ETV Bharat / bharat

ಪ್ರಿಯತಮೆ​, ಆಕೆಯ ತಾಯಿಗೆ ಸೀಮೆಎಣ್ಣೆ ಸುರಿದು ತಾನೂ ಬೆಂಕಿ ಹಚ್ಚಿಕೊಂಡ ಪ್ರೇಮಿ! - ಚೆನ್ನೈ ಆತ್ಮಹತ್ಯೆ ಪ್ರಕರಣ ಸುದ್ದಿ

ವಿಧಿಯ ಆಟಕ್ಕೆ ಮೂರು ಪ್ರಾಣಗಳು ಬಲಿಯಾಗಿವೆ. ತನ್ನ ಜೊತೆ ಪ್ರಿಯತಮೆ ಮತ್ತು ಆಕೆಯ ತಾಯಿಗೆ ಸಿಮೇಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

Lover and she mother with boy friend committed suicide, Lover and she mother with boy friend committed suicide in Chennai, Chennai crime news, Chennai suicide case news, ಲವರ್​ ಮತ್ತು ಆಕೆಯ ತಾಯಿ ಜೊತೆ ಬಾಯ್​ಫ್ರೇಂಡ್​ ಆತ್ಮಹತ್ಯೆ, ಚೆನ್ನೈನಲ್ಲಿ ಲವರ್​ ಮತ್ತು ಆಕೆಯ ತಾಯಿ ಜೊತೆ ಬಾಯ್​ಫ್ರೇಂಡ್​ ಆತ್ಮಹತ್ಯೆ, ಚೆನ್ನೈ ಅಪರಾಧ ಪ್ರಕರಣ, ಚೆನ್ನೈ ಆತ್ಮಹತ್ಯೆ ಪ್ರಕರಣ ಸುದ್ದಿ,
ಪ್ರಿಯತಮೆ​, ಆಕೆಯ ತಾಯಿಗೆ ಸಿಮೇಎಣ್ಣೆ ಸುರಿದು ತಾನೂ ಬೆಂಕಿ ಹಚ್ಚಿಕೊಂಡ ಪ್ರೇಮಿ!
author img

By

Published : Feb 6, 2021, 11:41 AM IST

ಚೆನ್ನೈ: ಪ್ರೇಮಿಯೊಬ್ಬ ತನ್ನ ಪ್ರಿಯತಮೆ ಮತ್ತು ಆಕೆಯ ತಾಯಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಕೊರಕ್ಕು ಪೇಟದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸತೀಶ್​ (31) ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಇದೇ ನಗರ ನಿವಾಸಿ ರಜಿತಾ (26) ಜೊತೆ ಸತೀಶ್​ ಕಳೆದ 7 ವರ್ಷದಿಂದಲೂ ಪ್ರೀತಿಸುತ್ತಿದ್ದಾರೆ. ಆದ್ರೆ ಇವರ ಪ್ರೇಮಕ್ಕೆ ರಜಿತಾ ತಾಯಿಯೇ ವಿಲನ್​ ಆಗಿದ್ದರು.

ಹೌದು, ರಜಿತಾ ತಾಯಿ ವೆಂಕಟಮ್ಮ ಇವರ ಪ್ರೇಮವನ್ನು ನಿರಾಕರಿಸಿದ್ದರು. ಆದ್ರೂ ಇವರಿಬ್ಬರು ಯಾರಿಗೂ ತಿಳಿಯದಂತೆ ಮದುವೆ ಮಾಡಿಕೊಂಡಿದ್ದರು ಎಂಬ ಸಮಾಚಾರವಿದೆ. ಕೆಲ ದಿನಗಳ ಹಿಂದೆ ರಜಿತಾ ತಂದೆ ಮೃತಪಟ್ಟಿದ್ದಾರೆ. ಅವರ ಉದ್ಯೋಗ ರಜಿತಾಳಿಗೆ ಬಂದಿದೆ. ಈ ಹಿನ್ನೆಲೆ ಬೇರೆ ಯುವಕನೊಂದಿಗೆ ವೆಂಕಟಮ್ಮ ತನ್ನ ಮಗಳು ರಜಿತಾಳಿಗೆ ನಿಶ್ಚಿತಾರ್ಥ ಮಾಡಿಸಿದ್ದಾರೆ.

ರಜಿತಾಳಿಗೆ ನಿಶ್ಚಿತಾರ್ಥ ಮಾಡಿರುವ ವಿಷಯ ಸತೀಶ್​ಗೆ ಗೊತ್ತಾಗಿದೆ. ಶುಕ್ರವಾರ ಬೆಳಗಿನ ಜಾವ ರಜಿತಾಳ ಮನೆಗೆ ತೆರಳಿ ಆಕೆಯ ತಾಯಿ ವೆಂಕಟಮ್ಮ ಜೊತೆ ಗಲಾಟೆ ನಡೆಸಿದ್ದಾನೆ. ಮಾತ - ಮಾತಲ್ಲಿ ಇಬ್ಬರು ಮೇಲೆ ಸೀಮೆ ಎಣ್ಣೆ ಸುರಿದು ಬಳಿಕ ತನ್ನ ಮೇಲಿಯೂ ಚುಮಣಿ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ಮೂವರಿಗೂ ಬೆಂಕಿ ತಗುಲಿದ್ದು, ಕೇಕೆ ಹಾಕಿದ್ದಾರೆ. ಇವರ ಕಿರುಚಿಕೊಂಡಿದ್ದ ಶಬ್ದ ಕೇಳೆ ನೆರೆಹೊರೆಯವರು ಇವರ ಮನೆಗೆ ಓಡಿ ಬಂದಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು. ಅಷ್ಟೋತ್ತಿಗಾಗಲೇ ಮೂವರು ಬೆಂಕಿಗಾಹುತಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.