ETV Bharat / bharat

ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ

author img

By

Published : Apr 14, 2021, 11:11 AM IST

ದೇಶದಲ್ಲಿ ಜಾರಿಯಲ್ಲಿರುವ ಕಾಯ್ದೆಯ ನಿಬಂಧನೆಗಳ ಪ್ರಕಾರ, ಗರ್ಭಧಾರಣೆಯ 20 ವಾರಗಳ ಆಚೆಗಿನ ಗರ್ಭಪಾತವನ್ನು ಹೈಕೋರ್ಟ್‌ನ ಅನುಮತಿಯೊಂದಿಗೆ ಮಾತ್ರ ಮಾಡಬಹುದು.

High Court Allows 15-Year-Old Rape Victim To Terminate 28-Week Pregnancy
15 ವರ್ಷದ ಅತ್ಯಾಚಾರ ಸಂತ್ರಸ್ತೆಗೆ 28 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಹೈಕೋರ್ಟ್ ಅನುಮತಿ

ಜಬಲ್ಪುರ: 15 ವರ್ಷದ ಅತ್ಯಾಚಾರ ಸಂತ್ರಸ್ತೆಗೆ 28 ​​ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಮಧ್ಯಪ್ರದೇಶ ಹೈಕೋರ್ಟ್ ಅನುಮತಿ ನೀಡಿದೆ.

ಅರ್ಜಿದಾರರ 15 ವರ್ಷದ ಮಗಳ ಗರ್ಭಧಾರಣೆಯನ್ನು ಪ್ರಮಾಣಿತ ಮಾರ್ಗಸೂಚಿಗಳ ಪ್ರಕಾರ ಹೆಚ್ಚಿನ ಕಾಳಜಿ ಮತ್ತು ಮುನ್ನೆಚ್ಚರಿಕೆ ವಹಿಸುವ ಮೂಲಕ ಅಂತ್ಯಗೊಳಿಸುವಂತೆ ನ್ಯಾ.ವಿಶಾಲ್ ಧಗತ್ ವೈದ್ಯಕೀಯ ತಜ್ಞರಿಗೆ ನಿರ್ದೇಶನ ನೀಡಿದ್ದಾರೆ.

ಮುಖ್ಯ ವೈದ್ಯಾಧಿಕಾರಿಯ ವರದಿಯನ್ನು ದಾಖಲೆಯಾಗಿ ತೆಗೆದುಕೊಂಡ ನಂತರ ಏಪ್ರಿಲ್ 9 ರಂದು ಹೈಕೋರ್ಟ್ ಗರ್ಭಪಾತಕ್ಕೆ ಅನುಮತಿಸಿದೆ ಎಂದು ಅವರು ಹೇಳಿದರು.

ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯ ನಿಬಂಧನೆಗಳ ಪ್ರಕಾರ, ಗರ್ಭಧಾರಣೆಯ 20 ವಾರಗಳ ಆಚೆಗಿನ ಗರ್ಭಪಾತವನ್ನು ಹೈಕೋರ್ಟ್‌ನ ಅನುಮತಿಯೊಂದಿಗೆ ಮಾತ್ರ ಮಾಡಬಹುದು.

2020 ರ ನವೆಂಬರ್‌ನಲ್ಲಿ ಬಾಲಕಿ ತನ್ನ ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಆಕೆಯ ಪೋಷಕರು ಮತ್ತು ಕುಟುಂಬದ ಇತರ ಸದಸ್ಯರು ಕೆಲಸಕ್ಕೆ ಹೋದಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿ ಪರ ವಕೀಲೆ ಶರದಾ ದುಬೆ ತಿಳಿಸಿದ್ದಾರೆ.

ಇದನ್ನೂ ಓದಿ : ಮಾಸ್ಕ್ ಮರೆತ ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿಗೆ 2,000 ರೂ ದಂಡ

"ಗರ್ಭಧಾರಣೆಯನ್ನು ಕೊನೆಗೊಳಿಸದಿದ್ದರೆ, ಮಗು ಜೀವಂತವಾಗಿ ಜನಿಸಿದರೂ ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ. ಮಗು ಬದುಕುಳಿದರೂ ಸಹ ಅದು ದೈಹಿಕ ಮತ್ತು ಮಾನಸಿಕ ಅಂಗವೈಕಲ್ಯದಿಂದ ಬಳಲಬಹುದು" ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.