ETV Bharat / bharat

Maharashtra Politics: ಎನ್​ಸಿಪಿ ಪಕ್ಷ, ಚಿಹ್ನೆಗಾಗಿ ಅಜಿತ್ ಬಣದ ಅರ್ಜಿ: ಶರದ್ ಬಣದಿಂದ ಕೇವಿಯಟ್ - 24 ಶಾಸಕರು ಅಜಿತ್ ಪವಾರ್

ಎನ್​ಸಿಪಿ ಅಜಿತ್ ಪವಾರ್ ಬಣ ಪಕ್ಷ ಹಾಗೂ ಅದರ ಚಿಹ್ನೆಯ ಮೇಲೆ ಅಧಿಪತ್ಯ ಸಾಧಿಸಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಿದೆ. ಆದರೆ ಇದಕ್ಕೂ ಮುನ್ನ ತನ್ನ ವಾದವನ್ನೂ ಆಲಿಸುವಂತೆ ಪವಾರ್ ಬಣ ಕೇವಿಯಟ್ ಸಲ್ಲಿಸಿದೆ.

Sharad Pawars caveat file in  Election Commission

author img

By

Published : Jul 5, 2023, 1:16 PM IST

ಮುಂಬೈ : ಎನ್‌ಸಿಪಿಯ ಅಜಿತ್ ಪವಾರ್ ನೇತೃತ್ವದ ಗುಂಪು ಶೀಘ್ರದಲ್ಲೇ ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಿದೆ. ಈ ಕುರಿತು ಮಾಹಿತಿ ನೀಡಿದ ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್ ಕಲ್ಸೆ, ಅಜಿತ್ ಪವಾರ್ ಅವರು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಪಡೆದುಕೊಳ್ಳಲು ಇಸಿಐ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದರು.

"ಎನ್​ಸಿಪಿಯನ್ನು ತಾವು ಪ್ರತಿನಿಧಿಸುವುದಾಗಿ ಅಜಿತ್ ಪವಾರ್ ಹೇಳುವುದಾದರೆ ಅವರು ಇಸಿಐನಿಂದ ಅನುಮೋದನೆ ಪಡೆಯಬೇಕು. ಇದಕ್ಕಾಗಿ ಅವರು ಮೂರು ಹಂತದ ಪ್ರಕ್ರಿಯೆಯನ್ನು ದಾಟಬೇಕಾಗುತ್ತದೆ." ಎಂದು ಕಲ್ಸೆ ಮಾಧ್ಯಮಗಳಿಗೆ ತಿಳಿಸಿದರು. ಆದರೆ ಪಕ್ಷದ ಹೆಸರು ಮತ್ತು ಚಿಹ್ನೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಚುನಾವಣಾ ಆಯೋಗವು ತಮ್ಮ ವಾದವನ್ನು ಆಲಿಸಬೇಕೆಂದು ಶರದ್ ಪವಾರ್ ಬಣ ಈಗಾಗಲೇ ಕೇವಿಯಟ್ ಸಲ್ಲಿಸಿದೆ.

ಪಕ್ಷದ ಬಹುತೇಕ ಶಾಸಕರ ಬೆಂಬಲ ತಮಗಿದೆ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಎರಡೂ ಬಣಗಳು ಇಂದು ಪ್ರಮುಖ ಸಭೆಗಳನ್ನು ನಡೆಸುತ್ತಿವೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದೆ. ಪ್ರಸ್ತುತ 24 ಶಾಸಕರು ಅಜಿತ್ ಪವಾರ್ ಜೊತೆಗಿದ್ದು, 14 ಶಾಸಕರು ಶರದ್ ಪವಾರ್ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ.

ಮುಂಬೈನಲ್ಲಿ ನಡೆಯುತ್ತಿರುವ ಪ್ರಮುಖ ಸಭೆಗೆ ಹಾಜರಾಗುವಂತೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದ್ದರೆ, ಅಜಿತ್ ಪವಾರ್ ಬಣ ಎಲ್ಲಾ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಇತರರು ಬಾಂದ್ರಾದಲ್ಲಿ ನಡೆಯುತ್ತಿರುವ ಸಭೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಅಜಿತ್ ಪವಾರ್ ಅವರು ಆಡಳಿತಾರೂಢ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಭಾನುವಾರ ನಾಟಕೀಯ ಬೆಳವಣಿಗೆಗಳಾದವು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯನಾಗಿರುವ ಎನ್​ಸಿಪಿ ನಾಯಕ ಅಜಿತ್ ಪವಾರ್ ಭಾನುವಾರ ಪಕ್ಷದ ಹಲವಾರು ಶಾಸಕರೊಂದಿಗೆ ಆಡಳಿತಾರೂಢ ಸರ್ಕಾರಕ್ಕೆ ಬೆಂಬಲ ಸೂಚಿಸಿದರು.

ಇದರೊಂದಿಗೆ ಭಾನುವಾರ ಮಧ್ಯಾಹ್ನ ಅಜಿತ್ ಪವಾರ್ ಐದನೇ ಬಾರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, 1978 ರಲ್ಲಿ ಈ ಸ್ಥಾನವನ್ನು ರಚಿಸಿದಾಗಿನಿಂದ ಈ ಸ್ಥಾನಕ್ಕೆ ಅತಿ ಹೆಚ್ಚು ಬಾರಿ ನೇಮಕಗೊಂಡವರಾಗಿ ಅಜಿತ್ ಪವಾರ್ ದಾಖಲೆ ಬರೆದರು. ಈಗಾಗಲೇ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದು, ಅಜಿತ್ ಪವಾರ್ ಎರಡನೇ ಡಿಸಿಎಂ ಆಗಿದ್ದಾರೆ.

ಎನ್​ಸಿಪಿ ತ್ಯಜಿಸಲು ಬಯಸಿದ್ದೆ ಎಂದ ಸಂಸದ ಅಮೋಲ್ ಕೋಲ್ಹೆ : ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾವು ಎನ್​ಸಿಪಿ ತೊರೆಯಲು ನಿರ್ಧರಿಸಿದ್ದಾಗಿ ಲೋಕಸಭಾ ಸಂಸದ ಅಮೋಲ್ ಕೋಲ್ಹೆ ಹೇಳಿದ್ದಾರೆ. ಆದರೆ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ತಮ್ಮ ಅಭಿಪ್ರಾಯ ಬದಲಿಸಿಕೊಂಡಿರುವುದಾಗಿ ಅವರು ತಿಳಿಸಿದರು. ವೃತ್ತಿಯಲ್ಲಿ ನಟರಾದ ಕೊಲ್ಹೆ ಅವರು ಭಾನುವಾರ ರಾಜಭವನದಲ್ಲಿ ನಡೆದ ಎನ್‌ಸಿಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಎಂಟು ಪಕ್ಷದ ಶಾಸಕರ ಪ್ರಮಾಣ ವಚನ ಸಮಾರಂಭದಲ್ಲಿ ಹಾಜರಿದ್ದರು. ಆದರೆ ನಂತರ ಹೇಳಿಕೆ ಬಿಡುಗಡೆ ಮಾಡಿ ತಾವು ಶರದ್ ಪವಾರ್ ಅವರೊಂದಿಗೇ ಇರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ : Gravity Hole: ಹಿಂದೂ ಮಹಾಸಾಗರದಲ್ಲಿನ ಗುರುತ್ವಾಕರ್ಷಣೆಯ ರಂಧ್ರದ ಕಾರಣ ಪತ್ತೆ ಮಾಡಿದ ಭಾರತೀಯ ವಿಜ್ಞಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.