ಭೋಪಾಲ್ (ಮಧ್ಯ ಪ್ರದೇಶ): ಲವ್ ಜಿಹಾದ್ ಪ್ರಕರಣವೊಂದರಲ್ಲಿ ಭೋಪಾಲ್ ವ್ಯಕ್ತಿಯೊಬ್ಬ ಒಂದೂವರೆ ವರ್ಷದ ಹಿಂದೆ ಝಾನ್ಸಿಯಿಂದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿರುವುದಾಗಿ ಪ್ರಕರಣ ದಾಖಲಿಸಲಾಗಿದೆ. ಆತ ಅಪಹರಿಸಿದ ಬಾಲಕಿ ಹೆಸರನ್ನು ಭಾರತಿಯಿಂದ ತರನ್ನಂ ಎಂದು ಬದಲಾಯಿಸಲಾಗಿತ್ತು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ತರನ್ನಂ ಎಂಬ ಹೆಸರು ಹೇಳಿ ಚುರಭಟ್ಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಆಕೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಯ ಬಳಿಕ ಉತ್ತರ ಪ್ರದೇಶದ ಪೊಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಹಿಂದೂ ಸಂಘಟನೆಗಳಿಂದ ಆಕ್ರೋಶ:
ಚುನಭಟ್ಟಿಯಲ್ಲಿ ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ, ವಿವಿಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುವಂತೆ ಒತ್ತಾಯಿಸಿವೆ.
ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಹಿಂದೆ ಗೃಹ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಘೋಷಿಸಿದ್ದರು.
ಅನಾರೋಗ್ಯದಿಂದ ಸಾವು:
ಬಾಲಕಿಯ ಮರಣೋತ್ತರ ವರದಿಯಲ್ಲಿ ಆಕೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಪ್ರೀತಿಸಿ ಮದುವೆಯಾದ ಬಳಿಕ ದಂಪತಿಗಳು ಭೋಪಾಲ್‌ಗೆ ಸ್ಥಳಾಂತರಗೊಂಡಿದ್ದರು.
ಮದುವೆಯಾದ ಸುಮಾರು ಒಂದೂವರೆ ವರ್ಷಗಳ ನಂತರ, ಆಕೆಯ ಸ್ಥಿತಿ ತುಂಬಾ ದುರ್ಬಲವಾಗಿದ್ದು, ಚಿಕಿತ್ಸೆಯ ಸಮಯದಲ್ಲಿ ಚುನಭಟ್ಟಿ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ.
ಪೊಲೀಸರು ಮುಖ್ಯ ಆರೋಪಿಯಾಗಿರುವ ಆಕೆಯ ಪತಿ ಮತ್ತು ಇನ್ನೊಬ್ಬ ಯುವಕನನ್ನು ಬಂಧಿಸಿದ್ದಾರೆ. ಕಟ್ಟುನಿಟ್ಟಾಗಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.