ಭೋಪಾಲ್: ಮಧ್ಯಪ್ರದೇಶ ರಾಜ್ಯ ಸರ್ಕಾರವು 'ಧಾರ್ಮಿಕ ಸ್ವಾತಂತ್ರ್ಯ' ಕಾಯ್ದೆಯಡಿ ಮದುವೆ ಅಥವಾ ಇನ್ನಿತರ ಮೋಸದ ಮೂಲಕ ಮತಾಂತರಗೊಳ್ಳಲು ಯತ್ನಿಸಿದರೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿಯು ಮತಾಂತರಕ್ಕೆ ಒಳಗಾಗಲು ಬಯಸಿದರೆ, ಅವನು ಅಥವಾ ಅವಳು ಪ್ರಸ್ತಾವಿತ ಕಾನೂನಿನಡಿ ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಯ ಮುಂದೆ ಘೋಷಣೆ ಮಾಡಬೇಕಾಗುತ್ತದೆ.
ಚಂಡಮಾರುತ ಹಾವಳಿ ಪ್ರದೇಶಕ್ಕೆ ಪವನ್ ಕಲ್ಯಾಣ್ ಭೇಟಿ
ಪ್ರಸ್ತಾವಿತ ಕಾನೂನಿನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ಸಭೆ ನಡೆಸಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.