ETV Bharat / bharat

ಅಹಮದ್​ನಗರ ಇನ್ಮುಂದೆ ಅಹಲ್ಯಾನಗರ: ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಘೋಷಣೆ - ahamadnagar ahalya nagara

ಅಹಮದ್‌ನಗರದ ಹೆಸರನ್ನು ಅಹಲ್ಯಾನಗರ ಎಂದು ಬದಲಾಯಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​​ ಶಿಂಧೆ ಬುಧವಾರ ಘೋಷಿಸಿದರು.

maharashtra-city-ahmednagar-renamed-as-ahilya-nagar-announces-cm-eknath-shinde
ಅಹಮದ್​ನಗರ ಇನ್ನುಮುಂದೆ ಅಹಲ್ಯಾನಗರ: ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ
author img

By

Published : May 31, 2023, 10:46 PM IST

ಮುಂಬೈ (ಮಹಾರಾಷ್ಟ್ರ): ಮುಸ್ಲಿಂ ಹೆಸರುಗಳನ್ನು ಹೊಂದಿದ್ದ ನಗರಗಳ ಮರುನಾಮಕರಣ ಮಾಡಲಾದ ನಗರಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಮಹಾರಾಷ್ಟ್ರದ ಅಹಮದ್​ನಗರವನ್ನು ಅಹಲ್ಯಾ ನಗರ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​​ ಶಿಂಧೆ ಬುಧವಾರ ಅಹಮದ್​ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.

ಅಹಮದ್‌ನಗರದಲ್ಲಿ ನಡೆದ ಮರಾಠ ಮಾಳ್ವ ಸಾಮ್ರಾಜ್ಯದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್​ ಶಿಂಧೆ ಹಲವಾರು ರಾಜ್ಯ ಸಚಿವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​​ ಮಾತನಾಡಿ, ಭಾರತದಾದ್ಯಂತ ದೇವಾಲಯಗಳು ಮತ್ತು 'ಧರ್ಮಶಾಲೆ' (ಸಾರ್ವಜನಿಕ ವಿಶ್ರಾಂತಿ ಗೃಹಗಳು) ನಿರ್ಮಿಸಲು ಹೆಸರುವಾಸಿಯಾಗಿರುವ ರಾಜಮಾತೆ ಅಹಲ್ಯಾದೇವಿ ಹೋಳ್ಕರ್ ಇಲ್ಲದಿದ್ದರೆ ಕಾಶಿ ಉಳಿಯುತ್ತಿರಲಿಲ್ಲ. ಆಕೆ ಇಲ್ಲದಿದ್ದರೆ ನಮಗೆ ಶಿವನ ದೇಗುಲಗಳೂ ಇರುತ್ತಿರಲಿಲ್ಲ. ಹಾಗಾಗಿ ಅಹಮದ್‌ನಗರಕ್ಕೆ ಅಹಲ್ಯಾನಗರ ಎಂದು ಮರುನಾಮಕರಣ ಮಾಡಬೇಕು ಎಂದು ಜನರು ಬಯಸುತ್ತಿದ್ದಾರೆ ಎಂದು ವೇದಿಕೆಯ ಮೂಲಕ ಸಾರ್ವಜನಿಕವಾಗಿ ಸಿಎಂ ಏಕನಾಥ್‌ಗೆ ಮನವಿ ಮಾಡಿದ್ದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಏಕನಾಥ್​ ಶಿಂದೆ, ಅಹಮದ್​​ನಗರವನ್ನು ಅಹಲ್ಯಾನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ತಿಳಿಸಿದರು. ಕಳೆದ ಫೆಬ್ರವರಿಯಲ್ಲಿ, ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಎಂಬ ಎರಡು ನಗರಗಳ ಹೆಸರನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧರಾಶಿವ್ ಎಂದು ಬದಲಾಯಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತ್ತು.

ಬಿಜೆಪಿ ಸರ್ಕಾರ ಬಂದ ಮೇಲೆ ಈ ಹಿಂದೆ ಮೋಘಲ್​​ ಸಾಮ್ರಾಜ್ಯದಲ್ಲಿ ಇಡಲಾಗಿದ್ದ ನಗರಗಳ ಹೆಸರುಗಳನ್ನ ಹಿಂದೂ ಹೆಸರುಗಳಾಗಿ ಬದಲಾವಣೆ ಮಾಡಲಾಗುತ್ತಿದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಈ ಹಿಂದೆ ಅಲಹಾಬಾದ್​​​ಗೆ ಪ್ರಯಾಗರಾಜ್ ಎಂದು ನಾಮಕರಣ ಮಾಡಿದ್ದರು. ಅಲಹಾಬಾದ್​ ಈಗ ಪ್ರಯಾಗರಾಜ ಎಂದೇ ಪ್ರಸಿದ್ಧವಾಗಿದೆ. ಇನ್ನು ಮಹಾರಾಷ್ಟ್ರ ಸರ್ಕಾರ ಈ ಹಿಂದೆ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಹೆಸರುಗಳನ್ನ ಕ್ರಮವಾಗಿ ಸಂಭಾಜಿನಗರ ಮತ್ತು ಧರಾಶಿವ್ ನಗರ ಎಂದು ಬದಲಾವಣೆ ಮಾಡಿದೆ. ಇದಕ್ಕೆ ಕೇಂದ್ರದ ಒಪ್ಪಿಗೆಯೂ ಸಿಕ್ಕಿದೆ.
ಈಗ ಅಹಮದ್​ನಗರ ಅಹಲ್ಯಾನಗರವಾಗಿ ಬದಲಾಗಲಿದೆ.

ಇಂತಹದ್ದೇ ಬೇಡಿಕೆ ಹೈದರಾಬಾದ್​ಗೂ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್​ ಅನ್ನು ಭಾಗ್ಯನಗರ ಎಂದು ನಾಮಕರಣ ಮಾಡಲಾಗುವುದು ಎಂದು ಈ ಹಿಂದೆ ಚುನಾವಣೆಯಲ್ಲಿ ಬಿಜೆಪಿ ಭರವಸೆ ನೀಡಿತ್ತು.

ಇದನ್ನೂ ಓದಿ: ಸಾವಿತ್ರಿಬಾಯಿ ಫುಲೆ ಕುರಿತು ಅಕ್ಷೇಪಾರ್ಹ ಲೇಖನ: ಎನ್​ಸಿಪಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.