ಮುಂಬೈ: ಶಿವಸೇನೆಯ ಫೈರ್ ಬ್ರಾಂಡ್ ನಾಯಕ ಹಾಗೂ ಎಂವಿಎ ಸರ್ಕಾರದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂದೆ, ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ನಂತರ ಹಲವಾರು ಶಿವಸೇನಾ ಶಾಸಕರು ಅವರೊಂದಿಗೆ ತೆರಳಿದ್ದಾರೆ. ಈ ಮಧ್ಯೆ ಸಿಎಂ ಹಾಗೂ ಶಿವಸೇನೆ ಅಧ್ಯಕ್ಷರೂ ಆಗಿರುವ ಉದ್ಧವ್ ಠಾಕ್ರೆ ತಮ್ಮ ಶಾಸಕರಿಗೆ ಭಾವುಕವಾದ ಮನವಿ ಮಾಡಿದ್ದಾರೆ. ಸಿಎಂ ಮನವಿಯ ನಂತರವೂ ಮತ್ತೆ 7 ಶಾಸಕರು ಉದ್ಧವ್ರನ್ನು ತೊರೆದು ಏಕನಾಥ್ ಗ್ರೂಪ್ ಸೇರಿಕೊಂಡಿದ್ದಾರೆ. ಹೀಗಾಗಿ 55 ಶಾಸಕರ ಪೈಕಿ ಈಗ ಉದ್ಧವ್ ಪಾಳಯದಲ್ಲಿ ಕೇವಲ 13 ಶಾಸಕರು ಉಳಿದಂತಾಗಿದೆ.
ಏಕನಾಥ್ ಶಿಂದೆ ಹಾಗೂ ಶಿವಸೇನೆ ನಡುವೆ ಜಗಳ ಏಕೆ?: ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗಳಲ್ಲಿ ಅಡ್ಡಮತದಾನದಿಂದ ಶಿವಸೇನೆ ಹಾಗೂ ಕಾಂಗ್ರೆಸ್ ಎರಡಕ್ಕೂ ಭಾರಿ ಅಸಮಾಧಾನ ಉಂಟಾಗಿತ್ತು. ಅಡ್ಡಮತದಾನಕ್ಕೆ ಶಿವಸೇನಾ ಮುಖಂಡ ಏಕನಾಥ್ ಶಿಂದೆ ಅವರೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿಂದೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ಸೋಮವಾರ ಸಂಜೆ ಸೂರತ್ಗೆ ಹಾರಿದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆಯ ವಾತಾವರಣ ಕಾಣಿಸಿಕೊಂಡಿತು. ಸದ್ಯ ಶಿವಸೇನಾ ಪಕ್ಷವು ಇಬ್ಭಾಗವಾಗುವ ಹಾದಿಯಲ್ಲಿದೆ ಎನ್ನಲಾಗಿದೆ. 