ಮುಂಬೈ: ಜಾತಿ ಆಧಾರದಲ್ಲಿ ಕಾಲೊನಿಗಳಿಗೆ ಇರುವ ಹೆಸರನ್ನು ಬದಲಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕ್ಯಾಬಿನೆಟ್ ಬುಧವಾರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಕಾಲೊನಿಗಳ ಹೆಸರನ್ನು ಬದಲಾಯಿಸಲು ಒಪ್ಪಿಗೆ ನೀಡಿದೆ.
ಇದರ ಜೊತೆಗೆ 2019 ಹಾಗೂ ಅದಕ್ಕೂ ಮೊದಲು ರಾಜಕೀಯ, ಸಾಮಾಜಿಕ ಪ್ರತಿಭಟನೆಗಳು ಹಾಗೂ ಚಳವಳಿಗಳ ವೇಳೆ ಜನರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂಪಡೆಯಲು ಸರ್ಕಾರ ಅಂಗೀಕಾರ ನೀಡಿದೆ.
ಇದನ್ನೂ ಓದಿ: 'ಪ್ರತೀಕಾರದ ರಾಜಕೀಯ'.. ವಿಪಕ್ಷಗಳ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನವು ಮುಂಬೈ ಬದಲು ನಾಗ್ಪುರದಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರ ಈ ಕ್ಯಾಬಿನೆಟ್ ಸಭೆಯಲ್ಲಿ ಘೋಷಿಸಿದೆ.