ETV Bharat / bharat

ಕುನೋ ರಾಷ್ಟ್ರೀಯ ಉದ್ಯಾನವಕ್ಕೆ ಹೆಣ್ಣು ಚೀತಾ ವೀರಾ..!

author img

By ETV Bharat Karnataka Team

Published : Dec 21, 2023, 7:25 AM IST

ಭಾರತದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಎಂಟು ನಮೀಬಿಯನ್​ ಚೀತಾಗಳನ್ನು ಭಾರತಕ್ಕೆ ತರಿಸಿ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಈ ಚೀತಾಗಳನ್ನು ಕಾಡಿಗೆ ಬಿಡುಗಡೆ ಮಾಡಿದ್ದರು.

Madhya Pradesh: Female Cheetah released in wild at Kuno National Park
ಕುನೋ ರಾಷ್ಟ್ರೀಯ ಉದ್ಯಾನವಕ್ಕೆ ಹೆಣ್ಣು ಚೀತಾ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ವೀರಾ ಎಂಬ ಹೆಣ್ಣು ಚೀತಾವನ್ನು ಬಿಡಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಪಿಪಲ್‌ಬಾರಿ ಪ್ರವಾಸಿ ವಲಯದ ವ್ಯಾಪ್ತಿಗೆ ಬರುವ ನಯಾಗಾಂವ್ ಅರಣ್ಯ ವ್ಯಾಪ್ತಿಯಲ್ಲಿ ಈ ಚೀತಾವನ್ನು ಬಿಡಲಾಗಿದೆ. ಈ ಹೆಣ್ಣು ಚೀತಾದ ಆರೋಗ್ಯ ಚೆನ್ನಾಗಿದೆ ಎಂದು ಅಧಿಕಾರಿಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈಗ, ಪ್ರವಾಸಿಗರು ಉದ್ಯಾನದಲ್ಲಿ ದೊಡ್ಡ ಬೆಕ್ಕುಗಳ ಜಾತಿಗೆ ಸೇರಿದ ಚೀತಾವನ್ನು ನೋಡಿ ಆನಂದಿಬಹುದಾಗಿದೆ. ಮೂರು ದಿನಗಳ ಹಿಂದೆ ಎರಡು ಗಂಡು ಚೀತಾಗಳಾದ ಅಗ್ನಿ ಮತ್ತು ವಾಯುವನ್ನು ರಾಷ್ಟ್ರೀಯ ಉದ್ಯಾನವನದ ಅಹೇರಾ ಪ್ರವಾಸೋದ್ಯಮ ವಲಯದ ಪರೋಂಡ್ ಅರಣ್ಯ ವ್ಯಾಪ್ತಿಯಲ್ಲಿ ಬಿಡಲಾಗಿತ್ತು. ಈ ವೀರಾ ಬಿಡುಗಡೆಯು 'ಚೀತಾ ಮರುಪರಿಚಯ ಯೋಜನೆ'ಯ ಭಾಗವಾಗಿದೆ ಮತ್ತು ಪ್ರವಾಸಿಗರಿಗೆ ಈ ಪ್ರಾಣಿಗಳನ್ನು ಪರಿಚಯ ಮಾಡಿಕೊಡುವ ಯೋಜನೆಯ ಭಾಗವಾಗಿದೆ. ಈ ಮೂಲಕ ನಿಗದಿ ಮಾಡಿದ ಜಾಗದಲ್ಲಿ ಪ್ರವಾಸಿಗರಿಗೆ ತಮ್ಮ ನೆಚ್ಚಿನ ಪ್ರಾಣಿಗಳನ್ನು ನೋಡಿ ಆನಂದಿಸಲು ಅವಕಾಶ ಮಾಡಿಕೊಡಲಾಗಿದೆ.

ಕುನೋ ರಾಷ್ಟ್ರೀಯ ಉದ್ಯಾನವನವು ವಿದ್ಯಾಚಲ ಪರ್ವತಗಳ ಉತ್ತರ ಭಾಗದಲ್ಲಿದೆ ಮತ್ತು 344.686 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಇದಕ್ಕೆ ಚಂಬಲ್ ನದಿಯ ಉಪನದಿಯ ಹೆಸರನ್ನು ಸಹ ಇಡಲಾಗಿದೆ. ಇದಕ್ಕೂ ಮೊದಲು, ಭಾರತದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಎಂಟು ನಮೀಬಿಯನ್​ ಚೀತಾಗಳನ್ನು ಭಾರತಕ್ಕೆ ತರಿಸಿ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು, ಅಂದರೆ 2022ರ ಸೆಪ್ಟೆಂಬರ್​ 17 ರಂದು ಎಂಟು ನಮೀಬಿಯನ್ ಚಿರತೆಗಳ ಮೊದಲ ಬ್ಯಾಚ್ ಬಿಡುಗಡೆ ಮಾಡಲಾಗಿತ್ತು.

ಭಾರತದಲ್ಲಿ ಚೀತಾಗಳ ಸಂತತಿ ನಶಿಸಿ ಹೋಗಿದ್ದರಿಂದ ಈ ಅಪರೂಪದ ಪ್ರಾಣಿಸಂಕುಲದ ಅಭಿವೃದ್ಧಿಯ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ನಮೀಬಾದಿಂದ ಚೀತಾಗಳನ್ನು ತರಿಸಿ, ಭಾರತೀಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಿ, ಆ ಬಳಿಕ ಇವುಗಳನ್ನು ಕಾಡಿಗೆ ಬಿಡಲಾಗಿದೆ. ಇನ್ನು ದಕ್ಷಿಣ ಆಫ್ರಿಕಾದಿಂದ ಹನ್ನೆರಡು ಚೀತಾಗಳನ್ನು ತರಿಸಿಕೊಳ್ಳಲಾಗಿತ್ತು. ಫೆಬ್ರವರಿ 2023 ರಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಈ ಎಲ್ಲ ಚೀತಾಗಳನ್ನು ಬಿಡುಗಡೆ ಮಾಡಲಾಯಿತು.

ನಮೀಬಿಯಾ, ದಕ್ಷಿಣ ಆಫ್ರಿಕಾ ಮತ್ತು ಭಾರತಕ್ಕೆ ಸೇರಿದ ಅಧಿಕಾರಿಗಳು, ವಿಜ್ಞಾನಿಗಳು, ವನ್ಯಜೀವಿ ಜೀವಶಾಸ್ತ್ರಜ್ಞರು ಮತ್ತು ಪಶುವೈದ್ಯರನ್ನು ಒಳಗೊಂಡ ತಜ್ಞರ ತಂಡದ ಸೂಕ್ಷ್ಮ ಮೇಲ್ವಿಚಾರಣೆಯಲ್ಲಿ ಸಂಪೂರ್ಣ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತಿಳಿಸಿದೆ. (ANI)

ಇದನ್ನು ಓದಿ: ಡೈನೋಸರ್ ಮೊಟ್ಟೆಗಳನ್ನು ಶತಮಾನಗಳಿಂದ ದೇವರೆಂದು ಪೂಜಿಸುತ್ತಿದ್ದ ಗ್ರಾಮಸ್ಥರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.