ಲೈಂಗಿಕತೆ ಹೆಚ್ಚು ಸುಖಕರವಾಗಿ ಹಾಗೂ ಆನಂದಕರವಾಗಿರಬೇಕಾದರೆ ಮಹಿಳೆಯ ಯೋನಿಯ ಪಾತ್ರ ಹೆಚ್ಚಿರುತ್ತದೆ. ಕಾರಣ, ಸಂಭೋಗದ ಸಮಯದಲ್ಲಿ ಮಹಿಳೆಯ ಯೋನಿಯು ಸ್ವಾಭಾವಿಕವಾಗಿ ಸ್ವತಃ ನಯವಾಗುತ್ತದೆ. ಇದು ಉತ್ತಮ ಲೈಂಗಿಕತೆಗೆ ಅಗತ್ಯವೆಂದು ಪರಿಗಣಿಸಲಾಗಿದೆ.
ಆದರೆ, ವಯಸ್ಸು ಮತ್ತು ಇತರ ಸಂಬಂಧಿತ ಅಂಶಗಳಿಂದಾಗಿ ಯೋನಿಯು ತನ್ನಷ್ಕಕ್ಕೆ ತಾನೇ ನಯವಾಗಲು ಸಾಧ್ಯವಾಗದಿರಬಹುದು. ಇದು ಲೈಂಗಿಕ ಸಮಯದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ನೋವುಂಟು ಮಾಡುತ್ತದೆ. ಆದ್ದರಿಂದ, ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಲೂಬ್ರಿಕಂಟ್‌ಗಳನ್ನು ಬಳಸುವುದು ಸಹಾಯಕವಾಗುತ್ತದೆ.
ಲೂಬ್ರಿಕಂಟ್‌ಗಳ ನೆರವಿನಿಂದ ನೋವುರಹಿತ ಸಂಭೋಗ : ಲೈಂಗಿಕತೆ ಕೇವಲ ಸಂತೋಷ ಮತ್ತು ತೃಪ್ತಿಯನ್ನು ನೀಡುವುದಲ್ಲ. ಬದಲಾಗಿ, ಪುರುಷರು ಮತ್ತು ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆದರೆ, ವಯಸ್ಸು ಮತ್ತು ಇತರೆ ಬೇರೆ ಬೇರೆ ಕಾರಣಗಳಿಂದ ಲೈಂಗಿಕತೆ ನೋವಿಗೆ ಕಾರಣವಾಗಬಹುದು.
ಸಂಭೋಗದ ಸಮಯದಲ್ಲಿ ಮಹಿಳೆಯರಲ್ಲಿ ಯೋನಿ ಶುಷ್ಕವಾಗಿದ್ದರೆ ಹಾಗೂ ಇತರೆ ಕಾರಣದಿಂದ ಅದು ನಯಗೊಳ್ಳದಿದ್ದರೆ ಇಬ್ಬರೂ ಪಾಲುದಾರರಿಗೆ ಲೈಂಗಿಕ ಸಂಭೋಗವು ನೋವಿನ ಅನುಭವವಾಗಬಹುದು. ಆದರೆ, ನೀವು ಲೈಂಗಿಕತೆಯಿಂದ ದೂರವಿರಬೇಕಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲೂಬ್ರಿಕಂಟ್‌ಗಳು ಬಹಳ ಸಹಾಯಕವಾಗಿವೆ. ಆದರೆ, ದುರದೃಷ್ಟವಶಾತ್ ಭಾರತದ ಹೆಚ್ಚಿನ ಜನರಿಗೆ ಲೂಬ್ರಿಕಂಟ್‌ಗಳು ಯಾವುವು? ಮತ್ತು ಅವು ಹೇಗೆ ಸಹಾಯಕವಾಗಿವೆ? ಎಂಬುದರ ಬಗ್ಗೆ ತಿಳಿದಿಲ್ಲ. ಆದ್ದರಿಂದ, ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.
ಲೂಬ್ರಿಕಂಟ್‌ಗಳು ಯಾವಾಗ ಸಹಾಯಕವಾಗಬಹುದು?
