ETV Bharat / bharat

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿಎಂಕೆ ಸಚಿವ ಪೊನ್ಮುಡಿ ದೋಷಿ ಎಂದ ಮದ್ರಾಸ್​ ಹೈಕೋರ್ಟ್​ - ಮದ್ರಾಸ್​ ಹೈಕೋರ್ಟ್​

Minister Ponmudy proved guilty: ಡಿಸೆಂಬರ್​ 21 ರಂದು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳುವ ದಿನ ಸಚಿವರು ಹಾಗೂ ಪತ್ನಿ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್​ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಪೀಠ ಹೇಳಿದೆ.

Madras HC pronounces DMK Minister Ponmudy as gulty
ಡಿಎಂಕೆ ಸಚಿವ ಪೊನ್ಮುಡಿ ದೋಷಿ ಎಂದ ಮದ್ರಾಸ್​ ಹೈಕೋರ್ಟ್​
author img

By ETV Bharat Karnataka Team

Published : Dec 19, 2023, 8:12 PM IST

ಚೆನ್ನೈ (ತಮಿಳುನಾಡು): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 2017 ರಲ್ಲಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ತಮಿಳುನಾಡಿನ ಆಡಳಿತ ಪಕ್ಷದ ಡಿಎಂಕೆಯ ಹಿರಿಯ ನಾಯಕ ಮತ್ತು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಹಾಗೂ ಅವರ ಪತ್ನಿ ಪಿ. ವಿಶಾಲಾಕ್ಷಿ ಅವರನ್ನು ಮದ್ರಾಸ್​ ಹೈಕೋರ್ಟ್​ ದೋಷಿಗಳು ಎಂದು ಗುರುವಾರ ತೀರ್ಪು ನೀಡಿದೆ.

ಡಿಸೆಂಬರ್​ 21ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದು, ಆ ದಿನ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್​ ಪೂಲಕ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಮೂರ್ತಿ ಜಿ. ಜಯಚಂದ್ರನ್​ ಸಚಿವರು ಹಾಗೂ ಅವರ ಪತ್ನಿಗೆ ಸೂಚಿಸಿದರು. 2016ರ ಏಪ್ರಿಲ್​ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ವಿಲ್ಲುಪುರಂ ವಿಚಾರಣಾ ನ್ಯಾಯಾಲಯ ಆರೋಪಿ ಪೊನ್ಮುಡಿ ಹಾಗೂ ಅವರ ಪತ್ನಿಯನ್ನು, ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸದ ಹಿನ್ನೆಲೆ ಆರೋಪಮುಕ್ತಗೊಳಿಸಿತ್ತು. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಭ್ರಷ್ಟಾಚಾರ ನಿಗ್ರಹ ದಳ 2016ರಲ್ಲಿ ಮೇಲ್ಮನವಿ ದಾಖಲಿಸಿತ್ತು. ಆ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಜಯಚಂದ್ರ ಅವರಿದ್ದ ಪೀಠ ವಿಚಾರಣೆ ನಡೆಸಿ, ವಿಲ್ಲುಪುರಂ ನ್ಯಾಯಾಲಯ ತಪ್ಪಾದ ತೀರ್ಪು ನೀಡಿದೆ ಎಂದು ಹೇಳಿ ಇಬ್ಬರನ್ನೂ ದೋಷಿಗಳೆಂದು ತೀರ್ಪು ನೀಡಿದೆ.

ಪೊನ್ಮುಡಿ ಪರ ವಾದ ಮಂಡಿಸಿದ ಹಿರಿಯ ವಕೀಲ, "ಭ್ರಷ್ಟಾಚಾರ ನಿಗ್ರಹ ದಳ ಸಚಿವ ಪೊನ್ಮುಡಿ ಅವರ ಪತ್ನಿ ವಿಶಾಲಾಕ್ಷಿ ಅವರ ಆದಾಯವನ್ನು ಪೊನ್ಮುಡಿ ಅವರ ಆದಾಯ ಎಂದು ಲೆಕ್ಕ ಹಾಕಿದೆ. ಮೇಲಾಗಿ ವಿಶಾಲಾಕ್ಷಿ ಅವರು 110 ಎಕರೆ ಕೃಷಿ ಭೂಮಿ ಹೊಂದಿದ್ದು, ಪ್ರತ್ಯೇಕವಾಗಿ ವ್ಯಾಪಾರ ಮಾಡುತ್ತಿದ್ದು, ತನಿಖಾಧಿಕಾರಿಗಳು ಇವುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ" ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಮೌಖಿಕ ಅನುಮತಿ ನೀಡುವಂತೆ ಕೇಳಿದರು. ಇದಕ್ಕೆ ಪೀಠವು, "ಡಿಸೆಂಬರ್​ 21 ರಂದು ಅವರು ನ್ಯಾಯಾಲಯದ ಮುಂದೆ ಹಾಜರಾದಾಗ ಈ ಬಗ್ಗೆ ನಿರ್ಧರಿಸಬಹುದು" ಎಂದ ಹೇಳಿತು.

2006 ರಿಂದ 2011ರವರೆಗೆ ಡಿಎಂಕೆ ಆಡಳಿತದಲ್ಲಿ ಉನ್ನತ ಶಿಕ್ಷಣ ಹಾಗೂ ಖನಿಜ ಸಂಪನ್ಮೂಲ ಸಚಿವರಾಗಿದ್ದ ವೇಲೆ ಸಚಿವ ಪೊನ್ಮುಡಿ ಅವರು ಆದಾಯಕ್ಕಿಂತ 1.79 ಕೋಟಿ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ, ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿತ್ತು. 2016ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಲ್ಲುಪುರಂ ವಿಚಾರಣಾ ನ್ಯಾಯಾಲಯ ಇಬ್ಬರನ್ನು ಖುಲಾಸೆಗೊಳಿಸಿತ್ತು. ಇದೀಗ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​, ಸಚಿವರು ತಮ್ಮ ಪತ್ನಿಯ ಹೆಸರಿನಲ್ಲಿ ಆಸ್ತಿ ಸಂಗ್ರಹಿಸಿರುವುದು ಸಾಬೀತಾಗಿದ್ದು, ಇಬ್ಬರನ್ನೂ ದೋಷಿಗಳೆಂದು ತೀರ್ಪು ನೀಡಿದೆ.

ಇದನ್ನೂ ಓದಿ: ಬಲವಂತದ ಮತಾಂತರ ಪ್ರಕರಣ: ಆರು ಮಂದಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.