ಝಾನ್ಸಿ(ಉತ್ತರಪ್ರದೇಶ): ಝಾನ್ಸಿ ಜಿಲ್ಲೆಯಲ್ಲಿ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದ್ದು, ಥ್ರಿಲ್ಲರ್ ಸಿನಿಮಾ ರೀತಿ ರೋಚಕತೆ ಸೃಷ್ಟಿಸಿದೆ. ಇಬ್ಬರು ಗೆಳತಿಯರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರಿಗೂ ಭವಿಷ್ಯದ ಜೀವನದಲ್ಲಿ ಗಂಡ ಹೆಂಡತಿ ಆಗುವ ಆಸೆ ಹುಟ್ಟುತ್ತದೆ. ಅವರಿಬ್ಬರ ಮೋಹದ ಪ್ರೀತಿಯ ಜ್ವರ ಎಷ್ಟಿತ್ತೆಂದರೆ ಹುಡುಗಿಯೊಬ್ಬಳು ಇನ್ನೊಬ್ಬಳಿಗಾಗಿ ತನ್ನ ಲಿಂಗವನ್ನು ಬದಲಾಯಿಸಿದ್ದು, ಗಂಡಸನಾಗಿ ಮದುವೆಯೂ ಆಗಿದ್ದಾರೆ.
ಆದರೆ ಮೂರು ವರ್ಷದ ಬಳಿಕ ವೈಮನಸ್ಸು ಬಂದಿದ್ದು, ಸೋನಾಲ್ ಈಗ ಸೋಹೆಲ್ ಜತೆಗೆ ಸಂಗಾತಿಯಾಗಿ ಬದುಕಲು ತಿರಸ್ಕರಿಸಿದ್ದು, ಇದೀಗ ಆ (ಸೋಹೆಲ್) ಹುಡುಗನಿಗೆ ಮತ್ತೆ ಹುಡುಗಿಯಾಗಲು ಬದಲಾಗುವಂತೆ ಅದೇ ಗೆಳತಿ ಹೇಳುತ್ತಿದ್ದಾಳೆ. ಆದರೆ ಸದ್ಯ ಪ್ರಕರಣ ನ್ಯಾಯಾಲಯದ ಮೆಟ್ಟಲೇರಿದೆ.
ಪ್ರಕರಣದ ಬಗ್ಗೆ ವಕೀಲರು ಹೇಳುವುದಿಷ್ಟು: ಲಿಂಗ ಬದಲಾವಣೆ ಮಾಡಿಕೊಂಡಿರುವ ಸಂತ್ರಸ್ತಳ ವಕೀಲ ಭಗವತ್ ಶರಣ್ ತಿವಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ’’ಝಾನ್ಸಿ ನಗರದ ವಾಸಿಗಳಾಗಿದ್ದ ಸನಾ ಖಾನ್ ಹಾಗೂ ಸೋನಾಲ್ ಶ್ರೀವಾಸ್ತವ್ ಎಂಬ ಹುಡುಗಿಯರು ಒಬ್ಬರನ್ನೊಬ್ಬರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಾವಿಬ್ಬರು ಭವಿಷ್ಯದ ಜೀವನದಲ್ಲಿ ಒಟ್ಟಾಗಿ ಕೂಡಿ ಬಾಳಬೇಕೆಂದರೆ, ನಮ್ಮಿಬ್ಬರಲ್ಲಿ ಒಬ್ಬರು ಪುರುಷನಾಗಬೇಕು. ನನ್ನ ಜತೆ ಜೀವನ ಕಳೆಯ ಬೇಕೆಂದರೆ ನೀನು ನನ್ನ ಹುಡುಗನಾಗಿ ಬದಲಾಗಬೇಕು ಎಂದು ಸನಾ ಖಾನ್ಗೆ ಸೋನಾಲ್ ಶ್ರೀವಾಸ್ತವ್ ಒತ್ತಾಯಿಸಿದ್ದಳು.
