ಪ್ರಕರಣ ಕಾಣಿಸಿಕೊಳ್ಳುತ್ತಿವೆ.

Maharashtra covid
Maharashtra covid
author img

By

Published : May 5, 2021, 8:55 PM IST

Updated : May 5, 2021, 9:47 PM IST

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ಎರಡನೇ ಅಲೆ ಊಹೆಗೂ ನಿಲುಕದಂತೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು, ನಿತ್ಯ ಲಕ್ಷಾಂತರ ಹೊಸ ಸೋಂಕಿತ ಪ್ರಕರಣ ದಾಖಲಾಗುತ್ತಿವೆ.

ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಮಹಾಸ್ಫೋಟವಾಗ್ತಿದ್ದು, ಇಂದು ಕೂಡ ದಾಖಲೆಯ 57, 640 ಪ್ರಕರಣ ಕಾಣಿಸಿಕೊಂಡಿದ್ದು, ದಾಖಲೆಯ 920 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಆದರೆ, ಮುಂಬೈನಲ್ಲಿ ಮಾತ್ರ 3,879 ಪ್ರಕರಣ ಕಾಣಿಸಿಕೊಂಡಿವೆ.

  • Maharashtra reports 57,640 fresh COVID19 positive cases, 57,006 discharges, and 920 deaths

    Total cases: 48,80,542
    Total active cases: 6,41,596
    Total recoveries: 41,64,098
    Death toll: 72,662 pic.twitter.com/79SuP8SkwQ

    — ANI (@ANI) May 5, 2021 " class="align-text-top noRightClick twitterSection" data=" ">

ಉಳಿದಂತೆ ತಮಿಳುನಾಡಿನಲ್ಲಿ 23,310 ಪ್ರಕರಣ ದಾಖಲಾಗಿದ್ದು, 167 ಜನರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದಲ್ಲಿ 3,842 ಪ್ರಕರಣ, ಮಧ್ಯಪ್ರದೇಶದಲ್ಲಿ 12,319 ಸೋಂಕಿತ ಕೇಸ್,ಗುಜರಾತ್​ನಲ್ಲಿ 12,955 ಪ್ರಕರಣ, ಕರ್ನಾಟಕದಲ್ಲಿ 50,112 ಕೋವಿಡ್​ ಕೇಸ್​ ದಾಖಲಾಗಿವೆ.

ಇದನ್ನೂ ಓದಿ: ಮಹಾರಾಷ್ಟ್ರ ಮೀರಿಸುವಂತ ಕರ್ನಾಟಕ, ರಾಜ್ಯದಲ್ಲಿ ಅರ್ಧ ಲಕ್ಷ ಕೋವಿಡ್​ ಕೇಸ್​, 346 ಬಲಿ

ಮಣಿಪುರದಲ್ಲಿ 397 ಪ್ರಕರಣ, ರಾಜಸ್ಥಾನದಲ್ಲಿ 16,815 ಕೇಸ್​,ಆಂಧ್ರಪ್ರದೇಶದಲ್ಲಿ 22,204 ಕೇಸ್​,ಗೋವಾದಲ್ಲಿ 3,496 ಪ್ರಕರಣ, ಉತ್ತರಾಖಂಡ್​ನಲ್ಲಿ 7,783 ಪ್ರಕರಣ, ಕೇರಳದಲ್ಲಿ ದಾಖಲೆಯ 41,953 ಪ್ರಕರಣ ಕಾಣಿಸಿಕೊಂಡಿವೆ.

ಪಶ್ಚಿಮ ಬಂಗಾಳದಲ್ಲಿ 18,102 ಕೋವಿಡ್​ ಪ್ರಕರಣ, ಹರಿಯಾಣದಲ್ಲಿ 15,416 ಕೇಸ್​,ಪಂಜಾಬ್​ನಲ್ಲಿ 8015 ಕೊರೊನಾ ಪ್ರಕರಣ ಕಾಣಿಸಿಕೊಂಡಿವೆ.

Last Updated : May 5, 2021, 9:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.