ಕೆಲವೊಮ್ಮೆ ಮಹಿಳೆಯರು ಕೆಲವು ದೈಹಿಕ ಕಾರಣಗಳಿಂದ ಅಥವಾ ಆಗಾಗ ಲೈಂಗಿಕತೆಯ ಪರಿಣಾಮವಾಗಿ ಸೌಮ್ಯ ಅಥವಾ ಅತಿಯಾದ ಯೋನಿ ಶುಷ್ಕತೆ ಅನುಭವಿಸಬಹುದು. ಇದು ಲೈಂಗಿಕ ಸಮಯದಲ್ಲಿ ಅಸ್ವಸ್ಥತೆ ಅಥವಾ ನೋವಿಗೆ ಕಾರಣವಾಗಬಹುದು. ಸ್ತನ್ಯಪಾನ ಮಾಡುವ ಅಥವಾ ಕೀಮೋಥೆರಪಿಯಂತಹ ಚಿಕಿತ್ಸೆಗೆ ಒಳಗಾಗುವ ಮಹಿಳೆಯರಲ್ಲಿ ಯೋನಿಯ ಶುಷ್ಕತೆ ಸಾಮಾನ್ಯವಾಗಿ ಕಂಡು ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ನಯಗೊಳಿಸಿದ ಕಾಂಡೋಮ್‌ಗಳನ್ನು ಬಳಸುತ್ತಾರೆ. ಆದರೆ, ಅವರಲ್ಲಿ ಹೆಚ್ಚಿನವರು ಲೈಂಗಿಕತೆಯಿಂದ ಸಂಪೂರ್ಣ ದೂರವಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಲೂಬ್ರಿಕಂಟ್‌ಗಳು ಸೂಕ್ತವಾಗಿ ಬಳಕೆಗೆ ಬರುತ್ತವೆ. ನೀವು ತಿಳಿದಿರಬೇಕಾದ ಕೆಲವು ರೀತಿಯ ಲೂಬ್ರಿಕಂಟ್‌ಗಳು ಇಲ್ಲಿವೆ..
1. ನೈಸರ್ಗಿಕ ಲೂಬ್ರಿಕಂಟ್‌ಗಳು
ನಾವು ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಎಣ್ಣೆಗಳು ನೈಸರ್ಗಿಕ ಲೂಬ್ರಿಕಂಟ್‌ಗಳು. ಆದರೆ, ಎಲ್ಲಾ ರೀತಿಯ ತೈಲಗಳನ್ನು ಲೈಂಗಿಕ ಸಮಯದಲ್ಲಿ ಬಳಸಲಾಗುವುದಿಲ್ಲ. ಯಾಕೆಂದರೆ, ಅವುಗಳಲ್ಲಿ ಕೆಲವು ಎಣ್ಣೆಗಳು ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು ಅಥವಾ ಸಾಸಿವೆ ಎಣ್ಣೆಗಳಂತಹ ಲೂಬ್ರಿಕಂಟ್‌ಗಳು ಚರ್ಮದ ತುರಿಕೆಗೆ ಕಾರಣವಾಗಬಹುದು.
ಸಾಮಾನ್ಯವಾಗಿ ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಲೂಬ್ರಿಕಂಟ್‌ಗಳಾಗಿ ಬಳಸಬಹುದು. ಲೈಂಗಿಕ ಸಮಯದಲ್ಲಿ ಕಾಂಡೋಮ್ ಹರಿಯುವ ಸಾಧ್ಯತೆ ಇರುವುದರಿಂದ ಎಣ್ಣೆ ಮತ್ತು ಕಾಂಡೋಮ್ ಅನ್ನು ಒಟ್ಟಿಗೆ ಬಳಸಬಾರದು. ದೀರ್ಘಾವಧಿಯ ಸಂಬಂಧದಲ್ಲಿರುವ ಅಥವಾ ಕಾಂಡೋಮ್ ಬಳಕೆ ಅಗತ್ಯವಿಲ್ಲದ ದಂಪತಿಗೆ ತೈಲ ಆಧಾರಿತ ಲೂಬ್ರಿಕಂಟ್‌ಗಳು ಸೂಕ್ತ ಎಂದು ಪರಿಗಣಿಸಬಹುದು.
2. ಹೈಬ್ರಿಡ್ ಲೂಬ್ರಿಕಂಟ್ಸ್
ಹೈಬ್ರಿಡ್ ಲೂಬ್ರಿಕಂಟ್‌ಗಳು ಸಾಮಾನ್ಯವಾಗಿ ಸಿಲಿಕೋನ್ ಮತ್ತು ನೀರು ಎರಡನ್ನೂ ಒಳಗೊಂಡಿರುತ್ತವೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸಬಹುದಾದ ವಿವಿಧ ರೀತಿಯ ಲೂಬ್ರಿಕಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂಬುದನ್ನು ಗಮನಿಸುವುದು ಮುಖ್ಯ. ಲೈಂಗಿಕತೆಗೆ ಲೂಬ್ರಿಕಂಟ್‌ಗಳನ್ನು ಬಳಸುವುದರಿಂದ ಅಥವಾ ಲೈಂಗಿಕ ಆಟಿಕೆಗಳನ್ನು ಬಳಸುವಾಗ ಅವಶ್ಯಕತೆಗಳು ಬದಲಾಗಬಹುದು. ಆದ್ದರಿಂದ, ಅದನ್ನು ಖರೀದಿಸುವಾಗ ಒಬ್ಬರು ಜಾಗರೂಕರಾಗಿರಬೇಕು. ಮುಂಚಿತವಾಗಿ ಅದರ ಪ್ರಕಾರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದುವುದು ಸೂಕ್ತ.