ಸೋನಾಲಳ ಮಾತಿಗೆ ಮರು ಮಾತನಾಡದೇ ತಕ್ಷಣ ಸನಾ ಖಾನ್ ಎಂಬ ಹುಡುಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಲಿಂಗ ಬದಲಾಯಿಸಿಕೊಂಡಿದ್ದಳು. ಹುಡುಗಿಯಾಗಿದ್ದ ಸನಾ ಶಸ್ತ್ರಚಿಕಿತ್ಸೆ ಬಳಿಕ ಸೊಹೇಲ್ ಆಗಿ ಬದಲಾಗಿದ್ದ. ಅಷ್ಟೊತ್ತಿಗೆ ಸೋನಾಲ್ ಶ್ರೀವಾಸ್ತವ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸವೂ ಸಿಕ್ಕಿತ್ತು. ಈ ಹಿಂದಿನ ಸೋನಾಲ್ ತನ್ನ ಗೆಳತಿಯ ಎಲ್ಲ ಖರ್ಚುಗಳನ್ನು ಭರಿಸಿದ್ದಳು. ಇಬ್ಬರೂ ಗಂಡ ಮತ್ತು ಹೆಂಡತಿಯಂತೆ ಜೀವನ ಕೂಡಾ ಸಾಗಿಸುತ್ತಿದ್ದರು. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಂಗಾತಿಗಳಾಗಿರುವುದನ್ನು ಹಂಚಿಕೊಂಡಿದ್ದರು ಕೂಡಾ. ಆದರೆ ಈಗ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ‘‘ ಎನ್ನುವುದು ವಕೀಲರು ಹೇಳುವ ಮಾತು.
’’ಕೆಲವು ದಿನಗಳ ನಂತರ ಸನಾ ಖಾನ್ (ಸೋಹೇಲ್ ಖಾನ್) ತನ್ನ ಗೆಳತಿಯನ್ನು ಭೇಟಿಯಾಗಿ, ತಾನೂ ಜೀವನ ಪರ್ಯಂತ ನಿನ್ನೊಂದಿಗೆ ಇರುವುದಾಗಿ ಭರವಸೆ ನೀಡಿದ್ದಾನೆ. ನಿನ್ನ ಪ್ರೀತಿಗಾಗಿ ಪ್ರೀತಿಯಲ್ಲಿ ಹುಡುಗಿಯಿಂದ ಹುಡುಗನಾಗಿದ್ದೇನೆ. ಆದರೆ ಈ ಹೇಳಿಕೆ ಸೋನಾಲ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಸೊಹೇಲ್ ಹೇಳಿಕೊಂಡಿದ್ದಾನೆ’’ ಎಂದು ವಕೀಲ ಭಗವತ್ ಶರಣ್ ತಿವಾರಿ ಹೇಳಿದ್ದಾರೆ.
ಸನಾ(ಸುಹೇಲ್) ಹಲವು ಬಾರಿ ಮನವಿ ಮಾಡಿದರೂ (ಸೋನಾಲ್) ಹುಡುಗಿಯ ಹೃದಯ ಕದಲಲಿಲ್ಲ. ನಾನು ನಿನ್ನೊಂದಿಗೆ ಬಾಳಲು ಸಾಧ್ಯವಿಲ್ಲ. ತೊಂದರೆಯಾಗಿದ್ದರೆ ಹೋಗಿ ಮತ್ತೆ ಹುಡುಗಿಯಾಗು' ಎಂಬ ಮಾತನಾಡಿದ್ದಾರೆ ಈ ಮಾತು ಕೇಳಿದ ಸೊಹೇಲ್ ತುಂಬಾ ಪರಿತಪಿಸಿದ್ದಾರೆ. ಕೊನೆಗೆ ಯಾವುದೂ ಮಾರ್ಗ ತೋಚದಿದ್ದಕ್ಕೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ನ್ಯಾಯಾಲಯಕ್ಕೆ ದೂರು: ಸೆಪ್ಟೆಂಬರ್ 18 2017 ರಂದು, ಇಬ್ಬರೂ ಹುಡುಗಿಯರು ಒಪ್ಪಂದದಂತೆ ಮದುವೆಯಾಗಿದ್ದರು. ಇಬ್ಬರ ನಡುವೆ ಪ್ರೀತಿ ತುಂಬಾ ಇತ್ತು. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿ ತುಂಬಿದ ರೀಲ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ಮನಸ್ತಾಪ ಉಂಟಾದ ಬಳಿಕ , ಸನಾ ಖಾನ್ (ಅಲಿಯಾಸ್ ಸೊಹೈಲ್ ಖಾನ್) 30 ಮೇ 2022 ರಂದು ಮೊದಲ ಆನ್‌ಲೈನ್ ದೂರನ್ನು ದಾಖಲಿಸಿದ್ದರು. ಜೂನ್ 3 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಯಿತು. ಇದಾದ ಬಳಿಕ ಸೊಹೈಲ್ ಖಾನ್ ಹೇಳಿಕೆ ಆಧಾರದಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಸಾಕ್ಷಿಗಳಾದ ರಾಜು ಅಹಿರ್ವಾರ್ ಅಜಯ್ ಕುಮಾರ್ ಅವರ ಹೇಳಿಕೆಯನ್ನೂ ದಾಖಲಿಸಲಾಗಿದೆ.
