ETV Bharat / bharat

'ಮಹಾಜೋತ್​'ನ 'ಮಹಾಜೂಟ್​' ಬಹಿರಂಗ; ಅಸ್ಸೋಂನಲ್ಲಿ ಎನ್​ಡಿಎ ಸರ್ಕಾರ ರಚನೆ- ಮೋದಿ ವಿಶ್ವಾಸ - PM Modi in Tamulpur, Assam

ಅಸ್ಸೋಂನ ಬಕ್ಸಾ ಜಿಲ್ಲೆಯ ತಮುಲ್ಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PM Modi
ಪ್ರಧಾನಿ ನರೇಂದ್ರ ಮೋದಿ
author img

By

Published : Apr 3, 2021, 1:14 PM IST

ಬಕ್ಸಾ (ಅಸ್ಸೋಂ): 'ಮಹಾಜೋತ್​'ನ 'ಮಹಾಜೂಟ್​' ಬಹಿರಂಗವಾಗಿದ್ದು, ಅಸ್ಸೋಂನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರಚನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯ ಮುಂದುವರೆಸಿರುವ ಪಿಎಂ ಮೋದಿ ಇಂದು ಬಕ್ಸಾ ಜಿಲ್ಲೆಯ ತಮುಲ್ಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ಅಸ್ಸೋಂನಲ್ಲಿ ಕಾಂಗ್ರೆಸ್​ - ಎಐಯುಡಿಎಫ್​ ಮಹಾಜೋತ್ (ಮೈತ್ರಿಕೂಟ)ನ ಮಹಾಜೂಟ್ ( ದೊಡ್ಡ ಸುಳ್ಳು) ಬಹಿರಂಗವಾಗಿದೆ. ಅಸ್ಸೋಂ ಜನರು ರಾಜ್ಯದ ಗುರುತನ್ನು ಅವಮಾನಿಸುವ ಮತ್ತು ಹಿಂಸಾಚಾರ ಮಾಡುವವರನ್ನು ಸಹಿಸಲಾರರು. ಎನ್​ಡಿಎ ಸರ್ಕಾರ ರಚಿಸಲು ಜನರು ಸಿದ್ಧರಾಗಿದ್ದಾರೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಭಾರತದ ಬಗ್ಗೆ ಅಮೆರಿಕ ಸೈಲೆಂಟಾಗಿದೆ, 'ನನಗೆ ಆರ್ಥಿಕ ಸಮಾನತೆ ಬೇಕು'- ರಾಹುಲ್ ಗಾಂಧಿ

ನಾವು ತಾರತಮ್ಯವಿಲ್ಲದೇ ಎಲ್ಲರಿಗಾಗಿ ಕೆಲಸ ಮಾಡುತ್ತೇವೆ. ಆದರೆ, ಕೆಲವರು ಮತ ಬ್ಯಾಂಕ್​​ಗಾಗಿ ದೇಶವನ್ನು ವಿಭಜಿಸುತ್ತಾರೆ. ದುರದೃಷ್ಟವಶಾತ್ ಇದನ್ನೇ 'ಜಾತ್ಯತೀತತೆ' ಎಂದು ಕರೆಯಲಾಗುತ್ತದೆ. ನಾವು ಎಲ್ಲರಿಗಾಗಿ ಕೆಲಸ ಮಾಡುವುದನ್ನು 'ಕೋಮು' ಎಂದು ಕರೆಯಲಾಗುತ್ತದೆ. ಈ ಜಾತ್ಯತೀತತೆ - ಕೋಮುವಾದದ ಆಟಗಳು ದೇಶಕ್ಕೆ ದೊಡ್ಡ ಹಾನಿ ಉಂಟುಮಾಡಿದೆ ಎಂದು ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು.

ಅಸ್ಸೋಂನಲ್ಲಿ ಮೂರು ಹಂತಗಳಲ್ಲಿ 126 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ​ ನಡೆಯಲಿದೆ. ಈಗಾಗಲೇ 2 ಹಂತಗಳ ಮತದಾನವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.