ETV Bharat / bharat

ಹಾಡುತ್ತಾ, ಕುಣಿಯುತ್ತ ಮೆರವಣಿಗೆ ಮೂಲಕ ವೃದ್ಧನ ಅಂತ್ಯಕ್ರಿಯೆ - ವಿಡಿಯೋ ವೈರಲ್​! - ಮಧ್ಯಪ್ರದೇಶದ ಧಾರ್​​ನಲ್ಲಿ ವೃದ್ಧನ ಅಂತ್ಯಕ್ರಿಯೆ

Different Funeral Procession in Madhya Pradesh: ವೃದ್ಧನ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹಾಡುತ್ತಾ, ಕುಣಿಯುತ್ತ ಮೆರವಣಿಗೆ ನಡೆಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Old Man Dancing Funeral Procession
Old Man Dancing Funeral Procession
author img

By

Published : Jan 25, 2022, 3:26 PM IST

ಧಾರ್​(ಮಧ್ಯಪ್ರದೇಶ): ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಸಾಮಾನ್ಯವಾಗಿ ಕುಟುಂಬಸ್ಥರು, ಸಂಬಂಧಿಕರು ಕಣ್ಣೀರು ಹಾಕುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಅಂತ್ಯಸಂಸ್ಕಾರ ಕಾರ್ಯ ವಿಭಿನ್ನವಾಗಿದೆ. ಹೀಗೂ ಅಂತ್ಯಕ್ರಿಯೆ ಮಾಡುವುದುಂಟಾ ಎಂದು ನಿಮಗೆ ಅಚ್ಚರಿ ಆಗುತ್ತೆ.

ಹಾಡುತ್ತಾ, ಕುಣಿಯುತ್ತಾ, ಮೆರವಣಿಗೆ ನಡೆಸಿ ವೃದ್ಧನ ಅಂತ್ಯಕ್ರಿಯೆ

ದೇವಿಪುರದ ಭುವವಾಡ ಗ್ರಾಮದ 100 ವರ್ಷದ ಜಮ್​ ಸಿಂಗ್​ ಸಾವನ್ನಪ್ಪಿದ್ದು, ಈ ವೇಳೆ ಕುಟುಂಬಸ್ಥರು, ಗ್ರಾಮಸ್ಥರು ಅದ್ಧೂರಿಯಾಗಿ ಆತನ ಅಂತ್ಯಕ್ರಿಯೆ ನಡೆಸಿದ್ದಾರೆ. ಹಾಡುತ್ತಾ, ಕುಣಿಯುತ್ತ, ಮೃತದೇಹದ ಮೆರವಣಿಗೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಇದನ್ನೂ ಓದಿರಿ: ಅಪಘಾತಕ್ಕೀಡಾದ್ರೂ ಮುದ್ದಾದ ಮರಿಗೆ ಜನ್ಮ ನೀಡಿ, ಪ್ರಾಣ ಬಿಟ್ಟ ಜಿಂಕೆ.. ದೃಶ್ಯ ನೋಡಿ ಮರುಗಿದ ಜನ!

ಭಾರತದ ಕೆಲವೊಂದು ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದಲ್ಲಿ ಈ ರೀತಿಯ ಸಂಪ್ರದಾಯವಿದ್ದು, ಮೃತ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಡ್ಯಾನ್ಸ್ ಮಾಡುವುದು ಕಂಡು ಬರುತ್ತದೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.