ETV Bharat / bharat

ಪತ್ನಿಗೆ ಡೈವೋರ್ಸ್‌ ಕೊಟ್ರೆ ಶಾಸಕ ಆಗ್ತೀಯಾ ಅಂತ ಸಲಹೆ ನೀಡಿದ್ದ ಜ್ಯೋತಿಷಿ ಬಂಧನ

author img

By

Published : Jul 13, 2021, 10:34 PM IST

ಶಾಸಕ ಅಥವಾ ಸಚಿವನಾಗಬೇಕಾದರೆ ಮೊದಲು ನಿನ್ನೆ ಪತ್ನಿಗೆ ವಿಚ್ಛೇದನ ಕೊಡು ಎಂದು ವ್ಯಕ್ತಿಯೋರ್ವನಿಗೆ ಸಲಹೆ ನೀಡಿದ್ದ ಜ್ಯೋತಿಷಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

Maha: Palm reader advises man to divorce his wife if he wants to become MLA; held
ಪತ್ನಿಗೆ ಡೈವೋರ್ಸ್‌ ಕೊಟ್ರೆ ಶಾಸಕ ಆಗ್ತೀಯಾ ಅಂತ ಸಲಹೆ ನೀಡಿದ್ದ ಜ್ಯೋತಿಷಿ ಬಂಧನ

ಪುಣೆ(ಮಹಾರಾಷ್ಟ್ರ): ಪತ್ನಿಯೇ ನಿನಗೆ ಕೆಟ್ಟ ಶಕುನಿ. ಆಕೆಯನ್ನು ತೊರೆಯುವವರೆಗೆ ನಿನಗೆ ಶಾಸಕ ಅಥವಾ ಸಚಿವನಾಗುವ ಯೋಗವಿಲ್ಲ ಎಂದು ವ್ಯಕ್ತಿಗೆ ಸಲಹೆ ನೀಡಿದ್ದ ಅಂಗೈ ರೇಖೆ ನೋಡಿ ಭವಿಷ್ಯ ಹೇಳುವ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

48 ವರ್ಷದ ರಘುನಾಥ್‌ ಯೆಮುಲ್‌ ಬಂಧಿತ ಆರೋಪಿ. ತಮ್ಮ ಪತ್ನಿಗೆ ವಿಚ್ಛೇದನ ನೀಡುವವರೆಗೆ ನಿನ್ನೆ ಕನಸು ನನಸಾಗುವುದಿಲ್ಲ ಎಂದು ಆರೋಪಿ ವ್ಯಕ್ತಿಗೆ ತಿಳಿಸಿದ್ದನೆಂದು ಎಂದು ಚತುಶ್ರೀಂಗಿ ಪೊಲೀಸ್ ಠಾಣೆ ಅಧಿಕಾರಿ ಎಫ್‌ಐಆರ್ ಉಲ್ಲೇಖಿಸಿ ಹೇಳಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಕ್ಕಾಗಿ ಸಂತ್ರಸ್ತೆ ತನ್ನ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಳು.

ಈ ಬಗ್ಗೆ ಮಾಹಿತಿ ನೀಡಿರುವ ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ, ಮಹಿಳೆಗೆ ಕೆಟ್ಟ ಶಕುನ ಎಂದು ಜ್ಯೋತಿಷಿ ಯೆಮುಲ್ ಲೇಬಲ್ ನೀಡಿದ್ದಾನೆ. ಇದರಿಂದಾಗಿ ಈಕೆಯ ಸಂಬಂಧಿಕರು ಚಿತ್ರಹಿಂಸೆ ನೀಡಿದ್ದಾರೆ. ಘಟನೆ ಸಂಬಂಧ ಸಂತ್ರಸ್ತೆ ಸಮೀಪದ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.