ETV Bharat / bharat

'ಮಹಾ ಆಘಾಡಿ'ಗೆ ಸಿಎಂ ಉದ್ಧವ್‌ ಠಾಕ್ರೆ ಕೃತಜ್ಞತೆ; ಮಹಾರಾಷ್ಟ್ರ ಸರ್ಕಾರ ಪತನ ನಿಶ್ಚಿತ? - ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಮುಕ್ತಾಯ

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೇತೃತ್ವದಲ್ಲಿ ನಡೆಯುತ್ತಿದ್ದ ಸಂಪುಟ ಸಭೆ ಮುಕ್ತಾಯಗೊಂಡಿದ್ದು ಕಾಂಗ್ರೆಸ್​, ಎನ್​ಸಿಪಿ ಸಚಿವರು ಉದ್ಧವ್‌ ಠಾಕ್ರೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಂ ಕೂಡ ಎಲ್ಲಾ ಸಚಿವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಸಿಎಂ ಉದ್ಧವ್​ ಠಾಕ್ರೆ ಪ 'ಮಹಾಅಘಾಡಿ'ಗೆ ಸಿಎಂ ಉದ್ಧವ್​ ಕೃತಜ್ಞತೆ, ಸರ್ಕಾರ ಪತನದ ಲಕ್ಷಣವೇ?ರ ಸಚಿವರ ಬ್ಯಾಟಿಂಗ್
'ಮಹಾಅಘಾಡಿ'ಗೆ ಸಿಎಂ ಉದ್ಧವ್​ ಕೃತಜ್ಞತೆ, ಸರ್ಕಾರ ಪತನದ ಲಕ್ಷಣವೇ?
author img

By

Published : Jun 29, 2022, 8:09 PM IST

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಇಂದು ನಡೆದ ಸಚಿವ ಸಂಪುಟದಲ್ಲಿ ಮಹಾ ಆಘಾಡಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 2.5 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ್ದೀರಿ. ನಿಮ್ಮ ಬೆಂಬಲವನ್ನು ಇನ್ನು ಮುಂದೆಯೂ ಕೋರುತ್ತೇನೆ ಎಂದು ಭಾವುಕ ಹೇಳಿಕೆ ನೀಡಿದ್ದಾರೆ. ಇದು ನಾಳೆ ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಸರ್ಕಾರ ಪತನದ ಲಕ್ಷಣ ಎಂದೇ ವಿಶ್ಲೇಷಿಸಲಾಗಿದೆ.

ಸಚಿವ ಸಂಪುಟ ಸಭೆ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಸಚಿವರು, "ಸಿಎಂ ಉದ್ಧವ್​ ಠಾಕ್ರೆ ಅವರು 3 ಪಕ್ಷಗಳಿಗೆ ಕೃತಜ್ಞತೆ ಸಲ್ಲಿಸಿದರು. ನಾಳೆ, ವಿಶ್ವಾಸ ಮತ ನಡೆಯುತ್ತದೆ. ಅದು ಸರ್ಕಾರದ ಅಂತ್ಯವೋ ಅಥವಾ ಇಲ್ಲವೋ ಎಂದು ನಾಳೆಯೇ ಗೊತ್ತಾಗಲಿದೆ. ಎಲ್ಲರೂ ಒಗ್ಗೂಡಿ 2.5 ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದೇವೆ. ಇಷ್ಟು ದಿನ ಬೆಂಬಲಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಸಿಎಂ ಹೇಳಿದ್ದಾರೆ" ಎಂದರು.

ಉದ್ಧವ್​ ಪರ ಸಚಿವರ ಬ್ಯಾಟಿಂಗ್​: "ಉದ್ಧವ್ ಠಾಕ್ರೆ ಅವರಿಗೆ ಯಾವುದೇ ಪೂರ್ವ ಆಡಳಿತದ ಅನುಭವ ಇರಲಿಲ್ಲವಾದರೂ, ಕೊರೊನಾವನ್ನು ಉತ್ತಮವಾಗಿ ನಿಭಾಯಿಸಿದರು. ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮತ್ತೆ ಕೆಲಸಗಳಲ್ಲಿ ತೊಡಗಿಸಿಕೊಂಡರು. ಈ ರೀತಿಯಾಗಿ ಕೆಲಸ ಮಾಡಿದ ಒಬ್ಬ ವ್ಯಕ್ತಿಯ ಹೆಸರನ್ನು ತೋರಿಸಿ" ಎಂದು ಕಾಂಗ್ರೆಸ್​ ಮುಖಂಡ, ಸಚಿವ ಸುನೀಲ್​ ಕೇದಾರ್ ಸವಾಲು ಹಾಕಿದರು.

"ಉದ್ಧವ್​ ಠಾಕ್ರೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಕೊರೊನಾದಂತಹ ಮಾರಕ ರೋಗಗಳ ವಿರುದ್ಧ ಉತ್ತಮವಾಗಿ ಕೆಲಸ ಮಾಡಿದರು. ಇದನ್ನು ಪ್ರಧಾನಿ ಮೋದಿ ಕೂಡ ಗುರುತಿಸಿದ್ದಾರೆ. ಅಂತಹ ವ್ಯಕ್ತಿಗೇ ವಂಚನೆ ಎದುರಾಗಿದೆ. ಜನರೇ ಈ ಬಗ್ಗೆ ತೀರ್ಮಾನ ಮಾಡಲಿ" ಎಂದರು.

ಮೋದಿಯೇ ಮೆಚ್ಚಿದ್ಧರು: ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಅವರು ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದರು. 2.5 ವರ್ಷಗಳ ಮಹಾ ಆಘಾಡಿ ಸರ್ಕಾರದಲ್ಲಿ ಕೊರೊನಾ ವಿರುದ್ಧ ತೊಡೆತಟ್ಟಿ ನಿಂತರು. ಇದನ್ನು ಪ್ರಧಾನಿ ಮೋದಿ ಅವರೇ ಗುರುತಿಸಿದ್ದಾರೆ. ಇಂತಹ ನಾಯಕನಿಗೆ ಅವರ ಪಕ್ಷದ ನಾಯಕರೇ ಬೆಂಬಲ ನೀಡುತ್ತಿಲ್ಲ" ಎಂದು ಸಚಿವ ಸುನೀಲ್​ ಕೇದಾರ್​ ಹೇಳಿದರು.

"ಸಿಎಂ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿಯ ಬೆಂಬಲವನ್ನು ಪಡೆದರು. ಆದರೆ ದುರದೃಷ್ಟವಶಾತ್ ತಮ್ಮದೇ ಪಕ್ಷದ (ಶಿವಸೇನೆ) ಬೆಂಬಲ ಸಿಗಲಿಲ್ಲ. ನಾವು ಅವರಿಗೆ ಸಹಕಾರ ನೀಡುತ್ತೇವೆ. ಮುಂದೆಯೂ ನಮ್ಮಿಂದ ಇದೇ ರೀತಿಯ ಸಹಕಾರವನ್ನು ನಿರೀಕ್ಷಿಸುವುದಾಗಿ ಸಿಎಂ ಹೇಳಿದರು" ಎಂದು ಇನ್ನೊಬ್ಬ ಸಚಿವ, ಎನ್​ಸಿಪಿ ನಾಯಕ ಜಯಂತ್ ಪಾಟೀಲ್ ಹೇಳಿದರು.

ಇದನ್ನೂ ಓದಿ: ಮಹಾರಾಷ್ಟ್ರದ 2 ನಗರಗಳಿಗೆ ಮರುನಾಮಕರಣ: ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಠಾಕ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.