ಗ್ವಾಲಿಯರ್ (ಮಧ್ಯಪ್ರದೇಶ): ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯ ಆರಂಭಿಸಿದ್ದು, ಇದರ ಭಾಗವಾಗಿ ಶುಕ್ರವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗ್ವಾಲಿಯರ್ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ, ಆಡಳಿತಾರೂಢ ಬಿಜೆಪಿ ಮಾರ್ಗದ ಉದ್ದಕ್ಕೂ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಪ್ರಿಯಾಂಕಾ ಗಾಂಧಿ ಅವರಿಗೆ ಟಾಂಗ್ ಕೊಡುವ ಪ್ರಯತ್ನ ಮಾಡಿದೆ. ಮಧ್ಯಪ್ರದೇಶ ಸರ್ಕಾರವು ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕಲ್ಯಾಣ ಯೋಜನೆಗಳ ಬಗ್ಗೆ ಬೆಳಕು ಚೆಲ್ಲುವ ಪೋಸ್ಟರ್ಗಳನ್ನು ಅಂಟಿಸಿ, 'ಪ್ರಿಯಾಂಕಾ ಗಾಂಧಿ ಅವರೇ ಸ್ಮೈಲ್ ಕೊಡಿ' ಎಂದೂ ವ್ಯಂಗ್ಯ ಮಾಡಲಾಗಿದೆ.
-
प्रियंका गांधी जी , आप मुस्कुराइए , आप मध्य प्रदेश में है....
— Narendra Saluja (@NarendraSaluja) July 21, 2023 " class="align-text-top noRightClick twitterSection" data="
जहां -
-45 लाख लाड़ली लक्ष्मी बेटियां है...
-1 करोड़ 25 लाख लाड़ली बहनो को यहां 1000 रुपए प्रतिमाह मिल रहे है...
-किसानों को कर्जमाफी का झांसा देने वाली कांग्रेस के कारण डिफॉल्टर हुए किसानों की ब्याज माफी का पैसा… pic.twitter.com/FpR3CHLUMl
">प्रियंका गांधी जी , आप मुस्कुराइए , आप मध्य प्रदेश में है....
— Narendra Saluja (@NarendraSaluja) July 21, 2023
जहां -
-45 लाख लाड़ली लक्ष्मी बेटियां है...
-1 करोड़ 25 लाख लाड़ली बहनो को यहां 1000 रुपए प्रतिमाह मिल रहे है...
-किसानों को कर्जमाफी का झांसा देने वाली कांग्रेस के कारण डिफॉल्टर हुए किसानों की ब्याज माफी का पैसा… pic.twitter.com/FpR3CHLUMlप्रियंका गांधी जी , आप मुस्कुराइए , आप मध्य प्रदेश में है....
— Narendra Saluja (@NarendraSaluja) July 21, 2023
जहां -
-45 लाख लाड़ली लक्ष्मी बेटियां है...
-1 करोड़ 25 लाख लाड़ली बहनो को यहां 1000 रुपए प्रतिमाह मिल रहे है...
-किसानों को कर्जमाफी का झांसा देने वाली कांग्रेस के कारण डिफॉल्टर हुए किसानों की ब्याज माफी का पैसा… pic.twitter.com/FpR3CHLUMl
ಗ್ವಾಲಿಯರ್ ಮಾಜಿ ಕಾಂಗ್ರೆಸ್ ನಾಯಕ, ಹಾಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಭದ್ರಕೋಟೆಯಾಗಿದೆ. ಈ ಹಿಂದೆ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ಸಿಂಧಿಯಾ ಈಗ ಬಿಜೆಪಿಯಲ್ಲಿದ್ದಾರೆ. ಪ್ರಿಯಾಂಕಾ ಗಾಂಧಿ ಗ್ವಾಲಿಯರ್ನಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದು, ಕುತುಹೂಲವನ್ನು ಕೆರಳಿಸಿದೆ. ಇದರ ನಡುವೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಜಾರಿ ಮಾಡಿದ ಯೋಜನೆಗಳನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ವಿಶೇಷವಾಗಿ ಪ್ರಿಯಾಂಕಾ ಗಾಂಧಿ ಸಾಗುವ ರಸ್ತೆಯಲ್ಲಿ 'ಪ್ರಿಯಾಂಕಾ ಗಾಂಧಿ ಅವರೇ ಸ್ಮೈಲ್ ಕೊಡಿ, ನೀವು ಮಧ್ಯಪ್ರದೇಶದಲ್ಲಿದ್ದೀರಿ' ಎಂಬ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
