ETV Bharat / bharat

ಮಹಿಳೆ ಕೊಂದು ಸಾಕ್ಷ್ಯ ನಾಶಪಡಿಸಲು ಯತ್ನ.. ಮಹಾರಾಷ್ಟ್ರದ ಪತ್ರಕರ್ತನ ಬಂಧನ - ಮಹಾರಾಷ್ಟ್ರದ ಔರಂಗಾಬಾದ್

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 35 ವರ್ಷದ ಪತ್ರಕರ್ತನನ್ನು ಬಂಧಿಸಲಾಗಿದೆ. ತಾನು ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು ಸಾಕ್ಷ್ಯ ನಾಶಪಡಿಸಲು ಆಕೆಯ ದೇಹವನ್ನು ಕತ್ತರಿಸಿದ್ದಾನೆ ಎಂದು ಆರೋಪಿಸಲಾಗಿದೆ.

Maharashtra Journalist Arrested For Killing Lover
ಸಾಂದರ್ಭಿಕ ಚಿತ್ರ
author img

By

Published : Aug 19, 2022, 8:57 AM IST

Updated : Aug 19, 2022, 9:07 AM IST

ಔರಂಗಾಬಾದ್ (ಮಹಾರಾಷ್ಟ್ರ): ತಾನು ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು ಸಾಕ್ಷ್ಯ ನಾಶಪಡಿಸಲು ಅವರ ದೇಹವನ್ನು ಕತ್ತರಿಸಿದ ಆರೋಪದ ಮೇಲೆ ಪತ್ರಕರ್ತನನ್ನು ಮಹಾರಾಷ್ಟ್ರದ ಔರಂಗಾಬಾದ್​​ನಲ್ಲಿ ಬಂಧಿಸಲಾಗಿದೆ. ಫ್ರೀಲಾನ್ಸ್ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಸೌರಭ್ ಲಾಖೆ (35) ಬಂಧಿತ ಆರೋಪಿ.

ಜಿಲ್ಲೆಯ ಶಿಯುರ್ ನಿವಾಸಿಯಾಗಿದ್ದ 24 ವರ್ಷದ ಮಹಿಳೆ ಮೂರು ವರ್ಷದ ಮಗುವನ್ನು ಹೊಂದಿದ್ದರು. ಸೌರಭ್ ಲಾಖೆಯೊಂದಿಗೆ ಇವರು ಅನೈತಿಕ ಸಂಬಂಧ ಹೊಂದಿದ್ದರಂತೆ. ಇತ್ತೀಚೆಗೆ ಅವರು ತಮ್ಮ ಕುಟುಂಬವನ್ನು ತೊರೆದು ಮಹಾರಾಷ್ಟ್ರದ ಹುಡ್ಕೋ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಲಾಖೆ ಅವಳನ್ನು ಭೇಟಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗಬೇಕೆಂಬ ಅವರ ಬೇಡಿಕೆಯಿಂದ ಕ್ರೋಧಗೊಂಡು ಆ.15 ರಂದು ಮಹಿಳೆಯ ಕತ್ತು ಹಿಸುಕಿ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ. ಮರುದಿನ ಅವನು ಅವಳ ತಲೆ ಮತ್ತು ಕೈಗಳನ್ನು ತೆಗೆದುಕೊಂಡು ಶಿಯುರ್‌ನಲ್ಲಿರುವ ಗೋಡೌನ್‌ನಲ್ಲಿ ಇರಿಸಿದ್ದ. ಬಳಿಕ ಬುಧವಾರ ದೇಹದ ಉಳಿದ ಭಾಗಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಟ್ವೀಟ್ ಮಾಡಿದ್ದಕ್ಕಾಗಿ ಸೌದಿ ಅರೇಬಿಯಾದ ಡಾಕ್ಟರೇಟ್ ವಿದ್ಯಾರ್ಥಿಗೆ 34 ವರ್ಷ ಜೈಲು ಶಿಕ್ಷೆ

Last Updated : Aug 19, 2022, 9:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.