ETV Bharat / bharat

ಪ್ರಿಯಕರನ ಬಿಟ್ಟು ಬೇರೆ ಯುವಕನೊಂದಿಗೆ ಮದುವೆಗೆ ರೆಡಿಯಾದ ಯುವತಿ.. ಮೋಸ ಹೋದ ಪ್ರೇಮಿಯಿಂದ 18 ಬಾರಿ ಚಾಕು ಇರಿತ

ತಾನೂ ಪ್ರೀತಿಸುತ್ತಿದ್ದ ಯುವತಿ (Girlfriend) ಬೇರೆ ಯುವಕನೊಂದಿಗೆ ಮದುವೆಯಾಗಲು (Marriage) ಒಪ್ಪಿದ್ದರಿಂದ ತನ್ನ ಪ್ರಿಯತಮೆಯಿಂದ ಮೋಸ ಹೋದ ಪ್ರೇಮಿಯೊಬ್ಬ (Lover) 18 ಬಾರಿ ಚಾಕುವಿನಿಂದ ಮನಸೋಇಚ್ಛೆ (Knife Attack) ತಿವಿದಿರುವ ಘಟನೆ ಹೈದರಾಬಾದ್​ನಲ್ಲಿ (Hyderabad) ನಡೆದಿದೆ.

lover attack on girlfriend, lover attack on girlfriend with knife, lover attack on girlfriend with knife in hyderabad, Hyderabad crime news, ಗೆಳತಿ ಮೇಲೆ ಲವರ್​ ದಾಳಿ, ಗೆಳತಿ ಮೇಲೆ ಲವರ್​ ಚಾಕುವಿನಿಂದ ದಾಳಿ, ಹೈದರಾಬಾದ್​ನಲ್ಲಿ  ಗೆಳತಿ ಮೇಲೆ ಲವರ್​ ದಾಳಿ, ಗೆಳತಿ ಮೇಲೆ ಲವರ್​ ಚಾಕುವಿನಿಂದ ದಾಳಿ, ಹೈದರಾಬಾದ್​ ಅಪರಾಧ ಸುದ್ದಿ,
ಲವರ್​ನ ಬಿಟ್ಟು ಬೇರೆ ಯುವಕನೊಂದಿಗೆ ಮದುವೆ ರೆಡಿಯಾದ ಯುವತಿ.
author img

By

Published : Nov 11, 2021, 9:52 AM IST

ಹೈದರಾಬಾದ್ (Hyderabad)​: ನನ್ನನ್ನು ಪ್ರೀತಿಸಿ ಬೇರೆ ಯುವಕನೊಂದಿಗೆ ಸಪ್ತಪದಿ (Marriage) ತುಳಿಯಲು ಇಚ್ಛಿಸಿದ್ದ ಯುವತಿಗೆ (Girlfriend) ಪ್ರೀತಿಯಲ್ಲಿ ಮೋಸದ ಹೋದ ಪ್ರೇಮಿಯೊಬ್ಬ (Lover) ಆಕೆಗೆ 18 ಬಾರಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಇಲ್ಲಿನ ಎಲ್​ಬಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ (LB Nagar police station) ನಡೆದಿದೆ.

ವಿಕಾರಾಬಾದ್ ಜಿಲ್ಲೆಯ (Vikarabad District) ದೌಲ್ತಾಬಾದ್ ತಾಲೂಕಿನ ಗ್ರಾಮವೊಂದರ ನಿವಾಸಿ 20 ವರ್ಷದ ಯುವತಿ ಮತ್ತು ತಿಮ್ಮರೆಡ್ಡಿಪಲ್ಲಿ ಗ್ರಾಮದಲ್ಲಿ ವಾಸಿಸುವ ಬಸವರಾಜ್ (23) ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಷಯ ಪೋಷಕರಿಗೆ ತಿಳಿದಿದ್ದು, ಇವರ ಮದುವೆಗೆ ನಿರಾಕರಿಸಿದ್ದರು.

ಇನ್ನು ಯುವತಿಯ ಪೋಷಕರು ಬೇರೊಬ್ಬ ಯುವಕನೊಂದಿಗೆ ತಮ್ಮ ಮಗಳ ಮದುವೆ ನಿಶ್ಚಯಿಸಿದ್ದರು. ಅದರಂತೆ ಅವರಿಬ್ಬರಿಗೂ ನಿಶ್ಚಿತಾರ್ಥವೂ ನಡೆದಿತ್ತು. ಬೇರೊಬ್ಬ ಯವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಯುವತಿಯನ್ನು ಎಲ್​ಬಿ ನಗರ ಪೊಲೀಸ್​ ಠಾಣಾ (LB Nagar police station) ವ್ಯಾಪ್ತಿಯ ಹಸ್ತಿನಾಪುರಂನಲ್ಲಿರುವ ಆಕೆಯ ಚಿಕ್ಕಪ್ಪನ ಮನೆಯಲ್ಲಿ ಇರಿಸಲಾಗಿತ್ತು.

ಈ ವಿಚಾರ ಬಸವರಾಜ್‌ಗೆ ತಿಳಿದಿದೆ. ಬುಧವಾರ (wednesday) ಯುವತಿ ಇದ್ದ ಸ್ಥಳಕ್ಕೆ ಬಸವರಾಜ್ (Basavaraj) ತೆರಳಿದ್ದಾನೆ. ಮನೆಯಲ್ಲಿ ಯುವತಿ ಒಂಟಿಯಾಗಿರುವುದನ್ನು ಗಮನಿಸಿದ ಬಸವರಾಜ್​ ಕೊನೆಯ ಬಾರಿ ಭೇಟಿಯಾಗೋಣಾ ಬಾ ಎಂದು ಆಕೆಯ ಮೊಬೈಲ್​ಗೆ ಸಂದೇಶ ಕಳುಹಿಸಿದ್ದಾನೆ. ಅದರಂತೆ ಯುವತಿ ಬಸವರಾಜ್​ ಭೇಟಿಯಾಗಲು ಬಂದಿದ್ದಾಳೆ.

ಯುವತಿ ಮನೆಯಿಂದ ಹೊರಗೆ ಬಂದ ನಂತರ ತನ್ನನ್ನು ಮದುವೆಯಾಗುವಂತೆ ಬಸವರಾಜ್ (Basavaraj)​ ಮನವಿ ಮಾಡಿಕೊಂಡಿದ್ದಾನೆ. ಆದರೆ, ಯುವತಿ ಬಸವರಾಜ್​ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಬಸವರಾಜ್​ ಆಕೆಗೆ 18 ಬಾರಿ ಚಾಕುವಿನಿಂದ ತಿವಿದು (Knife Attack) ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಯುವತಿ ಮೇಲೆ ದಾಳಿ ನಡೆಯುತ್ತಿರುವುದನ್ನು ನೋಡಿದ ನೆರೆಹೊರೆಯವರು ಆಕೆಯ ಸಹಯಾಕ್ಕೆ ದೌಡಾಯಿಸಿದ್ದಾರೆ. ರಕ್ತಸಿಕ್ತವಾಗಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು (doctors) ಆಕೆಯ ಸ್ಥಿತಿ ಗಂಭೀರವಾಗಿದೆ (Critical condition) ಮತ್ತು 48 ಗಂಟೆಗಳಲ್ಲಿ (48 Hours) ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಘಟನೆ ಕುರಿತು ಎಲ್​ಬಿ ನಗರ ಪೊಲೀಸ್​ ಠಾಣೆಯಲ್ಲಿ (LB Nagar police station) ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಬಸವರಾಜ್​ನನ್ನು (Basavaraj) ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.