ಇತ್ತೀಚೆಗೆ ಶಿವರಾಜ್ ಸಿಂಗ್ ಚವಾಣ್ ಜಾರಿಗೆ ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ನೀಡುವ ಲಾಡ್ಲಿ ಲಕ್ಷ್ಮೀ ಯೋಜನೆ ಸೇರಿ ಉತರ ಯೋಜನೆಗಳ ಬಗ್ಗೆ ಪೋಸ್ಟರ್ಗಳನ್ನು ಹಾಕಲಾಗಿದೆ. ಬಿಜೆಪಿ ಸರ್ಕಾರದ ಈ ಸಾಧನೆಗಳನ್ನು ನೋಡಿ ಖುಷಿ ಪಡುವಂತೆ ಪ್ರಿಯಾಂಕಾ ಅವರನ್ನು ಪೋಸ್ಟರ್ಗಳಲ್ಲಿ ಕೇಳಲಾಗಿದೆ. 'ಸ್ಮೈಲ್ ಪ್ರಿಯಾಂಕಾ, ನೀವು 45 ಲಕ್ಷ ಲಾಡ್ಲಿ ಲಕ್ಷ್ಮೀಯರು ಇರುವ ಮಧ್ಯಪ್ರದೇಶದಲ್ಲಿದ್ದೀರಿ, ಪ್ರತಿಯ ಮನೆಯ ಮಹಿಳೆಯರು 1,000 ರೂ. ಪಡೆಯುತ್ತಾರೆ' ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಅದೇ ರೀತಿ, ಮತ್ತೊಂದು ಪೋಸ್ಟರ್ನಲ್ಲಿ ರೈತರ ಸಮಸ್ಯೆ ಪ್ರಸ್ತಾಪಿಸಿ, 'ಸರ್ಕಾರ ರೈತರಿಗೆ ಸಾಲದ ಬಡ್ಡಿ ಮನ್ನಾ ಹಣ ನೀಡುತ್ತಿದೆಯೇ ಹೊರತು, ಸಾಲ ಮನ್ನಾ ಎಂಬ ಸುಳ್ಳು ಭರವಸೆಯನ್ನಲ್ಲ' ಎಂದು ಬರೆಯಲಾಗಿದೆ. ಅದೇ ರೀತಿ, ಇನ್ನೊಂದು ಪೋಸ್ಟರ್ನಲ್ಲಿ 'ಪ್ರಿಯಾಂಕಾ ಜಿ ಸ್ಮೈಲ್, ಮಧ್ಯಪ್ರದೇಶದಲ್ಲಿ ಬಡತನ ಕಡಿಮೆಯಾಗಿದೆ. ಬೆಳವಣಿಗೆ ದರ ಶೇ.19.76ರಷ್ಟು ಆಗಿದೆ' ಎಂಬ ಬರೆಯುವ ಮೂಲಕ ಪ್ರಿಯಾಂಕಾ ಗಾಂಧಿ ಅವರಿಗೆ ಟಾಂಗ್ ನೀಡಲಾಗಿದೆ.
ಮಹಿಳೆಯರ ಪ್ರತಿಭಟನೆ: ಮತ್ತೊಂದೆಡೆ, ಪ್ರಿಯಾಂಕಾ ಗಾಂಧಿ ಗ್ವಾಲಿಯರ್ಗೆ ಬಂದಿಳಿದ ಬಳಿಕ ರಾಣಿ ಲಕ್ಷ್ಮೀಬಾಯಿ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ಆದರೆ, ಈ ವೇಳೆ ಕೂಡ ಮಹಿಳೆಯರ ಗುಂಪೊಂದು ಪ್ರಿಯಾಂಕಾ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿನ ಮಹಿಳೆಯರ ಸಮಸ್ಯೆಗಳ ಕುರಿತ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಆಕ್ರೋಶ ಹೊರ ಹಾಕಿದರು.
ಅಶೋಕ್ ಗೆಹ್ಲೋಟ್ ಆಡಳಿತ ನಡೆಸುತ್ತಿರುವ ರಾಜಸ್ಥಾನದ ಮಹಿಳೆಯರ ನೋವುಗಳ ಬಗ್ಗೆ ಪ್ರಿಯಾಂಕಾ ಗಾಂಧಿ ಅವರಿಗೆ ಅರಿವಿಲ್ಲ. ರಾಜಸ್ಥಾನದಲ್ಲಿ ಮಹಿಳೆಯರು ಮೇಲೆ ದೌರ್ಜನ್ಯ ನಡೆಯುತ್ತಿದೆ. ಸುಳ್ಳು ಕೇಸ್ಗಳನ್ನು ದಾಖಲಿಸಲಾಗುತ್ತಿದೆ. ಇದನ್ನು ಕೇಳಲು ರಾಹುಲ್ ಗಾಂಧಿ ಆಗಲಿ, ಪ್ರಿಯಾಂಕಾ ಗಾಂಧಿ ಆಗಲಿ ರಾಜಸ್ಥಾನಕ್ಕೆ ಭೇಟಿ ನೀಡುತ್ತಿಲ್ಲ ಎಂದು ಮಹಿಳೆಯರು ದೂರಿದರು. ಇದೇ ವೇಳೆ, ಪ್ರಿಯಾಂಕಾ ಗಾಂಧಿ ವಿರುದ್ಧ ಘೋಷಣೆಗಳನ್ನು ಮಹಿಳೆಯರು ಕೂಗಿದರು. ಅಲ್ಲದೇ, ಭಿತ್ತಿಪತ್ರಗಳನ್ನು ಪ್ರಿಯಾಂಕಾ ಗಾಂಧಿ ಅವರತ್ತ ಎಸೆಯಲು ಆರಂಭಿಸಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಪ್ರಿಯಾಂಕಾ ಗಾಂಧಿ ಭದ್ರತೆಯಲ್ಲಿ ರಾಣಿ ಲಕ್ಷ್ಮೀಬಾಯಿ ಅವರ ಸಮಾಧಿ ಸ್ಥಳಕ್ಕೆ ಕರೆದುಕೊಂಡು ಹೋದರು.
ಇದನ್ನೂ ಓದಿ: MP Elections: ಮಧ್ಯಪ್ರದೇಶದಲ್ಲೂ ಪೇಸಿಎಂ ಪೋಸ್ಟರ್ ವಾರ್; ರಂಗೇರಿದ ರಾಜಕೀಯ