ETV Bharat / bharat

ಔರಂಗಾಬಾದ್​​ಗೆ ಸಂಭಾಜಿನಗರ, ಉಸ್ಮಾನಾಬಾದ್​ಗೆ ಧರಶಿವ ಎಂದು ಮರು ನಾಮಕರಣ...

ರಾಜ್ಯದ ಔರಂಗಾಬಾದ್​ ನಗರಕ್ಕೆ 'ಸಂಭಾಜಿನಗರ' ಹಾಗೂ ಉಸ್ಮಾನಾಬಾದ್‌ಗೆ 'ಧರಶಿವ'​ ಎಂದು ಮರುನಾಮಕರಣ ಮಾಡಿ ಹೊಸ ಸರ್ಕಾರ ಆದೇಶ ಹೊರಡಿಸಿದೆ.

Maharashtra cabinet
Maharashtra cabinet
author img

By

Published : Jul 16, 2022, 3:31 PM IST

ಮುಂಬೈ(ಮಹಾರಾಷ್ಟ್ರ): ನೂತನ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಔರಂಗಾಬಾದ್​​ಗೆ ಛತ್ರಪತಿ ಸಂಭಾಜಿನಗರವೆಂದೂ, ಉಸ್ಮಾನಾಬಾದ್​​ಗೆ ಧರಶಿವ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಕ್ಕೂ ಮುಂಚಿತವಾಗಿ ಈ ಆದೇಶ ಹೊರಡಿಸಿತ್ತು. ಇದೀಗ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮರುನಾಮಕರಣ ನಿರ್ಧಾರ ಕೈಗೊಳ್ಳಲಾಗಿದೆ. ಠಾಕ್ರೆ ನೇತೃತ್ವದ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರ ಕಾನೂನಾತ್ಮಕವಾಗಿರಲಿಲ್ಲ, ಇದೀಗ ನಮ್ಮ ಸರ್ಕಾರ ತೆಗೆದುಕೊಂಡಿರುವ ಮರುನಾಮಕರಣ ನಿರ್ಧಾರ ಕಾನೂನಾತ್ಮಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದಿರುವ ಶಿಂದೆ, ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಡಿ.ಬಿ ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  • Shiv Sena (Thackeray faction) protest in Aurangabad against Maharashtra govt's decision to review renaming of Aurangabad & Osmanabad by MVA govt

    State Govt today announced renaming of Aurangabad as Chhatrapati Sambhajinagar&Osmanabad as Dharashiv, said, earlier decision illegal pic.twitter.com/bMpPTaIN2z

    — ANI (@ANI) July 16, 2022 " class="align-text-top noRightClick twitterSection" data=" ">

ಪ್ರತಿಭಟನೆ: ಮುಖ್ಯಮಂತ್ರಿ ಏಕನಾಥ್ ಶಿಂದೆ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರಕ್ಕೆ ಪ್ರತಿಭಟನೆ ಬಿಸಿ ತಟ್ಟಿದೆ. ಮಹಾವಿಕಾಸ್ ಅಘಾಡಿ ಸಮಯದಲ್ಲಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಇದೀಗ ಮತ್ತೊಮ್ಮೆ ಮರುಪರಿಶೀಲನೆ ಮಾಡಿದ್ದು ಸರಿಯಲ್ಲ ಎಂದು ಠಾಕ್ರೆ ಬಣದ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಹಿಂದೆ ಮೊಘಲರ ಆಡಳಿತದಲ್ಲಿ ಔರಂಗಜೇಬ್, ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಔರಂಗಾಬಾದ್ ನಗರ ಸ್ಥಾಪನೆ ಮಾಡಿದ್ದರು. ಈ ನಗರವನ್ನು 'ಸಂಭಾಜಿನಗರ' ಎಂದು ಮರುನಾಮಕರಣ ಮಾಡಲು ಬಾಳಾಸಾಹೇಬ್ ಠಾಕ್ರೆ ಪಟ್ಟು ಹಿಡಿದಿದ್ದರು. ಅದರಂತೆ ಉದ್ಧವ್ ಠಾಕ್ರೆ ಔರಂಗಾಬಾದ್​ಗೆ ಸಂಭಾಜಿ ನಗರ ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದರು. ಜೊತೆಗೆ ನನ್ನ ತಂದೆ ಬಾಳಾ ಸಾಹೇಬ್​​ ಠಾಕ್ರೆಗೆ ನೀಡಿರುವ ಭರವಸೆಯನ್ನು ನಾನು ಮರೆತಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿರಿ: ಮಹಾರಾಷ್ಟ್ರದ 2 ನಗರಗಳಿಗೆ ಮರುನಾಮಕರಣ: ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಠಾಕ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.