ನವದೆಹಲಿ : ದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಬೇಕೆಂದು ಬಲವಾದ ಕೂಗು ಕೇಳಿ ಬರುತ್ತಿರುವ ವೇಳೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಮಾತನಾಡಿದ ಅವರು, ಪ್ರೀತಿ ಮತ್ತು ಜಿಹಾದ್ ಒಟ್ಟಾಗಿ ಇರುವುದಿಲ್ಲ. ಪ್ರೀತಿ ಎಂಬುದು ತುಂಬಾ ವೈಯಕ್ತಿಕವಾಗಿದೆ. ಚುನಾವಣೆಗೂ ಮೊದಲು ರಾಜಕೀಯ ವ್ಯಕ್ತಿಗಳು ಇಂತಹ ವಿಚಾರಗಳೊಂದಿಗೆ ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀವು ಯಾರೊಂದಿಗೆ ಇರಬೇಕೆಂಬುದು ವೈಯಕ್ತಿಕ ಆಯ್ಕೆಯಾಗಿದೆ. ಪ್ರೀತಿಯಲ್ಲಿರಿ ಮತ್ತು ಪರಸ್ಪರ ಪ್ರೀತಿಸಲು ಪ್ರಾರಂಭಿಸಿ. ಧರ್ಮವನ್ನೂ ರಾಜಕೀಯವಾಗಿಸಬೇಡಿ ಎಂದು ಈ ವೇಳೆ ನುಸ್ರತ್ ಜಹಾನ್ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಬಿಜೆಪಿ ಹಾಗೂ ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ಲವ್ ಜಿಹಾದ್ ಗಂಭೀರ ಸಮಸ್ಯೆಯಾಗಿದೆ ಎಂದಿದ್ದವು. ಇದರ ಜೊತೆಗೆ ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನುಸ್ರತ್ ಜಹಾನ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.