ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಮೀತಿ ಮೀರಿದ್ದು, ಈಗಾಗಲೇ ಸೆಕ್ಷನ್ 144 ಜಾರಿಗೊಳಿಸಿ ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಇದರ ಮಧ್ಯೆ ನಾಳೆ ಮತ್ತೊಂದು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡುವ ಸಾಧ್ಯತೆ ಇದ್ದು, ನಾಳೆ ಇದರ ಬಗ್ಗೆ ನಿರ್ಧಾರ ಹೊರಬರುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ಅದರಲ್ಲಿ ರಾಜ್ಯದಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಉಂಟಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ಜತೆಗೆ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತಷ್ಟು ಕಠಿಣ ರೂಲ್ಸ್: ದಿನಸಿ, ತರಕಾರಿ ಅಂಗಡಿ ನಾಲ್ಕು ಗಂಟೆ ಮಾತ್ರ ಓಪನ್!
ಆರೋಗ್ಯ ಸಚಿವರು ಹೇಳಿದ್ದೇನು!?
-
We have requested the CM to announce a complete lockdown in the state from tomorrow at 8 pm. This was the request of all ministers to CM, now it is his decision: Maharashtra Health Minister Rajesh Tope pic.twitter.com/rik7MTpryC
— ANI (@ANI) April 20, 2021 " class="align-text-top noRightClick twitterSection" data="
">We have requested the CM to announce a complete lockdown in the state from tomorrow at 8 pm. This was the request of all ministers to CM, now it is his decision: Maharashtra Health Minister Rajesh Tope pic.twitter.com/rik7MTpryC
— ANI (@ANI) April 20, 2021We have requested the CM to announce a complete lockdown in the state from tomorrow at 8 pm. This was the request of all ministers to CM, now it is his decision: Maharashtra Health Minister Rajesh Tope pic.twitter.com/rik7MTpryC
— ANI (@ANI) April 20, 2021
ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡುವಂತೆ ಸಚಿವ ಸಂಪುಟದಲ್ಲಿ ಎಲ್ಲ ಸಚಿವರು ಮನವಿ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ರಾಜೇಶ್ ಥೋಪೆ ತಿಳಿಸಿದ್ದಾರೆ. ನಾಳೆ ರಾತ್ರಿ 8 ಗಂಟೆಗೆ ಇದಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
10ನೇ ತರಗತಿ ಪರೀಕ್ಷೆ ರದ್ದು
-
Given the worsening situation of the #Covid-19 pandemic, the Maharashtra government has now decided to cancel the state board exams for class 10th: Maharashtra Minister for School Education, Varsha Gaikwad
— ANI (@ANI) April 20, 2021 " class="align-text-top noRightClick twitterSection" data="
">Given the worsening situation of the #Covid-19 pandemic, the Maharashtra government has now decided to cancel the state board exams for class 10th: Maharashtra Minister for School Education, Varsha Gaikwad
— ANI (@ANI) April 20, 2021Given the worsening situation of the #Covid-19 pandemic, the Maharashtra government has now decided to cancel the state board exams for class 10th: Maharashtra Minister for School Education, Varsha Gaikwad
— ANI (@ANI) April 20, 2021
ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ರಾಜ್ಯದಲ್ಲಿನ 10ನೇ ತರಗತಿ ಪರೀಕ್ಷೆ ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್ ಘೋಷಣೆ ಮಾಡಿದ್ದಾರೆ.