ETV Bharat / bharat

ಸಂತ್ರಸ್ತರ ಕಡಿಮೆ ವಯಸ್ಸನ್ನು ಮರಣದಂಡನೆಗೆ ಪರಿಗಣಿಸಲಾಗದು: ಸುಪ್ರೀಂಕೋರ್ಟ್​ - Karnataka High Court

ಅತ್ಯಾಚಾರ-ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರ ವಯಸ್ಸಿನ ಆಧಾರದ ಮೇಲೆ ಶಿಕ್ಷೆ ವಿಧಿಸುವ ವಾದಗಳನ್ನು ಸುಪ್ರೀಂಕೋರ್ಟ್ ವಿಶ್ಲೇಷಣೆ ನಡೆಸಿದ್ದು, ಕರ್ನಾಟಕದ ಖಾನಾಪುರದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

Low age of victims in rape-and-murder cases not sufficient for imposing death penalty: SC
ಸಂತ್ರಸ್ತರ ಕಡಿಮೆ ವಯಸ್ಸನ್ನು ಮರಣದಂಡನೆಗೆ ಪರಿಗಣಿಸಲಾಗದು: ಸುಪ್ರೀಂಕೋರ್ಟ್​
author img

By

Published : Nov 10, 2021, 1:58 PM IST

ನವದೆಹಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಒಳಗಾದವರ ವಯಸ್ಸು ಕಡಿಮೆ ಎಂಬ ಅಂಶವನ್ನು ಆಧರಿಸಿ ಅಪರಾಧಿಯನ್ನು ಮರಣದಂಡನೆ ಶಿಕ್ಷೆಗೆ ಪರಿಗಣಿಸುವುದು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

40 ವರ್ಷಗಳಲ್ಲಿ ನಡೆದ ಸುಮಾರು 67 ಪ್ರಕರಣಗಳನ್ನು ವಿಶ್ಲೇಷಣೆಗೊಳಪಡಿಸಿದ ನಂತರವೇ ಸುಪ್ರೀಂಕೋರ್ಟ್ ಈ ರೀತಿಯ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಸಂಜೀವ್ ಖನ್ನಾ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್​​ನ ಈ ಅಭಿಪ್ರಾಯಕ್ಕೆ ಕಾರಣವಾದ ಪ್ರಕರಣ ಕರ್ನಾಟಕದ್ದಾಗಿದೆ. 2010ರಲ್ಲಿ ಬೆಳಗಾವಿ ಖಾನಾಪುರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಈರಪ್ಪ ಸಿದ್ದಪ್ಪ ಎಂಬಾತನನ್ನು ಅಪರಾಧಿ ಎಂದು ಸಾಬೀತು ಮಾಡಲಾಗಿತ್ತು. ಈರಪ್ಪ ಸಿದ್ದಪ್ಪ ಬಾಲಕಿಯನ್ನು ಕೊಲೆ ಮಾಡಿ, ಮೃತದೇಹವನ್ನು ಚೀಲದಲ್ಲಿ ತುಂಬಿ ಹೊಳೆಗೆ ಎಸೆದಿದ್ದನು.

ಪೊಲೀಸರು ತನಿಖೆ ನಡೆಸಿ, ಈರಪ್ಪ ಸಿದ್ದಪ್ಪನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆತ ಅಪರಾಧಿ ಎಂಬುದು ಸಾಬೀತಾಗಿದ್ದು, ವಿಚಾರಣೆ ನಡೆಸಿದ ಸೆಷನ್ಸ್​ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ವಿಧಿಸಿತ್ತು. ಇದೇ ತೀರ್ಪನ್ನು ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು. ಈರಪ್ಪ ಸಿದ್ದಪ್ಪಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಕೋರ್ಟ್ ಮರಣದಂಡನೆ ವಿಧಿಸಿರುವ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳನ್ನು ನಡೆಸಿ, ಮೇಲ್ಮನವಿ ಸಲ್ಲಿಸಿದ ವ್ಯಕ್ತಿ (ಈರಪ್ಪ ಸಿದ್ದಪ್ಪ) ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಅಪರಾಧ ಮಾಡಿರುವುದು ಸಾಬೀತಾಗಿದ್ದು, ಯಾವುದೇ ರೀತಿಯಿಂದಲೂ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ಆದರೆ ಮರಣದಂಡನೆ ಬದಲಾಗಿ ಕನಿಷ್ಠ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಬೇಕು ಎಂದಿದ್ದಾರೆ. ಉಳಿದ ಪ್ರಕರಣಗಳಿಗೂ ಏಕಕಾಲದಲ್ಲಿ ಶಿಕ್ಷೆ ವಿಧಿಸಬೇಕು ಎಂದು ಸಂಜೀವ್ ಖನ್ನಾ ಆದೇಶಿಸಿದ್ದಾರೆ.

ಮೊದಲೇ ಹೇಳಿದಂತೆ ಅತ್ಯಾಚಾರ-ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರ ವಯಸ್ಸಿನ ಆಧಾರದ ಮೇಲೆ ಶಿಕ್ಷೆ ವಿಧಿಸುವ ವಾದಗಳನ್ನು ಸುಪ್ರೀಂಕೋರ್ಟ್ ವಿಶ್ಲೇಷಣೆ ನಡೆಸಿದ್ದು, ಇದೇ ವೇಳೆ ಶತ್ರುಘ್ನ ಬಾಬನ್ ಮೆಶ್ರಮ್ ಅವರ ಪ್ರಕರಣವನ್ನು ಉಲ್ಲೇಖಿಸಿದೆ. ಇಂಥಹದ್ದೇ 67 ಪ್ರಕರಣಗಳ ವಿಚಾರಣೆ ನಡೆಸಿದೆ.

ಇದನ್ನೂ ಓದಿ: 200 ಕೋಟಿ ರೂಪಾಯಿ ವಂಚನೆ ಪ್ರಕರಣ: ತಿಹಾರ್​ ಜೈಲಿನ ಐವರು ಅಧಿಕಾರಿಗಳು ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.