ETV Bharat / bharat

ಗುಡ್​ ನ್ಯೂಸ್​.. ವಾಣಿಜ್ಯ ಸಿಲಿಂಡರ್​ಗಳ ದರ ಇಳಿಕೆ, ಎಷ್ಟು ಗೊತ್ತಾ?

19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆ 36 ರೂಪಾಯಿ ಕಡಿತ ಮಾಡಲಾಗಿದೆ. ಇದು ಹೋಟೆಲ್​, ರೆಸ್ಟೋರೆಂಟ್​ ಡಾಬಾಗಳಿಗೆ ಲಾಭವಾಗಲಿದೆ.

lpg-price-commercial-gas-price-reduced
ವಾಣಿಜ್ಯ ಸಿಲಿಂಡರ್​ಗಳ ದರ ಇಳಿಕೆ
author img

By

Published : Aug 1, 2022, 9:09 AM IST

Updated : Aug 1, 2022, 11:04 AM IST

ನವದೆಹಲಿ: ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಂಸತ್ತಲ್ಲೂ ಕೂಡ ಪ್ರತಿಪಕ್ಷಗಳು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ಗಳ ದರದಲ್ಲಿ ಅಲ್ಪ ಇಳಿಸಿ, ಹೊರೆ ತಗ್ಗಿಸುವ ಯತ್ನ ಮಾಡಿದೆ.

ಇಂಡಿಯನ್ ಆಯಿಲ್​ ಕಾರ್ಪೋರೇಷನ್ 19 ಕೆಜೊ ತೂಕದ ವಾಣಿಜ್ಯ ಸಿಲಿಂಡರ್​ಗಳ ದರದಲ್ಲಿ 36 ರೂಪಾಯಿ ಕಡಿತ ಮಾಡಿದೆ. ಇದರಿಂದ 2012 ರೂಪಾಯಿ ಇದ್ದ ಸಿಲಿಂಡರ್​ ಇದೀಗ 1976 ರೂಪಾಯಿಗೆ ಸಿಗಲಿದೆ. ಈ ದರ ಇಂದಿನಿಂದಲೇ ಜಾರಿಗೆ ಬರಲಿದೆ.

36 ರೂಪಾಯಿ ಕಡಿತದೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ 1976.50 ರೂ.ಗೆ ಆಗಿದೆ. ಈ ಹಿಂದೆ ಅದು 2012.50 ರೂ. ಇತ್ತು. ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 2095.50 ಇದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2132 ರೂ. ಇತ್ತು. ಮುಂಬೈನಲ್ಲಿ 1936.50 ರೂ.ಗೆ 19 ಕೆಜಿ ತೂಕದ ಸಿಲಿಂಡರ್​ ಸಿಗಲಿದೆ.

ಯಾರಿಗೆ ಲಾಭ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಕಾರ, 19 ಕೆಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 36 ರೂ. ಕಡಿತಗೊಳಿಸಲಾಗಿದೆ. ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಡಾಬಾಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ಇದರ ಲಾಭ ಸಿಗಲಿದೆ.

ಗೃಹಬಳಕೆ ಸಿಲಿಂಡರ್ ಬೆಲೆ ಬದಲಿಲ್ಲ: ಸಬ್ಸಿಡಿ ರಹಿತ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದರ ಬೆಳೆ 1000 ರೂಪಾಯಿಗೂ ಹೆಚ್ಚಿದೆ. ದೆಹಲಿಯಲ್ಲಿ 1053 ರೂಪಾಯಿ ಇದ್ದರೆ, ಮುಂಬೈನಲ್ಲಿ 1053 ರೂ., ಕೋಲ್ಕತ್ತಾದಲ್ಲಿ 1079 ರೂ. ಮತ್ತು ಚೆನ್ನೈನಲ್ಲಿ 1068.50 ರೂ. ಇದೆ.

ಓದಿ: ನಾಜಿ ಸರ್ವಾಧಿಕಾರಿ ಹಿಟ್ಲರ್ ವಾಚ್ ಬರೋಬ್ಬರಿ 1.1 ಮಿಲಿಯನ್‌ಗೆ ಹರಾಜು

Last Updated : Aug 1, 2022, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.