ನಂದೂರ್‌ಬಾರ್(ಮಹಾರಾಷ್ಟ್ರ) : ಅತ್ಯಾಚಾರಕ್ಕೊಳಗಾಗಿ, ಸಾವನ್ನಪ್ಪಿರುವ ಸಂತ್ರಸ್ತೆಯ ಶವವನ್ನು 42 ದಿನಗಳಿಂದ ಉಪ್ಪಿನಲ್ಲಿ ಹೂತಿಟ್ಟು ಪೋಷಕರು ಹೋರಾಟ ನಡೆಸುತ್ತಿದ್ದಾರೆ. ನ್ಯಾಯ ಸಿಗುವವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಮಹಿಳೆಯ ಕುಟುಂಬ ನಿರ್ಧರಿಸಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಕೇವಲ ಆತ್ಮಹತ್ಯೆಯ ಬಗ್ಗೆ ಪೊಲೀಸರು ತನಿಖೆ ಮಾಡಿದ್ದು, ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅತ್ಯಾಚಾರದ ಬಗ್ಗೆ ಪ್ರಕರಣ ದಾಖಲು ಮಾಡಿಲ್ಲ. ಅತ್ಯಾಚಾರದ ಬಗ್ಗೆ ಮರಣೋತ್ತರ ಪರೀಕ್ಷೆಯಲ್ಲೂ ದಾಖಲಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅತ್ಯಾಚಾರದ ಕುರಿತು ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಮಾಡುವವರೆಗೆ ಶವಸಂಸ್ಕಾರ ಮಾಡುವುದಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ.
ಮಹಾರಾಷ್ಟ್ರದ ವಾವಿ ನಿವಾಸಿ ರಂಜಿತ್ ಠಾಕ್ರೆ ಆತನ ಮತ್ತೊರ್ವ ಸ್ನೇಹಿತ ಬಲವಂತವಾಗಿ ವಿವಾಹಿತ ಮಹಿಳೆಯನ್ನು ಆಗಸ್ಟ್ 1 ರಂದು ಕಾರಿನಲ್ಲಿ ಕರೆದೊಯ್ದಿದ್ದರು ಎಂದು ಮೂಲಗಳು ತಿಳಿಸಿವೆ. ನಂತರ ಮಹಿಳೆ ತನ್ನ ಸಂಬಂಧಿಗೆ ಫೋನ್ ಮಾಡಿ ರಂಜಿತ್ ಸೇರಿದಂತೆ ನಾಲ್ವರು ಕಿರುಕುಳ ನೀಡಿದ್ದಾರೆಂದು ತಿಳಿಸಿದ್ದಳು. ಇದರ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು.
ಮಹಿಳೆಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಕುಟುಂಬಸ್ಥರು ಬರುವ ಮುನ್ನವೇ ಆರೋಪಿಗಳು ಆಕೆಯ ಶವವನ್ನು ಕೆಳಗಿಳಿಸಿ ಸಾಕ್ಷ್ಯ ನಾಶಪಡಿಸಿದ್ದಾರೆಂದು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ರಂಜಿತ್ ಠಾಕ್ರೆ ಸೇರಿದಂತೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಆದರೆ ಅತ್ಯಾಚಾರದ ಬಗ್ಗೆ ತನಿಖೆ ನಡೆಸಿಲ್ಲ ಎಂಬ ಕಾರಣಕ್ಕೆ ಶವವನ್ನು 42 ದಿನ ಉಪ್ಪಿನಲ್ಲಿ ಮುಚ್ಚಿಡಲಾಗಿತ್ತು. ಸಾಮಾಜಿಕ ಕಾರ್ಯಕರ್ತೆಯ ಸಹಾಯದಿಂದ ಸಂತ್ರಸ್ತೆಯ ತಂದೆ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿದ್ದಾರೆ.
ಇದನ್ನೂ ಓದಿ : 13ರ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿ, ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಮಾವ