ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 18 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ದಾಖಲಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಹೊಸದಾಗಿ 75 ಒಮಿಕ್ರಾನ್ ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಒಟ್ಟು ಸೋಂಕಿತಗಳ ಸಂಖ್ಯೆ 653ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲೇ ದಾಖಲೆಯ 10,860 ಸೋಂಕಿತರು ಪತ್ತೆಯಾಗಿದ್ದು, ಇದರಿಂದ ಮತ್ತಷ್ಟು ಆತಂಕ ಶುರುವಾಗಿದೆ. ಮುಂಬೈನಲ್ಲಿ 389 ಬಿಲ್ಡಿಂಗ್ ಹಾಗೂ 16 ಸ್ಲಂಗಳನ್ನ ಸಿಲ್ಡೌನ್ ಮಾಡಲಾಗಿದ್ದು, ನಾಳೆಯಿಂದ ಕಾಲೇಜ್ಗಳು ಬಂದ್ ಆಗಲಿವೆ.
ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಸಲ ಕೋವಿಡ್ ಲಸಿಕೆ ಪಡೆದ ವೃದ್ಧ: ಹೇಳಿದ್ದೇನು ಗೊತ್ತಾ?
ಉಳಿದಂತೆ ನವದೆಹಲಿಯಲ್ಲಿ 5 ಸಾವಿರ ಹೊಸ ಪ್ರಕರಣ ದಾಖಲಾಗಿದ್ದು, ಗುಜರಾತ್ನಲ್ಲಿ 2,265 ಕೇಸ್, ಪಂಜಾಬ್ನಲ್ಲಿ 1,027, ತಮಿಳುನಾಡು 2,700, ಬಿಹಾರ 800 ಹಾಗೂ ಕರ್ನಾಟಕದಲ್ಲಿ 2,479 ಹೊಸ ಕೊರೊನಾ ಪ್ರಕರಣ ಕಾಣಿಸಿಕೊಂಡಿವೆ.
ಕೊರೊನಾ ಇಷ್ಟೊಂದು ವೇಗವಾಗಿ ಹರಡಲು ಒಮಿಕ್ರಾನ್ ಕಾರಣ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಸೋಂಕು ತಡೆಗಟ್ಟಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಮುಂಬೈನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತನಾಡಿರುವ ಮೇಯರ್, ಕೋವಿಡ್ ಪ್ರಕರಣ ಪ್ರತಿದಿನ 20 ಸಾವಿರ ಗಡಿ ದಾಟಿದರೆ ಲಾಕ್ಡೌನ್ ಘೋಷಣೆ ಮಾಡಲಾಗುವುದು ಎಂದಿದ್ದಾರೆ.