ETV Bharat / bharat

ಮಹಾಮಳೆಗೆ ರೈಲ್ವೆ ಸಂಚಾರ ಅಸ್ತವ್ಯಸ್ತ: ರೈಲುಗಳಲ್ಲೇ ಸಿಲುಕಿಕೊಂಡಿರುವ 6 ಸಾವಿರ ಪ್ರಯಾಣಿಕರು

author img

By

Published : Jul 22, 2021, 8:33 PM IST

ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೆಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅನೇಕ ರೈಲುಗಳ ಸಂಚಾರ ರದ್ಧುಗೊಳಿಸಲಾಗಿದೆ.

Maha rains fury
Maha rains fury

ಮುಂಬೈ: ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಜನ-ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕೊಂಕಣ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ವಿವಿಧ ರೈಲುಗಳಲ್ಲಿ 6 ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆಂದು ತಿಳಿದು ಬಂದಿದೆ.

ರತ್ನಗಿರಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಕೆಲವೊಂದು ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅದರೊಳಗಿರುವ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ರತ್ನಗಿರಿಯ ಚಿಪ್ಲುನ್​ ಮತ್ತು ಕಾಮಥೆ ನಿಲ್ದಾಣಗಳ ನಡುವಿನ ವಶಿಷ್ಠ ನದಿ ಸೇತುವೆ ಅಪಾಯದ ಮಟ್ಟ ಮೀರಿ ಹರಿಯತ್ತಿದೆ ಎಂದು ತಿಳಿದು ಬಂದಿದೆ.

Maharashtra | Parts of Ratnagiri district partially submerged in water due to heavy rainfall.

(Video source: District Information Office, Ratnagiri) pic.twitter.com/R6meFWaPs0

— ANI (@ANI) July 22, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಟಿ-ಶರ್ಟ್ಸ್​​, ಜೀನ್ಸ್​ ಪ್ಯಾಂಟ್​​ ಧರಿಸಿದ್ದೇ ತಪ್ಪಾಯ್ತು... ಬಾಲಕಿಯನ್ನು ಕೊಲೆಗೈದ ಚಿಕ್ಕಪ್ಪ, ಅಜ್ಜ!

ಕೊಂಕಣ ರೈಲ್ವೆ ಮುಂಬೈನ ರೋಹಾದಿಂದ ಮಂಗಳೂರು ಸಮೀಪದ ಥೋಕೊರ್​ವರೆಗೆ 756 ಕಿಲೋ ಮೀಟರ್​​ ಉದ್ದದ ಟ್ರ್ಯಾಕ್​ ಹೊಂದಿದೆ. ಇತ್ತೀಚಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, 33 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, 48 ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಮುಂಬೈ: ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಜನ-ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕೊಂಕಣ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ವಿವಿಧ ರೈಲುಗಳಲ್ಲಿ 6 ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆಂದು ತಿಳಿದು ಬಂದಿದೆ.

ರತ್ನಗಿರಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಕೆಲವೊಂದು ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅದರೊಳಗಿರುವ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ರತ್ನಗಿರಿಯ ಚಿಪ್ಲುನ್​ ಮತ್ತು ಕಾಮಥೆ ನಿಲ್ದಾಣಗಳ ನಡುವಿನ ವಶಿಷ್ಠ ನದಿ ಸೇತುವೆ ಅಪಾಯದ ಮಟ್ಟ ಮೀರಿ ಹರಿಯತ್ತಿದೆ ಎಂದು ತಿಳಿದು ಬಂದಿದೆ.

  • Maharashtra | Parts of Ratnagiri district partially submerged in water due to heavy rainfall.

    (Video source: District Information Office, Ratnagiri) pic.twitter.com/R6meFWaPs0

    — ANI (@ANI) July 22, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಟಿ-ಶರ್ಟ್ಸ್​​, ಜೀನ್ಸ್​ ಪ್ಯಾಂಟ್​​ ಧರಿಸಿದ್ದೇ ತಪ್ಪಾಯ್ತು... ಬಾಲಕಿಯನ್ನು ಕೊಲೆಗೈದ ಚಿಕ್ಕಪ್ಪ, ಅಜ್ಜ!

ಕೊಂಕಣ ರೈಲ್ವೆ ಮುಂಬೈನ ರೋಹಾದಿಂದ ಮಂಗಳೂರು ಸಮೀಪದ ಥೋಕೊರ್​ವರೆಗೆ 756 ಕಿಲೋ ಮೀಟರ್​​ ಉದ್ದದ ಟ್ರ್ಯಾಕ್​ ಹೊಂದಿದೆ. ಇತ್ತೀಚಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, 33 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, 48 ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.