ಮುಂಬೈ: ಮಹಾಮಳೆಯಿಂದ ಉಂಟಾದ ಪ್ರವಾಹಕ್ಕೆ ಮಹಾರಾಷ್ಟ್ರ ನಲುಗಿದೆ. ಕೊಲ್ಹಾಪುರ, ಸಾಂಗ್ಲಿ, ಸತಾರಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ತತ್ತರಿಸಿದ್ದು, 1.35 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಇನ್ನು ಮಳೆ ಸಂಬಂಧಿತ ಘಟನೆಗಳಿಗೆ ಮಹಾರಾಷ್ಟ್ರದಲ್ಲಿ ಈವರೆಗೆ 112 ಜನರು ಸಾವನ್ನಪ್ಪಿದ್ದಾರೆ, 99 ಜನ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಮೂಲಗಳು ಮಾಹಿತಿ ನೀಡಿವೆ.
ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಕೆಲ ಗ್ರಾಮಗಳ ರಸ್ತೆ ಬಂದ್ ಆಗಿದ್ದು, ಜನರು ಗ್ರಾಮಗಳಲ್ಲೇ ಸಿಲುಕಿದ್ದಾರೆ. ಪ್ರವಾಹ, ಭೂಕುಸಿತದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 21 ತಂಡ, ಸೇನೆ, ಕರಾವಳಿ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಮುಂಬೈ, ಸಾಂಗ್ಲಿ, ರತ್ನಗಿರಿ, ಪಲ್ಘರ್, ರಾಯಘಡ್, ಸಹರಾ, ಸಾಂಗ್ಲಿ, ಸಿಂಧುದುರ್ಗ ನಗರ ಮತ್ತು ಕೊಲ್ಹಾಪುರದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಮಳೆಯಾರ್ಭಟಕ್ಕೆ ಕರುನಾಡಲ್ಲಿ ಈವರೆಗೆ 9 ಮಂದಿ ಬಲಿ, 283 ಗ್ರಾಮಗಳು ನೆರೆಪೀಡಿತ