3. ನೀರು ಆಧಾರಿತ ಸೆಕ್ಸ್ ಲ್ಯೂಬ್ರಿಕಂಟ್ಸ್
ಇವುಗಳನ್ನು ಸಾಮಾನ್ಯ ಲೈಂಗಿಕ ಲೂಬ್ರಿಕಂಟ್‌ಗಳೆಂದು ಪರಿಗಣಿಸಲಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‌ಗಳಲ್ಲಿ ಇವು ಲಭ್ಯವಿದೆ. ಇವು ನೈಸರ್ಗಿಕ ಲೂಬ್ರಿಕಂಟ್‌ಗಳಂತೆ ಭಾಸವಾಗುತ್ತವೆ. ಇವುಗಳನ್ನು ಚರ್ಮದ ಮೇಲೆಯೂ ಬಳಸಬಹುದು. ಯಾಕೆಂದರೆ, ಅವುಗಳು ಚರ್ಮದ ಮೇಲಾಗುವ ಕಿರಿಕಿರಿ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಇದರ ಜೊತೆಯಲ್ಲಿ ಇವು ಸಂಭೋಗದ ಸಮಯದಲ್ಲಿ ಅಸ್ವಸ್ಥತೆಯನ್ನು ಉಂಟು ಮಾಡುವುದಿಲ್ಲ. ಯಾಕೆಂದರೆ, ಅವು ಶಿಶ್ನದ ಮೇಲೆ ಬಳಸಿದ ನಂತರ ಚರ್ಮದಿಂದ ಬೇಗನೆ ಹೀರಲ್ಪಡುತ್ತವೆ ಮತ್ತು ಅವು ಬೇಗನೆ ಒಣಗುತ್ತವೆ ಎನ್ನಲಾಗಿದೆ.
ಈ ರೀತಿಯ ಲ್ಯೂಬ್ರಿಕಂಟ್ಸ್ಗಳು ಸಾಮಾನ್ಯವಾಗಿ ಕ್ಯಾರಗೆನಾನ್ ಅಥವಾ ಲೋಳೆಸರದಂತಹ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್‌ಗಳೊಂದಿಗೆ ರೂಪಿಸಲಾಗುತ್ತದೆ. ಆದರೆ, ಕೆಲವು ನೀರು ಆಧಾರಿತ ಲ್ಯೂಬ್‌ಗಳು ಗ್ಲಿಸರಿನ್ ಅನ್ನು ಹೊಂದಿವೆ. ಅವು ಮಹಿಳೆಯರಲ್ಲಿ ಸೋಂಕನ್ನು ಉಂಟು ಮಾಡಬಹುದು. ಹಾಗಾಗಿ, ಲೈಂಗಿಕ ಸಂಭೋಗದ ನಂತರ ಜನರು ತಮ್ಮ ಜನನಾಂಗಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ.
4. ಸಿಲಿಕಾನ್ ಆಧಾರಿತ ಸೆಕ್ಸ್ ಲ್ಯೂಬ್ರಿಕಂಟ್ಸ್
ಸಿಲಿಕೋನ್ ಆಧಾರಿತ ಲೂಬ್ರಿಕಂಟ್‌ಗಳು ಹೆಚ್ಚಾಗಿ ನೀರನ್ನು ಹೊಂದಿರುವುದಿಲ್ಲ. ಈ ರೀತಿಯ ಲೂಬ್ಗಳು ನಿಮ್ಮ ಚರ್ಮದ ಮೇಲೆ ಹೊಂದಿಕೊಂಡಂತೆ ಅನುಭವಕ್ಕೆ ಬರುತ್ತದೆ. ಕಾರಣ ಇವು ನೀರು ಮತ್ತು ತೈಲ ಆಧಾರಿತ ಲ್ಯೂಬ್‌ಗಳಂತೆ ಚರ್ಮದಿಂದ ಸಂಪೂರ್ಣವಾಗಿ ಹೀರಲ್ಪಡುವುದಿಲ್ಲ.
5. ಕಾಂಡೋಮ್
ಕಾಂಡೋಮ್‌ಗಳನ್ನು ಸಹ ಲೂಬ್ರಿಕಂಟ್ ಆಗಿ ಬಳಸಬಹುದು. ಯಾಕೆಂದರೆ, ಅವುಗಳ ಹೊರ ಪದರವು ನಯವಾಗಿರುತ್ತದೆ. ಇದರ ಜೊತೆಗೆ ಮಗುವನ್ನು ಬಯಸದ ದಂಪತಿಗೆ ಕಾಂಡೋಮ್ ಬಳಕೆ ಸುರಕ್ಷಿತವಾಗಿದೆ.
ಲೂಬ್ರಿಕಂಟ್‌ಗಳ ಬಳಕೆ ನಿಮಗೆ ಹೆಚ್ಚು ಆಹ್ಲಾದಕರ ಅನುಭವವನ್ನು ನೀಡಬಹುದಾದರೂ, ಅವುಗಳನ್ನು ಬಳಸುವಾಗ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಜೊತೆಗೆ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದರ ಹೊರತಾಗಿ, ಯೋನಿಯ ಶುಷ್ಕತೆಯ ಸಮಸ್ಯೆ ಮುಂದುವರಿದರೆ ಅವರು ತಕ್ಷಣ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಬೇಕಾಗಿರುವುದು ಅಗತ್ಯ.