ETV Bharat / bharat

ಮಹದಾಯಿ ವಿವಾದ: ಮತ್ತೆ ಕ್ಯಾತೆ ತೆಗೆದ ಗೋವಾ, ಕರ್ನಾಟಕದ ಮೇಲೆ ಆರೋಪಿಸಿ 'ಸುಪ್ರೀಂ'ಗೆ ಪತ್ರ! - ಕಳಸಾ-ಬಂಡೂರಿ ಯೋಜನೆ

ವಿವಾದಿತ ಕಳಸಾ-ಬಂಡೂರಿ ಯೋಜನಾ ಸ್ಥಳಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಲು ಕರ್ನಾಟಕ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಗೋವಾ ಇದೀಗ ಮತ್ತೊಮ್ಮೆ ರಾಜ್ಯದ ಮೇಲೆ ಆರೋಪ ಮಾಡಿದೆ.

Mahadayi row
Mahadayi row
author img

By

Published : Mar 20, 2021, 4:46 PM IST

Updated : Mar 20, 2021, 5:26 PM IST

ಪಣಜಿ(ಗೋವಾ): ಮಹದಾಯಿ ನದಿ ಯೋಜನೆ ಸ್ಥಳಕ್ಕೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳು ಭೇಟಿ ಮಾಡಿ ವರದಿ ನೀಡುವಂತೆ ಸುಪ್ರೀಂಕೋರ್ಟ್​ ಈಗಾಗಲೇ ನಿರ್ದೇಶನ ನೀಡಿದ್ದು, ಇದೇ ವಿಚಾರವಾಗಿ ಇದೀಗ ಗೋವಾ ಮತ್ತೊಮ್ಮೆ ಕ್ಯಾತೆ ತೆಗೆದಿದೆ.

ಕಳಸಾ - ಬಂಡೂರಿ ಯೋಜನೆ ಸ್ಥಳಕ್ಕೆ ಜಂಟಿ ಪರಿಶೀಲನಾ ಸಮಿತಿಯಲ್ಲಿ ಗೋವಾ ನಿಯೋಗದ ಸದಸ್ಯರು ಭೇಟಿ ನೀಡಲು ಕರ್ನಾಟಕ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಗೋವಾದ ಫಾರ್ವರ್ಡ್​​ ಪಾರ್ಟಿ ಆರೋಪಿಸಿದ್ದು, ಸುಪ್ರೀಂಕೋರ್ಟ್​ ಈ ಸಂಬಂಧ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಮನವಿ ಮಾಡಿದೆ. ಜಿಎಫ್​​ಸಿ ಅಧ್ಯಕ್ಷ ವಿಜಯ್​​ ಸರ್ದೇಸಾಯಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಈ ಮನವಿ ಮಾಡಿದ್ದಾರೆ.

ಸಿಜೆಐಗೆ ಪತ್ರ ಬರೆದಿರುವ ಜಿಎಫ್​ಸಿ ಪಕ್ಷದ ಮುಖಂಡ ಸರ್ದೇಸಾಯಿ ಕರ್ನಾಟಕ ಪೊಲೀಸರು ಗೋವಾ ಅಧಿಕಾರಿಗಳ ನಿಯೋಗದೊಂದಿಗೆ ಅನುಚಿತವಾಗಿ ವರ್ತಿಸಿ, ವಿವಾದಿತ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಿಲ್ಲ ಎಂಬ ವಿಷಯವನ್ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಈ ಸಂಬಂಧ ಸುಪ್ರೀಂಕೋರ್ಟ್​ ತಕ್ಷಣವೇ ಮಧ್ಯ ಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ. ಕಳಸಾ-ಬಂಡೂರಿ ಯೋಜನೆ ಪ್ರದೇಶಕ್ಕೆ ನಿನ್ನೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಳಸಾ-ಬಂಡೂರಿ ಯೋಜನೆಯಿಂದ ಕರ್ನಾಟಕ ಸರ್ಕಾರ ಈಗಾಗಲೇ ನೀರು ತನ್ನತ್ತ ತಿರುಗಿಸಿಕೊಂಡಿದೆ ಎಂದು ಗೋವಾ ಸರ್ಕಾರ ಆರೋಪಿಸಿ, ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಫೆಬ್ರವರಿ 22ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​, ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಮೂರು ರಾಜ್ಯಗಳಿಗೆ ಸುಪ್ರೀಂ ಸೂಚನೆ ನೀಡಿತ್ತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಗೋವಾ ಹಾಗೂ ಕರ್ನಾಟಕ ಸುಪ್ರೀಂಕೋರ್ಟ್​ಗೆ ಪತ್ರ ಬರೆದಿದ್ದು, ಮಧ್ಯಪ್ರವೇಶ ಮಾಡುವಂತೆ ಕೇಳಿಕೊಂಡಿವೆ.

Last Updated : Mar 20, 2021, 5:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.