ಸಾಕ್ಷಿ ಸಮೇತ ವಾರಂಟ್.. ವಾರಂಟ್ಗೆ ಡೋಂಟ್ ಕೇರ್: ರಾಜು ಅಹಿರ್ವಾರ್ ಅವರು ಚಾಲಕರಾಗಿದ್ದರು. ಅಂದು ಸೊಹೈಲ್ ಖಾನ್ ಅವರನ್ನು ಲಿಂಗ ಬದಲಾವಣೆಗೆ ಒಳಗಾಗಲು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ಹಿನ್ನೆಲೆಯಲ್ಲಿ ಈಗ ಸಾಕ್ಷಿ ಸಮೇತ ನ್ಯಾಯಾಲಯದಿಂದ ಸೋನಾಲ್ ಶ್ರೀವಾಸ್ತವ ಅವರಿಗೆ ಸಮನ್ಸ್ ಕಳುಹಿಸಲಾಗಿದೆ. ಆದರೆ ಸೋನಾಲ್ ಶ್ರೀವಾಸ್ತವ ಸಮನ್ಸ್ ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ವಾರಂಟ್ ನಂತರವೂ ಸೋನಾಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಬಳಿಕ ಸೋನಾಲ್ ಶ್ರೀವಾಸ್ತವ ಹೆಸರಿನಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
ಕೊನೆಗೂ ಆರೋಪಿ ಬಂಧಿಸಿದ ಪೊಲೀಸರು: ಜನವರಿ 18ರಂದು ಪೊಲೀಸರು ಸೋನಾಲ್ ಶ್ರೀವಾಸ್ತವ ಅವರನ್ನು ಆಕೆಯ ಸೋದರ ಮಾವ ಮನೀಶ್ ಗಾರ್ಗ್ ಅವರ ಮನೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯ ನಂತರ ಬಂಧನಕ್ಕೆ ಕಳುಹಿಸಲಾಗಿದೆ. ಜನವರಿ 19 ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೋನಾಲ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಜನವರಿ 19 ರ ಸಂಜೆ ಸೋನಾಲ್ ಜಾಮೀನು ಪಡೆದಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ. ಶಸ್ತ್ರಚಿಕಿತ್ಸೆಗೆ ಆರು ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎನ್ನುತ್ತಾರೆ ಸೋಹೆಲ್ ಖಾನ್.
ಸೋನಾಲ್ ಶ್ರೀವಾಸ್ತವ್ ಅವರೊಂದಿಗೆ ವಾಸಿಸುತ್ತಿದ್ದೆನು. ಆದರೆ ಅವಳು ತಡರಾತ್ರಿ ಮೊಬೈಲ್‌ನಲ್ಲಿ ಯಾರ ಜತೆಗೆ ರಹಸ್ಯವಾಗಿ ಮಾತನಾಡುತ್ತಿದ್ದಳು ಎಂದು ಸೋಹೆಲ್ ಖಾನ್ ದೂರಿದ್ದಾರೆ. ಆದರೆ ಸೋನಾಲ್ ಇದನ್ನೂ ವಿರೋಧಿಸಿದ್ದಾಳೆ. ಈ ವಿವಾದ ಇಲ್ಲಿಂದ ಪ್ರಾರಂಭವಾಗಿ, ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಅವರ ಮೇಲೆ ಹಲವು ರೀತಿಯಲ್ಲಿ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದನ್ನೂಓದಿ:ವಿಶ್ವದ ಅತಿ ಹಿರಿಯ ವ್ಯಕ್ತಿ ಮರಿಯಾ ಬ್ರನ್ಯಾಸ್ ಮೊರೆರಾ: ಇವರಿಗೀಗ 115 ವರ್ಷ!