34 ಶಾಸಕರು ಏಕನಾಥ್ ಶಿಂದೆ ಜೊತೆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಕನಾಥ್ ಶಿಂದೆ ಜೊತೆಗಿರುವ ಶಾಸಕರು: ಶಂಭುರಾಜೆ ದೇಸಾಯಿ, ಅಬ್ದುಲ್ ಸತ್ತಾರ್, ಬಚ್ಚು ಕಡು, ಸಂದೀಪನ್ ಭೂಮಾರೆ, ಪ್ರತಾಪ್ ಸರನಾಯಿಕ್, ಸುಹಾಸ ಕಾಂದೆ, ತಾನಾಜಿ ಸಾವಂತ, ಭರತ್ ಗೊಗಾವಾಲೆ, ಯಾಮಿನಿ ಜಾಧವ್, ಅನಿಲ ಬಾಬರ್, ಪ್ರಕಾಶ ಸುರ್ವೆ, ಬಾಲಾಜಿ ಕಲ್ಯಾಣಕರ್, ಪ್ರಕಾಶ ಅಬಿತ್ಕರ್, ಸಂಜಯ ಶಿರಸಾಟ್, ಸ್ರೀನಿವಾಸ ವನಗಾ, ಮಹೇಶ ಶಿಂದೆ, ಸಂಜಯ ರಾಯಮುಲ್ಕರ್, ವಿಶ್ವನಾಥ್ ಭೋಯಿರ್, ಸೀತಾರಾಮ್ ಮೋರೆ, ರಮೇಶ ಬೊರ್ನಾರೆ, ಚಿಮನರಾವ್ ಪಾಟೀಲ, ಲಾಹುಜಿ ಬಾಪು ಪಾಟೀಲ, ಮಹೇಂದ್ರ ದಳವಿ, ಪ್ರದೀಪ ಜೈಸ್ವಾಲ್, ಮಹೇಂದ್ರ ಥೊರ್ವೆ, ಕಿಶೋರ ಪಾಟೀಲ, ಗ್ಯಾನರಾಜ ಚೌಗುಲೆ, ಬಾಲಾಜಿ ಕಿಣೇಕರ್, ಉದಯ್ ಸಿಂಗ್ ರಾಜಪೂತ್, ರಾಜಕುಮಾರ ಪಟೇಲ, ಲತಾ ಸೋನಾವಣೆ, ನಿತಿನ ದೇಶಮುಖ್, ಸಂಜಯ ಗಾಯಕ್ವಾಡ್, ನರೇಂದ್ರ ಮಾಂಡೇಕರ್.
ನಂತರ ಬುಧವಾರ ಮಧ್ಯರಾತ್ರಿ ಮತ್ತೆ 7 ಶಿವಸೇನಾ ಶಾಸಕರು ನಾಟ್ ರಿಚೇಬಲ್ ಆಗಿದ್ದರು. ಇವರಲ್ಲಿ ಸದಾ ಸರ್ವಂಕರ್, ಮಂಗೇಶ ಕುಡಾಳ್ಕರ್ ಇಂದು ಬೆಳಗ್ಗೆ ಗುವಾಹಟಿ ತಲುಪಿದರು. ದಾದಾ ಭುಸೆ, ಉದಯ್ ಸಾಮಂತ್, ದೀಪಕ್ ಕೇಸರ್ಕರ್, ಸಂಜಯ್ ರಾಠೋಡ್, ದಿಲೀಪ್ ಮಾಮಾ ಲಾಂಡೆ ಇವರೂ ನಾಟ್ ರೀಚೆಬಲ್ ಆಗಿದ್ದು, ಇವರೂ ಸಹ ಈಗ ಗುವಾಹಟಿ ತಲುಪಿದ್ದಾರೆ ಎಂಬ ಮಾಹಿತಿ ಬಂದಿದೆ.
ಸಿಎಂ ಉದ್ಧವ್ ಠಾಕ್ರೆ ಜೊತೆಗಿರುವ ಶಾಸಕರು: ಅಜಯ್ ಚೌಧರಿ, ರಮೇಶ ಕರಗಾಂವಕರ್, ಸುನೀಲ ರಾವುತ್, ರವೀಂದ್ರ ವೈಕಾರ್, ಆದಿತ್ಯ ಠಾಕ್ರೆ, ಪ್ರಕಾಶ ಫತರ್ಫೇಕರ್, ಸುನೀಲ ಪ್ರಭು, ಸಂಜಯ್ ಪೋತ್ನಿಸ್, ನಿತಿನ ದೇಶಮುಖ್, ರಾಜನ್ ಸಾಳ್ವಿ, ವೈಭವ್ ನಾಯ್ಕ್, ಕೈಲಾಸ್ ಪಾಟೀಲ್, ಭಾಸ್ಕರ್ ಜಾಧವ. ಒಟ್ಟು ಸಂಖ್ಯೆ -13
ಇದನ್ನು ಓದಿ:ಗುವಾಹಟಿಯಲ್ಲಿ ಹೆಚ್ಚುತ್ತಿದೆ ಶಿಂಧೆ ಬಲ.. ಅಲಗಾಡುತ್ತಿದೆ ಮಹಾ ಅಘಾಡಿ ಬುಡ, ಸಭೆ ಕರೆದ ಎನ್ಸಿಪಿ