ETV Bharat / bharat

ಮಧ್ಯಪ್ರದೇಶದಲ್ಲಿ 71.11 ರಷ್ಟು ಮತದಾನ: ಛತ್ತೀಸ್​​​ಗಢದಲ್ಲಿ 51.53 ರಷ್ಟು ಮತ ಚಲಾವಣೆ

ಮಧ್ಯಪ್ರದೇಶದಲ್ಲಿ ಮತದಾನ ಮುಕ್ತಾಯಗೊಂಡಿದ್ದು ಸಂಜೆ 5 ಗಂಟೆ ವೇಳೆಗೆ 71.11 ರಷ್ಟು ಮತ ಚಲಾವಣೆಯಾಗಿದೆ.

ಮಧ್ಯಪ್ರದೇಶದಲ್ಲಿ 71.11 ರಷ್ಟು ಮತದಾನ
ಮಧ್ಯಪ್ರದೇಶದಲ್ಲಿ 71.11 ರಷ್ಟು ಮತದಾನ
author img

By ETV Bharat Karnataka Team

Published : Nov 17, 2023, 8:19 PM IST

ಭೋಪಾಲ್​: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ನಡೆದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸಂಜೆ 5 ಗಂಟೆ ವೇಳೆಗೆ ಶೇ.71.11ರಷ್ಟು ಜನ ಮತ ಚಲಾಯಿಸಿದರೆ, ರಾಜಧಾನಿ ಭೋಪಾಲ್​ನಲ್ಲಿ 45.34ರಷ್ಟು ವೋಟಿಂಗ್​ ನಡೆದರೆ, ಅಗರ್ ಮಾಲ್ವಾದಲ್ಲಿ ಶೇ.82 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಧ್ಯಪ್ರದೇಶದಲ್ಲಿ ಇಂದು ಒಂದೇ ಹಂತದಲ್ಲಿ ಎಲ್ಲ 230 ಕ್ಷೇತ್ರಗಳಿಗೆ ಮತದಾನ ನಡೆಯಿತು. ಬೆಳಗ್ಗೆ 7ಗಂಟೆಯಿಂದ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ನಕ್ಸಲ್ ಪೀಡಿತ ಕೆಲ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಮತದಾನ ನಡೆಯಿತು.

ಮತ್ತೊಂದೆಡೆ ಛತ್ತೀಸ್​​ಗಢದಲ್ಲಿ 70 ಸ್ಥಾನಗಳಿಗೆ ನಡೆದ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮಧ್ಯಾಹ್ನ 3 ಗಂಟೆ ವೆರೆಗೂ ಶೇ.55.31 ರಷ್ಟು ಮತ ಚಲಾವಣೆಯಾಗಿದೆ. ಗರಿಯಾಬಂದ್ ಜಿಲ್ಲೆಯಲ್ಲಿ ಒಟ್ಟು ಶೇ.57.65ರಷ್ಟು ಮತದಾನವಾದರೆ, ರಾಜೀಂ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ. 56.16 , ಬಿಂದ್ರನವಗಢದಲ್ಲಿ ಶೇ. 59.16 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಧ್ಯಾಹ್ನ 1ರವರೆಗೆ ಛತ್ತೀಸ್‌ಗಢದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.37.87 ಮತದಾನವಾಗಿದೆ.

ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,63,14,479 ಇದ್ದು, ಇದರಲ್ಲಿ ಪುರುಷ ಮತದಾರರ ಸಂಖ್ಯೆ 81,41,624 ಮತ್ತು ಮಹಿಳಾ ಮತದಾರರು ಸಂಖ್ಯೆ 81,72,171 ಇದೆ. 684 ತೃತೀಯ ಲಿಂಗಿ ಮತದಾರರಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸುವವರ ಸಂಖ್ಯೆ 5,64,968 ಆಗಿದೆ. ವಿಕಲಚೇತನ ಮತದಾರರ ಸಂಖ್ಯೆ 1,30,909 ಆಗಿದೆ. 80 ವರ್ಷ ವಯಸ್ಸಿನ ಮತದಾರರ ಸಂಖ್ಯೆ 158,254 ಮತ್ತು 100 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 2161 ಆಗಿದೆ. ಒಟ್ಟು 18,833 ಮತಗಟ್ಟೆಗಳಲ್ಲಿ ಎರಡನೇ ಹಂತದ ಮತದಾನ ನಡೆಯಿತು.

ಚುನಾವಣೆ ವೇಳೆ ಅಲ್ಲಲ್ಲಿ ಗಲಾಟೆ - ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಮತದಾನದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಕಲ್ಲು ತೂರಾಟ ನಡೆದಿದೆ. ದಿಮಾನಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಿರ್ಘಾನ್ ಗ್ರಾಮದಲ್ಲಿನ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಛತ್ತೀಸ್​ಗಢದಲ್ಲಿ ನಕ್ಸಲರ ದಾಳಿ: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಬಡೇ ಗೋಬ್ರಾ ಗ್ರಾಮದಲ್ಲಿ ನಕ್ಸಲೀಯರು ಐಇಡಿ ಸ್ಫೋಟಗೊಳಿಸಿದ್ದು, ಇದರಲ್ಲಿ ಇಂಡೋ ಟಿಬೆಟಿಯನ್ ಪೊಲೀಸ್ ಪಡೆಯ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಛತ್ತೀಸ್​​​​ಗಢದಲ್ಲಿ ಹಿಂಸಾಚಾರ: ನಕ್ಸಲಿಯರಿಂದ ಐಇಡಿ ಸ್ಪೋಟ, ಒಬ್ಬ ಯೋಧ ಸಾವು.. ಮಧ್ಯಪ್ರದೇಶದಲ್ಲಿ ಕಲ್ಲುತೂರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.