ETV Bharat / bharat

'ಮಹಾ' ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸಿ: ಕೇಂದ್ರಕ್ಕೆ ರಾಜ್ಯಪಾಲರ ಪತ್ರ

38 ಶಿವಸೇನೆ ಶಾಸಕರು, ಇಬ್ಬರು ಪ್ರಹರ್ ಜನಶಕ್ತಿ ಪಕ್ಷದ ಶಾಸಕರು ಮತ್ತು ಏಳು ಜನ ಪಕ್ಷೇತರ ಶಾಸಕರಿಂದ ತಮ್ಮ ಕುಟುಂಬಗಳಿಗೆ ಒದಗಿಸಿದ್ದ ಪೊಲೀಸ್ ಭದ್ರತೆಯನ್ನು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ ಎಂದು ಮಾಹಿತಿ ಸ್ವೀಕರಿಸಿರುವುದಾಗಿ ಎಂದು ರಾಜ್ಯಪಾಲರು ಹೇಳಿದ್ದಾರೆ.

Maha Guv to Centre: Provide adequate central security force to protect rebel MLAs
'ಮಹಾ' ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸಿ: ಕೇಂದ್ರಕ್ಕೆ ರಾಜ್ಯಪಾಲರ ಪತ್ರ
author img

By

Published : Jun 26, 2022, 8:36 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಬಂಡಾಯ ಶಾಸಕರು ಮತ್ತು ಅವರ ಕುಟುಂಬಗಳಿಗೆ ಸೂಕ್ತ ಭದ್ರತೆ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಪತ್ರ ಬರೆದಿದ್ದಾರೆ. ಬಂಡಾಯ ಶಾಸಕರು ಹಾಗೂ ಅವರ ಕುಟುಂಬಗಳ ಭದ್ರತೆ ಖಚಿತಪಡಿಸಿಕೊಳ್ಳುವ ಅಗತ್ಯವಿದ್ದಲ್ಲಿ, ತಕ್ಷಣವೇ ನಿಯೋಜಿಸಲು ಕೇಂದ್ರ ಭದ್ರತಾ ಪಡೆಗಳ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದ್ದಾರೆ.

ಕೇಂದ್ರ ಗೃಹ ಕಾರ್ಯದರ್ಶಿ ಎ.ಕೆ. ಭಲ್ಲಾ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, 38 ಶಿವಸೇನೆ ಶಾಸಕರು, ಇಬ್ಬರು ಪ್ರಹರ್ ಜನಶಕ್ತಿ ಪಕ್ಷದ ಶಾಸಕರು ಮತ್ತು ಏಳು ಜನ ಪಕ್ಷೇತರ ಶಾಸಕರಿಂದ ತಮ್ಮ ಕುಟುಂಬಗಳಿಗೆ ಒದಗಿಸಿದ್ದ ಪೊಲೀಸ್ ಭದ್ರತೆಯನ್ನು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ ಎಂದು ಮಾಹಿತಿ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Maharashtra political crisis.. ಅನರ್ಹತೆಯ ನೋಟಿಸ್​ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಶಿಂದೆ

ಅಲ್ಲದೇ, ಕೆಲವು ರಾಜಕೀಯ ನಾಯಕರು 'ಪ್ರಚೋದನಕಾರಿ' ಮತ್ತು 'ಬೆದರಿಕೆಯ ಹೇಳಿಕೆ'ಗಳನ್ನು' ನೀಡುತ್ತಿರುವ ಹಿನ್ನೆಲೆಯಲ್ಲಿರುವ ಪ್ರಸ್ತುತ ಗುವಾಹಟಿಯಲ್ಲಿ ಶಾಸಕರು ತಮ್ಮ ಮನೆ ಮತ್ತು ಕುಟುಂಬಗಳ ಸುರಕ್ಷತೆಯ ಬಗ್ಗೆ ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ ಎಂದೂ ರಾಜ್ಯಪಾಲರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ ಶಾಸಕರ ಕುಟುಂಬಗಳು ಮತ್ತು ಮನೆಗಳಿಗೆ ಆದ್ಯತೆಯ ಮೇಲೆ ಸಾಕಷ್ಟು ರಕ್ಷಣೆ ನೀಡುವಂತೆ ರಾಜ್ಯ ಪೊಲೀಸರಿಗೆ ಈಗಾಗಲೇ ನಿರ್ದೇಶನ ನೀಡಿರುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಲಿ'ಟ್ರಿಕ್ಸ್'! ಬಂಡಾಯ ಶಾಸಕರ ಪತ್ನಿಯರ ಸಂಪರ್ಕದಲ್ಲಿ ಉದ್ಧವ್‌ ಠಾಕ್ರೆ ಪತ್ನಿ

ಇದರ ಹೊರತಾಗಿಯೂ, ಪೊಲೀಸರು ಮೂಕ ಪ್ರೇಕ್ಷಕರಾಗಿರುವುದರಿಂದ ಕೆಲವು ಶಾಸಕರ ಕಚೇರಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಹೀಗಾಗಿ ಕೇಂದ್ರ ಭದ್ರತಾ ಪಡೆಗಳನ್ನು ಸಮರ್ಪಕವಾಗಿ ಒದಗಿಸಿ, ಪರಿಸ್ಥಿತಿಯನ್ನು ಪರಿಹರಿಸಲು ಅಗತ್ಯವಿರುವ ಸಂದರ್ಭದಲ್ಲಿ ಅವರನ್ನು ಸನ್ನದ್ಧವಾಗಿಟ್ಟುಕೊಳ್ಳುವಂತೆ ಕೇಂದ್ರ ಗೃಹ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ.

ಇದನ್ನೂ ಓದಿ: 40 ಬಂಡಾಯ ಶಾಸಕರು ಸತ್ತಿದ್ದಾರೆ, ಅವರ ಆತ್ಮಗಳು ಮಾತ್ರ ಗುವಾಹಟಿಯಲ್ಲಿವೆ: ಸಂಜಯ್​ ರಾವತ್​

ಬಂಡಾಯ ಶಾಸಕರ ವಿರುದ್ಧ ಮುಂಬೈ, ಥಾಣೆ, ಪುಣೆ, ನಾಸಿಕ್, ಔರಂಗಾಬಾದ್, ಕೊಲ್ಲಾಪುರ, ಸತಾರಾ, ಬೀಡ್, ಪರ್ಭಾನಿ ಮತ್ತು ನಾಗ್ಪುರದಲ್ಲಿ ತೀವ್ರ ಪ್ರತಿಭಟನೆಗಳು ನಡೆದಿವೆ. ಕಚೇರಿ, ಮನೆಗಳ ಮೇಲೆ ದಾಳಿ, ಕಲ್ಲು ತೂರಾಟ ಹಾಗೂ ಭಾವಚಿತ್ರಗಳು, ಪೋಸ್ಟರ್​ಗಳಿಗೆ ಚಪ್ಪಲಿಗಳಿಂದ ಹೊಡೆಯುವುದು ಹಾಗೂ ಪ್ರತಿಕೃತಿ ದಹನದಂತಹ ಘಟನೆಗಳು ಸಹ ಜರುಗಿದೆ. ಈ ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಮೇ 20ರಂದೇ ಶಿಂದೆಗೆ ಸಿಎಂ ಹುದ್ದೆಯ ಆಫರ್​​ ಕೊಡಲಾಗಿತ್ತು: ಆದಿತ್ಯ ಠಾಕ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.