ಪುಣೆ (ಮಹಾರಾಷ್ಟ್ರ): ಐಷಾರಾಮಿ ಕಾರಿನ ಬಾನೆಟ್ ಮೇಲೆ ಕುಳಿತುಕೊಂಡು ಫೋಟೋ ಶೂಟ್ ನಡೆಸಿ ಕಾನೂನು ನಿಯಮ ಉಲ್ಲಂಘನೆ ಮಾಡಿರುವ ವಧುವಿನ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಪ್ರಸಿದ್ಧ ದಿವಾ ಘಾಟ್ನಲ್ಲಿ ನಡೆದಿರುವ ಘಟನೆ ಇದಾಗಿದೆ.
23 ವರ್ಷದ ವಧು ಶುಭಂಗಿ ಕಾರಿನ ಬಾನೆಟ್ ಮೇಲೆ ಕುಳಿತುಕೊಂಡು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಳು. ಈ ವೇಳೆ ಕೆಲವೊಂದು ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿತ್ತು. ಜೊತೆಗೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾವಣೆ ಮಾಡಿರುವುದು ಸಾಭೀತು ಆಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಲೂನಿ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು.
ಇದನ್ನೂ ಓದಿರಿ: KRS ಅಣೆಕಟ್ಟಿಗೆ ಇಂದು ಸುಮಲತಾ ಅಂಬರೀಶ್ ಭೇಟಿ... ಯಾರೆಲ್ಲ ಸಾಥ್ ನೀಡಲಿದ್ದಾರೆ?
ಘಟನೆ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ಮೂಕಾಶಿ, ಫೋಟೋ ಶೂಟ್ ವೇಳೆ ಅನೇಕ ರೀತಿಯ ಕಾನೂನು ಉಲ್ಲಂಘನೆಯಾಗಿದ್ದು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಂಡಿರುವ ಜೊತೆಗೆ ಕೋವಿಡ್ನ ಮಾರ್ಗಸೂಚಿ ಸಹ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 269, 188, 269, 107, 336, 34 ಅಡಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
23 ವರ್ಷದ ವಧು ಶುಭಂಗಿ ಶಾಂತಾರಾಮ್, ಡ್ರೈವರ್ ಗಣೇಶ್, ವಿಡಿಯೋ ಗ್ರಾಫರ್ ತುಕಾರಾಂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.