ETV Bharat / bharat

ಮಹಾರಾಷ್ಟ್ರದ ಎಟಿಎಸ್​ನಿಂದ ಭರ್ಜರಿ ಬೇಟೆ.. ನಿಷೇಧಿತ ಪಿಎಫ್ಐನ ನಾಲ್ವರು ಕಾರ್ಯಕರ್ತರ ಬಂಧನ - ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್

ಮಹಾರಾಷ್ಟ್ರದ ಎಟಿಎಸ್ ತಂಡವು ಮುಂಬೈನಿಂದ ಸುಮಾರು 50 ಕಿ.ಮೀ ದೂರದ ಪನ್ವೇಲ್‌ನಲ್ಲಿ ಶೋಧ ನಡೆಸಿ ಪಿಎಫ್​ಐನ ನಾಲ್ವರು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಬಂಧಿಸಿದೆ. ವಿಚಾರಣೆ ಮುಗಿದ ಬಳಿಕ, ಮುಂಬೈನಿಂದ ಎಟಿಎಸ್‌ನ ಕಲಾ ಚೌಕಿ ಘಟಕದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 10 ರ ಅಡಿ ನಾಲ್ವರನ್ನು ಬಂಧಿಸಿತು.

Maharashtra ATS arrests PFI activists  4 PFI activists from Panvel in Raigad arrested  Anti terrorism squad of Maharashtra Police  ಮಹಾರಾಷ್ಟ್ರದ ಎಟಿಎಸ್ ತಂಡವು ಪಿಎಫ್ಐ ಕಾರ್ಯಕರ್ತರ ಬಂಧನ  ರಾಯಗಢ ಜಿಲ್ಲೆಯ ಪನ್ವೇಲ್‌ನಲ್ಲಿ ಬಂಧನ  ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆಯಡಿ ನಾಲ್ವರ ಬಂಧನ  ಪಿಎಫ್‌ಐ ಮೇಲೆ ನಿಷೇಧವಿದ್ದರೂ ಕಾರ್ಯಕರ್ತರ ಭೇಟಿ ಹಿನ್ನೆಲೆ
ಪಿಎಫ್ಐ ನಾಲ್ಕು ಕಾರ್ಯಕರ್ತರ ಬಂಧನ
author img

By

Published : Oct 20, 2022, 10:55 AM IST

ಮುಂಬೈ: ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನೆರೆಯ ರಾಯಗಢ ಜಿಲ್ಲೆಯ ಪನ್ವೇಲ್‌ನಿಂದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) ಗೆ ಸಂಬಂಧಿಸಿದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದೆ. ಬಂಧಿತರಲ್ಲಿ ನಿಷೇಧಿತ ಸಂಘಟನೆಯ ರಾಜ್ಯ ವಿಸ್ತರಣಾ ಸಮಿತಿ ಸ್ಥಳೀಯ ಸದಸ್ಯರು, ಸ್ಥಳೀಯ ಘಟಕದ ಕಾರ್ಯದರ್ಶಿ, ಇತರ ಇಬ್ಬರು ಕಾರ್ಯಕರ್ತರು ಇರುವುದು ಖಚಿತವಾಗಿದೆ.

ಭಾರತ ಸರ್ಕಾರವು ಪಿಎಫ್‌ಐ ಮೇಲೆ ನಿಷೇಧ ಇದ್ದರೂ ಪನ್ವೇಲ್‌ನಲ್ಲಿ ಸಂಘಟನೆಯ ಇಬ್ಬರು ಪದಾಧಿಕಾರಿಗಳು ಕೆಲವು ಕಾರ್ಯಕರ್ತರನ್ನು ಭೇಟಿಯಾಗಿರುವ ಕುರಿತು ಈ ಮೊದಲು ಎಟಿಎಸ್‌ಗೆ ರಹಸ್ಯ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಆಧರಿಸಿ, ಎಟಿಎಸ್ ತಂಡವು ಮುಂಬೈನಿಂದ ಸುಮಾರು 50 ಕಿ.ಮೀ ದೂರದ ರಾಯಗಢ ಜಿಲ್ಲೆಯ ಪನ್ವೇಲ್‌ನಲ್ಲಿ ಶೋಧ ನಡೆಸಿ ನಾಲ್ವರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ವಿಚಾರಣೆ ಮುಗಿದ ಬಳಿಕ , ಮುಂಬಯಿನ ಎಟಿಎಸ್‌ನ ಕಲಾ ಚೌಕಿ ಘಟಕದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 10 ರ ಅಡಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಎಟಿಎಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PFI ನಿಷೇಧ : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ನಂಥ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಿಎಫ್‌ಐ ಸಂಪರ್ಕ ಹೊಂದಿರುವ ಬಗ್ಗೆ ಹಲವಾರು ಪ್ರಕರಣಗಳಿವೆ. ದೇಶದಲ್ಲಿ ಅಭದ್ರತೆಯ ಭಾವನೆ ಸೃಷ್ಠಿಗೆ ಕಾರಣವಾಗಿದ್ದ PFI ಮತ್ತು ಅದರ ಮಿತ್ರ ಸಂಘಟನೆಗಳು ರಹಸ್ಯವಾಗಿ ಕೆಲಸ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅದನ್ನು ನಿಷೇಧಿಸಿತು.

ಭಯೋತ್ಪಾದನಾ ವಿರೋಧಿ ಕಾಯಿದೆಯಡಿ (UAPA),ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CF), ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ (ಕೇರಳ) ಅನ್ನು ಸಹ ನಿಷೇಧಿಸಲಾಗಿದೆ.

ಓದಿ: ಪಿಎಫ್​ಐ ಪ್ರಕರಣ, ಭಯೋತ್ಪಾದಕರ ಸಂಪರ್ಕಜಾಲ ಮಟ್ಟಹಾಕಲು ಎನ್ಐಎ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.