ETV Bharat / bharat

ಮಧ್ಯರಾತ್ರಿ ಹೈಡ್ರಾಮಾ: ಮಹಾರಾಷ್ಟ್ರದಲ್ಲಿ ಗೆದ್ದು ಬಿಗಿದ ಬಿಜೆಪಿ, ಆಡಳಿತ ಪಕ್ಷಕ್ಕೆ ಬಿಗ್ ಶಾಕ್​!

ಮಹಾರಾಷ್ಟ್ರದಲ್ಲಿ ತೀವ್ರ ಕುತೂಹಲ ಹಾಗೂ ಹೈಡ್ರಾಮಾ ಸೃಷ್ಟಿ ಮಾಡಿದ್ದ ರಾಜ್ಯಸಭೆ ಚುನಾವಣೆ ಫಲಿತಾಂಶ ಕೊನೆಗೂ ಮಧ್ಯರಾತ್ರಿ ಬಹಿರಂಗಗೊಂಡಿದ್ದು, ಆಡಳಿತ ಪಕ್ಷಕ್ಕೆ ಬಿಗ್ ಶಾಕ್ ನೀಡಿರುವ ಬಿಜೆಪಿ ಗೆಲುವಿನ ನಗೆ ಬೀರಿದೆ.

MVA suffers major setback in RS polls
MVA suffers major setback in RS polls
author img

By

Published : Jun 11, 2022, 9:30 AM IST

ಮುಂಬೈ: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯಸಭೆ ಚುನಾವಣೆಯ ಫಲಿತಾಂಶ ಬಹಿರಂಗಗೊಂಡಿದ್ದು, ಮಹಾರಾಷ್ಟ್ರದಲ್ಲಿ ಆಡಳಿತರೂಢ ಮಹಾ ವಿಕಾಸ್​ ಅಘಾಡಿಗೆ ಬಿಗ್​ ಶಾಕ್​​ ಆಗಿದೆ. ಮಧ್ಯರಾತ್ರಿವರೆಗೂ ನಡೆದ ಹೈಡ್ರಾಮಾದಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಭಾರತೀಯ ಜನತಾ ಪಾರ್ಟಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಉಳಿದಂತೆ ಮೈತ್ರಿ ಸರ್ಕಾರದ ಮೂವರು ಅಭ್ಯರ್ಥಿಗಳು ಗೆದ್ದಿದ್ದಾರೆ.

ಮಹಾರಾಷ್ಟ್ರದಿಂದ ಇದೀಗ ಕೇಂದ್ರ ಸಚಿವ ಪಿಯೂಷ್ ಗೋಯಲ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್, ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್‌ಗರ್ಹಿ, ಬಿಜೆಪಿಯ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಆಯ್ಕೆ ಆಗಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 285 ಅಭ್ಯರ್ಥಿಗಳು ಮತ ಚಲಾವಣೆ ಮಾಡಿದ್ದರು. ಆದರೆ, ಶಿವಸೇನೆಯ ಶಾಸಕ ಸುಹಾಸ್ ಕಾಂಡೆ ಚುನಾವಣೆ ನಿಯಮ ಉಲ್ಲಂಘನೆ ಮಾಡಿ ವೋಟ್ ಮಾಡಿದ್ದರಿಂದ ಅವರ ಮತ ತಿರಸ್ಕಾರ ಮಾಡಲಾಗಿತ್ತು. ಈ ವಿಚಾರವಾಗಿ ಚುನಾವಣಾ ಆಯೋಗ ಮಧ್ಯರಾತ್ರಿ ನಂತರ ನಿರ್ಧಾರ ಕೈಗೊಂಡಿದ್ದರಿಂದ ಮತ ಎಣಿಕೆ ತಡವಾಗಿತ್ತು.

ಇದನ್ನೂ ಓದಿ: ರಾಜ್ಯಸಭೆ ಫಲಿತಾಂಶ: ಬಿಜೆಪಿಗೆ ಸಿಂಹಪಾಲು, ಕಾಂಗ್ರೆಸ್​ಗೆ ಮತ್ತೆ ನಿರಾಶೆ

ಬಿಜೆಪಿ 106 ಶಾಸಕರನ್ನ ಹೊಂದಿದ್ದು, ಒಟ್ಟು ಮೂವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು.ಇದರಲ್ಲಿ ಇಬ್ಬರ ಜಯ ಸುಲಭವಾಗಿತ್ತು. ಆದರೆ, ಮೂರನೇ ಅಭ್ಯರ್ಥಿ ಗೆಲ್ಲಿಸಲು 17 ಮತಗಳ ಅವಶ್ಯಕತೆ ಇತ್ತು. ಉಳಿದಂತೆ ಆಡಳಿತ ಪಕ್ಷ ಮಹಾ ವಿಕಾಸ್ ಅಘಾಡಿ 150 ಸದಸ್ಯರನ್ನ ಹೊಂದಿದ್ದು, ನಾಲ್ವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಹೀಗಾಗಿ, ನಾಲ್ಕನೇ ಅಭ್ಯರ್ಥಿ ಗೆಲ್ಲಿಸಲು 14 ಮತಗಳ ಅಗತ್ಯವಿತ್ತು. ಈ ಚುನಾವಣೆಯಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನಿವೀಸ್ ಹೆಣೆದ ರಾಜಕೀಯ ತಂತ್ರ ಯಶಸ್ವಿಯಾಗಿದ್ದು, ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಕೈಹಿಡಿದ ಕಾರಣ ಗೆಲುವಿನ ನಗೆ ಬೀರಿದೆ. ಹೀಗಾಗಿ ಆಡಳಿತ ರೂಢ ಮಹಾ ವಿಕಾಸ್ ಅಘಾಡಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಎಚ್ಚರಿಕೆ ಗಂಟೆಯಾಗಿದೆ.

ಇದರ ಮಧ್ಯೆ ಹರಿಯಾಣದಲ್ಲೂ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​​​ನ ಅಜಯ್ ಮಾಕೆನ್ ಗೆಲುವು ಸಾಧಿಸಿದ್ದಾರೆಂದು ಮೊದಲು ಸಂಭ್ರಮಿಸಲಾಗಿತ್ತು. ಆದರೆ, ತದನಂತರ ಅವರು ಸೋಲು ಕಂಡಿದ್ದಾರೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಕೈ ಪಕ್ಷಕ್ಕೆ ಆಘಾತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.