ಅಯೋಧ್ಯೆ: ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಇಂದು ಅಯೋಧ್ಯೆಗೆ ಆಗಮಿಸಲಿದ್ದಾರೆ. ಸುಮಾರು 6 ಗಂಟೆಗಳ ಕಾಲ ಅವರು ಅಯೋಧ್ಯೆಯಲ್ಲಿ ತಂಗಲಿದ್ದಾರೆ. ಆದಿತ್ಯ ಠಾಕ್ರೆ ಅವರು ಶ್ರೀರಾಮ ಲಲ್ಲಾ ದರ್ಶನ ಮಾಡಲಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದಿತ್ಯ ಠಾಕ್ರೆ ಭೇಟಿಗೂ ಮುನ್ನ ರಾಜ್ಯಸಭಾ ಸಂಸದ ಸಂಜಯ್ ರಾವತ್ ಸೋಮವಾರ ಅಯೋಧ್ಯೆಗೆ ಆಗಮಿಸಿ ಸಿದ್ಧತೆಗಳ ಪರಿಶೀಲನೆ ನಡೆಸಿದ್ದರು.
ಠಾಕ್ರೆ ಕಾರ್ಯಕ್ರಮಗಳ ಪಟ್ಟಿ ಇಂತಿದೆ.
11.00 ಗಂಟೆಗೆ ಲಖನೌ ವಿಮಾನ ನಿಲ್ದಾಣ ತಲುಪಲಿರುವ ಆದಿತ್ಯ
ಮಧ್ಯಾಹ್ನ 1.30ಕ್ಕೆ ಅಯೋಧ್ಯೆಗೆ ಆಗಮನ
ಮಧ್ಯಾಹ್ನ 3.30ಕ್ಕೆ ಆದಿತ್ಯ ಠಾಕ್ರೆ ಸುದ್ದಿಗೋಷ್ಠಿ
ಸಂಜೆ 4.45ಕ್ಕೆ ರಾಮನಗರದ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ
ಸಂಜೆ 5:30ಕ್ಕೆ ರಾಮಲಲ್ಲ ದರ್ಶನ, ಶ್ರೀರಾಮ ಜನ್ಮಭೂಮಿಗೆ ಭೇಟಿ
ಸಂಜೆ 6.30ಕ್ಕೆ ಹೊಸ ಘಾಟ್ ಅಯೋಧ್ಯೆಯಲ್ಲಿ ನಡೆಯಲಿರುವ ಸರಯು ಆರತಿಯಲ್ಲಿ ಠಾಕ್ರೆ ಭಾಗಿ
ರಾತ್ರಿ 7.30ಕ್ಕೆ ಲಖನೌಗೆ ವಾಪಸ್
ಉದ್ಧವ್ ಠಾಕ್ರೆ ಅವರು 2018 ರಿಂದ ಮೂರು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಆದಿತ್ಯ ಠಾಕ್ರೆ ಈ ಹಿಂದೆ ಜೂನ್ 10 ರಂದು ಅಯೋಧ್ಯೆಗೆ ಭೇಟಿ ನೀಡಬೇಕಿತ್ತು. ಆದರೆ, ರಾಜ್ಯಸಭಾ ಚುನಾವಣೆಯ ದೃಷ್ಟಿಯಿಂದ ಅವರು ಅಯೋಧ್ಯೆಗೆ ಭೇಟಿ ನೀಡುವ ದಿನಾಂಕವನ್ನು ಜೂನ್ 15 ಕ್ಕೆ ಬದಲಾಯಿಸಿದ್ದರು.
ಇದನ್ನು ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಂದು ಕೂಡ ರಾಹುಲ್ ಗಾಂಧಿಗೆ ಇಡಿ ಡ್ರಿಲ್