ಪುಣೆ(ಮಹಾರಾಷ್ಟ್ರ): ನಮ್ಮ ಪ್ರೀತಿ ಪಾತ್ರರನ್ನು ಮದುವೆಯಾಗಲು ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಎಲ್ಜಿಬಿಟಿ (ಸಲಿಂಗಿಗಳು) ಗುಂಪುಗಳಿಂದ ಇಂದು ಪುಣೆಯಲ್ಲಿ ಪ್ರೈಡ್ ರ್‍ಯಾಲಿಯನ್ನು ಆಯೋಜಿಸಲಾಗಿತ್ತು.
ಇಂದು ಪುಣೆಯಲ್ಲಿ ಎಲ್ಜಿಬಿಟಿ ಸಮುದಾಯದಿಂದ ಹೆಮ್ಮೆಯ ನಡಿಗೆ ಎಂಬ ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ಪುಣೆಯ ಛತ್ರಪತಿ ಸಂಭಾಜಿ ಮಹಾರಾಜ್ ಗಾರ್ಡನ್‌ನಿಂದ ರ್‍ಯಾಲಿ ಆರಂಭವಾಯಿತು. ಡೆಕ್ಕನ್‌ಗೆ ಕಡೆಯಿಂದ ಛತ್ರಪತಿ ಸಂಭಾಜಿ ಮಹಾರಾಜ್ ಬಾಗ್‌ನೊಂದಿಗೆ ರ್‍ಯಾಲಿ ಕೊನೆಗೊಂಡಿದೆ.
ರ್‍ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಇವರನ್ನು ಪ್ರತಿನಿಧಿಸುವ ದೊಡ್ಡ ಧ್ವಜವನ್ನೂ ಹಿಡಿದಿದ್ದರು. ಎಲ್ಜಿಬಿಟಿ ಸಮುದಾಯದ ಬಗ್ಗೆ ಸಮಾಜದ ಮನೋಭಾವ ಬದಲಾಗಬೇಕು, ಅವರನ್ನು ಸಮಾನವಾಗಿ ಪರಿಗಣಿಸಬೇಕು. ಸೆಕ್ಷನ್ 377 ರ ರದ್ದತಿ ಹೊರತಾಗಿಯೂ, ಆ ಹಕ್ಕುಗಳನ್ನು ನಾವು ಹೊಂದಿಲ್ಲ. ಎಲ್‌ಜಿಬಿಟಿ ಸಮುದಾಯವನ್ನು ಸಮಾಜವು ದ್ವೇಷಿಸುವುದನ್ನು ತಡೆಯಲು ಈ ರ್‍ಯಾಲಿಯನ್ನು ಆಯೋಜಿಸಲಾಗಿದೆ ಎನ್ನುವುದು ಈ ಸಮುದಾಯವರ ಅಭಿಪ್ರಾಯ.
ನಮ್ಮ ಬಗ್ಗೆ ಜನರಿಗೆ ಇನ್ನೂ ತಪ್ಪು ಕಲ್ಪನೆಗಳಿವೆ. ನಾವು ಕೂಡ ಈ ಸಮುದಾಯದ ಭಾಗವಾಗಿದ್ದೇವೆ. ನಮಗೂ ಅದೇ ಹಕ್ಕುಗಳಿವೆ. ನಮ್ಮ ಹಕ್ಕುಗಳಿಗಾಗಿ ಬದುಕೋಣ. ಕಾನೂನು ಜಾರಿಗೆ ಬಂದಿದೆಯಾದರೂ ನಾವು ಪರಸ್ಪರ ಮದುವೆಯಾಗಲು ಸಾಧ್ಯವಿಲ್ಲ. ನಾವು ಬಯಸಿದರೂ ಸಹ ಮದುವೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಪರಸ್ಪರ ಮದುವೆಯಾಗಲು ಅವಕಾಶ ನೀಡಬೇಕು ಎಂದು ರ್‍ಯಾಲಿಯಲ್ಲಿದ್ದವರು ಆಗ್ರಹಿಸಿದರು.
ಕಳೆದ ಮೂರು ವರ್ಷಗಳಿಂದ ನಾವು ಜೋಡಿಯಾಗಿ ಒಟ್ಟಿಗೆ ವಾಸಿಸುತ್ತಿದ್ದೇವೆ. ಪ್ರೀತಿ ಎಂದರೆ ಪ್ರೀತಿ, ಅದು ಯಾರಿಗಾದರೂ ಆಗಬಹುದು. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ, ಸಮಾಜದಲ್ಲಿ ಬದುಕುತ್ತಿರುವ ನಮ್ಮನ್ನು ಜನ ಒಪ್ಪಿಕೊಳ್ಳುತ್ತಿಲ್ಲ. ನಾವಿಬ್ಬರೂ ಮದುವೆಯಾಗಲು ಬಯಸುತ್ತೇವೆ. ಆದರೆ, ಮನೆ ಮತ್ತು ಸಮಾಜ ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ನಮ್ಮನ್ನು ಸಮಾನವಾಗಿ ಕಾಣಿ ಎಂದು ಜೋಡಿಯೊಂದು ಅಳಲು ತೋಡಿಕೊಂಡಿದೆ.
ಇದನ್ನೂ ಓದಿ: 20 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಪರಿಸರ ಪ್ರೇಮಿ : ಪ್ರಕೃತಿ ಮಾತೆಗೆ ಸ್ವಯಂಸೇವಕ 'ಶ್ರೀರಾಮ್'!